ಬೆಂಗಳೂರು: ಬಿಎಂಟಿಸಿಗೆ ಮೆಟ್ರೋ ಫೀಡರ್ ಕ್ಯೂಆರ್ ಸ್ಕಾೃನರ್ ನಾಮ ನಿದೇರ್ಶನಕ್ಕೆ ಸ್ಕಾಚ್ ಸಂಸ್ಥೆಯಿಂದ ಆರ್ಡರ್ ಆ್ ಮೇರಿಟ್ ಎಂಬ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.ನಗರದ ಮೆಟ್ರೋ ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ತಂತ್ರಜ್ಞಾನವನ್ನು ಪರಿಚಿಯಿಸಿದ್ದು, ಅತ್ಯಂತ ಸುಲಭವಾಗಿ ಮೆಟ್ರೋ ಫೀಡರ್‌ಗಳ ಸೇವೆಗಳ ಮಾಹಿತಿಯನ್ನು ಪಡೆಯಬಹುದಾಗಿದೆ.ಗುರುವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬಿಎಂಟಿಸಿಗೆ ಮೆಟ್ರೊ ಫೀಡರ್ ಕ್ಯೂಆರ್ ಸ್ಕ್ಯಾನರ್ ನಾಮನಿರ್ದೇಶನಕ್ಕೆ ಪ್ರತಿಷ್ಠಿತ ರಾಷ್ಟ್ರೀಯ ಸ್ಕಾಚ್ ಸಂಸ್ಥೆಯಿಂದ ಆರ್ಡರ್ ಆಫ್ ಮೇರಿಟ್ ಪ್ರಶಸ್ತಿ ಲಭಿಸಿರುವ ಕಾರಣಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಭಿನಂದನೆ ಸಲ್ಲಿಸಿದರು.ಮೆಟ್ರೊ ಫೀಡರ್ ಕ್ಯೂಆರ್ ಸ್ಕ್ಯಾನರ್ ಅತ್ಯಂತ ಸುಲಭವಾಗಿ ಮೆಟ್ರೋ ಫೀಡರ್‌ಗಳ ಸೇವೆಗಳ ಮಾಹಿತಿಯನ್ನು ಪಡೆಯುವ ಅನುಕೂಲತೆಯನ್ನು ಹೆಚ್ಚಿಸುವಲ್ಲಿ ಉತ್ತಮ ಹೆಜ್ಜೆಯಾಗಿದೆ. ಮೆಟ್ರೊ ಫೀಡರ್ ಕ್ಯೂಆರ್ ಬಳಕೆಯೊಂದಿಗೆ, ಸಾರ್ವಜನಿಕ ಪ್ರಯಾಣಿಕರಿಗೆ ಮೆಟ್ರೊ ನಿಲ್ದಾಣವಾರು ಆಚರಣೆಯಾಗುವ ಮೆಟ್ರೊ ಫೀಡರ್‌ಗಳ ಸೇವೆಗಳ ವೇಳಾಪಟ್ಟಿ, ಮಾರ್ಗ, ಬಸ್ಸುಗಳ ನೈಜ-ಸಮಯ ಮಾಹಿತಿ ದೊರೆಯುತ್ತದೆ. ಈ ವೈಶಿಷ್ಟ್ಯದಿಂದ ಬಳಕೆದಾರರು ಪ್ರಯಾಣವನ್ನು ಪರಿಣಾಮಕಾರಿಯಾಗಿ ಯೋಜಿಸಿಕೊಂಡು, ತಡೆರಹಿತ ಮತ್ತು ಆರಾಮದಾಯಕವಾಗಿ ತಮ್ಮ ಪ್ರಯಾಣದ ಅನುಭವವನ್ನು ಪಡೆಯಬಹುದಾಗಿರುತ್ತದೆ ಎಂದು ಸಚಿವರು ಹೇಳಿದರು.ಇದೇ ವೇಳೆ ಬಿಎಂಟಿಸಿ ನೌಕರರ/ಅಧಿಕಾರಿಗಳ ೨೦೨೩-೨೦೨೪ನೇ ಸಾಲಿನ ಭವಿಷ್ಯ ನಿಧಿ ಹಾಗೂ ಐಚ್ಚಿಕ ಭವಿಷ್ಯ ನಿಧಿ ಚೀಟಿಗಳನ್ನು ಅಂತರ್ಜಾಲದಲ್ಲಿ ವೀಕ್ಷಿಸುವ ಸೌಲಭ್ಯವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅನಾವರಣಗೊಳಿಸಿದರು.ಗಣಕ ಇಲಾಖೆಯ ಸಹಯೋಗದೊಂದಿಗೆ ತಂತ್ರಜ್ಞಾನವನ್ನು ಬಳಸಿ ಭವಿಷ್ಯನಿಧಿಯ ಚೀಟಿಗಳನ್ನು ಸಂಸ್ಥೆಯಿಂದ ಅಭಿವೃದ್ಧಿಪಡಿಸಿರುವ ಸಿಬ್ಬಂದಿ ನಿರ್ವಹಣಾ ವ್ಯವಸ್ಥೆ ಮುಖಾಂತರ ೨೦೨೨-೨೦೨೩ನೇ ಸಾಲಿನಿಂದ ಪ್ರಾಯೋಗಿಕವಾಗಿ ಆಂತರಿಕವಾಗಿಯೇ ಪತ್ರಿ ನೌಕರನು ತನ್ನ ಮೊಬೈಲ್‌ನಲ್ಲಿಯೇ ಆತನ ಪಿ.ಎಫ್ ಸಂಖ್ಯೆಯನ್ನು ನಮೂದಿಸಿ ತಮ್ಮ ಖಾತೆಯಲ್ಲಿರುವ ಪಿ.ಎಫ್, ವಿ.ಪಿ.ಎಫ್ ಬಡ್ಡಿ ಮೊತ್ತ ಮತ್ತು ಮುಂಗಡಗಳ ವಿವರಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ.ಈ ಸಂದಭರ್ದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಆರ್. ರಾಮಚಂದ್ರನ್ ಇತರರು ಹಾಜರಿದ್ದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
