| ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಚಿತ್ರದುರ್ಗ ಸೇರಿ ಬಯಲುಸೀಮೆ ಜಿಲ್ಲೆಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಶೀಘ್ರವೇ ರಾಷ್ಟ್ರೀಯ ಯೋಜನೆ ಎಂದು ಘೊಷಣೆಯಾಗಲಿದೆ. ಕೇಂದ್ರ ಜಲ ಆಯೋಗ ಇದಕ್ಕೆ ಸಮ್ಮತಿ ಸೂಚಿಸಿದ ಕಾರಣ ಅಪ್ಪರ್ ಭದ್ರಾ ಕರ್ನಾಟಕದ ಮೊಟ್ಟ ಮೊದಲ ರಾಷ್ಟ್ರೀಯ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದರಿಂದ ಶೇ.90:10ರ ಅನುಪಾತದಲ್ಲಿ ಕೇಂದ್ರ ಸರ್ಕಾರ 16,125 ಕೋಟಿ ರೂ. ನೀಡಲಿದ್ದು ಕೋವಿಡ್ ಕಷ್ಟ ಕಾಲದಲ್ಲಿ ರಾಜ್ಯದ ಕೈ ಹಿಡಿದಂತಾಗಿದೆ.
ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳ 2.25 ಲಕ್ಷ ಹೆಕ್ಟೇರ್​ಗೆ ನೀರೊದಗಿಸುವ 21,473 ಕೋಟಿ ರೂ. ವೆಚ್ಚದ ಈ ಯೋಜನೆಗೆ ಕೇಂದ್ರ ಜಲ ಆಯೋಗದ ತಾಂತ್ರಿಕ ಸಲಹಾ ಸಮಿತಿ ನ್ಯಾಷನಲ್ ಪ್ರಾಜೆಕ್ಟ್ ಮಾನ್ಯತೆ ನೀಡಿದೆ. ಒಂದೂವರೆ ದಶಕದಿಂದ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ವ್ಯಾಪ್ತಿಗೆ ಸೇರಿಸಲು ಒತ್ತಾಯ ಮಾಡುತ್ತ ಬಂದಿದ್ದ ರಾಜ್ಯದ ಬೇಡಿಕೆಗೆ ಕೊನೆಗೂ ಮನ್ನಣೆ ಸಿಕ್ಕಿದೆ.
ಹಣಕಾಸು ಇಲಾಖೆಯ ಸಹಮತ ದೊರಕುತ್ತಿದ್ದಂತೆ ಸಂಪುಟದಲ್ಲಿ ಈ ವಿಷಯ ಚರ್ಚೆಯಾಗಲಿದೆ. ಆನಂತರ ರಾಜ್ಯ ಸರ್ಕಾರದ ಒಪ್ಪಿಗೆ ಆಧರಿಸಿ ರಾಷ್ಟ್ರೀಯ ಯೋಜನೆ ಎಂದು ಕೇಂದ್ರವು ಘೊಷಿಸಲಿದೆ. ಇದರಿಂದ ಸೂಕ್ಷ್ಮ ನೀರಾವರಿ ಅನುಷ್ಠಾನದ 5348 ಕೋಟಿ ರೂ. ಹೊರತುಪಡಿಸಿ ಉಳಿದ 16.125 ಕೋಟಿ ರೂ. (ಶೇ.90:10) ಅನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಕ್ಷ್ಮ ನೀರಾವರಿ ಸೇರಿ ಶೇ.10 ಭರಿಸಲಿದೆ.
ರಾಜ್ಯಸರ್ಕಾರ 2018-19ರ ಎಸ್​ಆರ್ ದರದಲ್ಲಿ 4180 ಕೋಟಿ ರೂ. ವೆಚ್ಚ ಮಾಡಿದೆ. ಇದರಲ್ಲಿ ಖರ್ಚಾದ 2000 ಕೋಟಿ ರೂ. ಹೊರತುಪಡಿಸಿ ಉಳಿದ 14,125 ಕೋಟಿ ರೂ. ಅನ್ನು ಕೇಂದ್ರವು ರಾಜ್ಯಕ್ಕೆ ಬಿಡುಗಡೆ ಮಾಡಲಿದೆ.
12 ನಿರ್ದೇಶನಾಲಯಗಳ ಒಪ್ಪಿಗೆ:ಕೇಂದ್ರದ 12 ನಿರ್ದೇಶನಾಲಯಗಳ ಸುದೀರ್ಘ ಪರಿಶೀಲನೆ ಬಳಿಕ ರಾಷ್ಟ್ರೀಯ ಯೋಜನೆಗೆ ಪರಿಗಣನೆಯಾಗಿದೆ. ಕೃಷಿ ಸಚಿವಾಲಯ, ಅಂತರ್ಜಲ ಅಂಶ, ಪರಿಸರ ತಿರುವಳಿ, ಅರಣ್ಯ ತಿರುವಳಿ, ರಾಷ್ಟ್ರೀಯ ವನ್ಯಜೀವಿ, ಅಂತರರಾಜ್ಯ ವಿಷಯ, ಹೈಡ್ರಾಲಜಿ, ಇರಿಗೇಷನ್ ಪ್ಲಾನಿಂಗ್,ಬ್ಯಾರೇಜ್ ಮತ್ತು ಕಾಲುವೆ ವಿನ್ಯಾಸ ಹಾಗೂ ಸಿಎಸ್​ಎಂಆರ್​ಎಸ್ ನಿರ್ದೇಶನಾಲಯಗಳು ಒಪ್ಪಿವೆ. ಡಿ.2ರಂದು ನಡೆದ ವಿಶ್ವೇಶ್ವರಯ್ಯ ಜಲ ನಿಗಮದ ಆಡಳಿತ ಮಂಡಳಿ ಸಭೆಯೂ ಸಹಮತ ಸೂಚಿಸಿದೆ. ಚೆಂಡೀಗ ರಾಜ್ಯ ಹಣಕಾಸು ಇಲಾಖೆ ಮುಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − nine =
Remember me
