
ಬೆಂಗಳೂರು:ಪತ್ರಕರ್ತರು ತಮ್ಮ ವೃತ್ತಿಜೀವನದಲ್ಲಿ ಛಾಪನ್ನು ಒತ್ತ ಬೇಕಾದರೆ ವೃತ್ತಿಜೀವನದಲ್ಲಿ ಶ್ರಮ ಮತ್ತು ಬದ್ಧತೆಗಳನ್ನು ದಿನವೂ ಪ್ರದರ್ಶಿಸಬೇಕಾಗುತ್ತದೆ ಎಂದು ಹಿರಿಯ ಪತ್ರಕರ್ತರಾದ ಭಾಸ್ಕರ ರಾವ್ ಅಭಿಪ್ರಾಯಪಟ್ಟರು.ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಹಿರಿಯ ಪತ್ರಕರ್ತರಾದ ಎಂ.ಕೆ.ಬಾಸ್ಕರ ರಾವ್ ಅವರನ್ನು ಜೆಪಿ ನಗರದಲ್ಲಿರುವ ಅವರ ಮನೆಯಂಗಳಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂೃಜೆ)ದ ಗೌರವ ಸ್ವೀಕರಿಸಿ ಮಾತನಾಡಿದರು.ಎಲ್ಲಾ ಪತ್ರಕರ್ತರು ಧರ್ಮ, ಜಾತಿ, ಪಕ್ಷ ಸೇರಿದಂತೆ ಸಮಾಜದ ವ್ಯವಸ್ಥೆಯಿಂದ ಹೊರಗುಳಿದು, ಸಾಮಾಜಿಕ ಅಭಿವೃದ್ಶಿಗೆ ಕಂಕಣಬದ್ಧರಾಗಬೇಕು ಎಂದು ಅವರು ನುಡಿದರು.ರಾಷ್ಟ್ರೀಯ ಪತ್ರಿಕಾ ದಿನಾಚರಣೆ ದಿನವೇ ತಮಗೆ ಈ ಗೌರವ ದೊರೆತಿರುವುದು ತವರಿನಿಂದ ಬಂದ ಅಭಿಮಾನದ ಸನ್ಮಾನ ಎಂದು ಭಾವುಕರಾದರು.ಕನ್ನಡ ಪತ್ರಿಕೋದ್ಯಮಕ್ಕೆ ಡಿವಿಜಿ, ತೀ.ತ.ಶರ್ಮ, ಖಾದ್ರಿ ಶಾಮಣ್ಣ, ಟಿಎಸ್‌ಆರ್, ಹಿರಿಯ ಸಾಹಿತಿ ತರಾಸು ಸೇರಿದಂತೆ ವಿವಿಧ ಗಣ್ಯರ ಕೊಡುಗೆ ಅಪಾರ. ಇಂಥ ಮಹನೀಯರ ಮಾರ್ಗದರ್ಶನದಲ್ಲಿ ಕನ್ನಡದ ಪತ್ರಿಕೋದ್ಯಮ ಉಜ್ವಲವಾಗಿ ಬೆಳೆದು ಬಂದಿದೆ ಎಂದರು.ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷರಾದ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ಪ್ರೆಸ್ ಕೌನ್ಸಿಲ್ ರಚನೆಯಾದ ದಿನವನ್ನು ರಾಷ್ಟ್ರೀಯ ಪತ್ರಕರ್ತರ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತಿದೆ. ಇದೇ ದಿನ ಕೆಯುಡಬ್ಲೂೃಜೆ ಹಿರಿಯ ಪತ್ರಕರ್ತರಿಗೆ ಗೌರವ ಸಮರ್ಪಣೆ ಮಾಡುತ್ತಿರುವುದು ಶ್ಲಾಘನೀಯ.ಪತ್ರಕರ್ತರು ಸಂಘಟಿತರಾಗಿ ಸಾಂಕ ರಚನಾತ್ಮಕ ಕಾರ್ಯಗಳಲ್ಲಿ ಸದಾ ತೊಡಗಿಕೊಳ್ಳಬೇಕು ಎಂದರು.ಕೆಯುಡಬ್ಲೂೃಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಹಿರಿಯ ಪತ್ರಕರ್ತರಾದ ಕಂ.ಕ.ಮೂರ್ತಿ ಮಾತನಾಡಿ, ಹಿರಿಯ ಪತ್ರಕರ್ತರ ಅನುಭವಗಳು ಸಮಾಜಕ್ಕೆ ಬೆಳಕಾಗುತ್ತವೆ ಎಂದರು.ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ದೇವರಾಜ್, ಬೆಂಗಳೂರು ನಗರ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಶರಣ ಬಸಪ್ಪ ಹಾಜರಿದ್ದರು.ಇದೇ ಸಂದರ್ಭದಲ್ಲಿ ಎಂ.ಕೆ. ಭಾಸ್ಕರ ರಾವ್ ಅವರ ಪತ್ನಿ ಜಯಾ ಅವರನ್ನು ಸನ್ಮಾನಿಸಲಾಯಿತು. ಅವರ ಪುತ್ರಿ ಅನುಷಾರಾವ್ ಹಾಜರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 15 =
Remember me
