ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿಕೊಡಗಿನ ಪ್ರಕೃತಿ ವಿಕೋಪ ಸಂತ್ರಸ್ತರ ಹೆಸರಿನಲ್ಲಿ ಮೈಸೂರಿನ ಬಿಷಪ್ ಕೆ.ವಿಲಿಯಂ ನೇತೃತ್ವದಲ್ಲಿ ಸಂಗ್ರಹಿಸಿದ್ದಾರೆ ಎನ್ನಲಾಗಿರುವ 49.50 ಕೋಟಿ ರೂ. ಏನಾಯಿತೆಂಬ ಪ್ರಶ್ನೆಯನ್ನು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕಲ್ ಎಫ್. ಸಾಲ್ಡಾನ್ಹಾ ಎತ್ತಿದ್ದಾರೆ.
2018 ರ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರ ನೀಡಲು ಸಂಗ್ರಹಿಸಿದ ಹಣಕ್ಕೆ ಸಂಬಂಧಿಸಿದಂತೆ ಮೈಸೂರು ಬಿಷಪ್ ಕೆ. ವಿಲಿಯಂ, ಬೆಂಗಳೂರಿನ ಬಿಷಪ್ ಪೀಟರ್ ಮಚ್ಚಾಡೋ ಅವರಿಗೆ ಜೂ.9 ರಂದು ಮುಂಬೈಯಲ್ಲಿ ನೆಲೆಸಿರುವ ನಿವೃತ್ತ ನ್ಯಾಯಮೂರ್ತಿ 9 ಪುಟಗಳ ಪತ್ರ ಬರೆದಿದ್ದಾರೆ.
ಕೊಡಗಿನವರು ತುಂಬಾ ಒಳ್ಳೆಯವರು. ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾನು ಕ್ರಿಶ್ಚಿಯನ್ ಜತೆಗೆ ಕಾವೇರಿ ಭಕ್ತ. ನನಗೆ ಕೊಡಗಿನಲ್ಲಿ ಅನೇಕ ಸ್ನೇಹಿತರಿದ್ದಾರೆ. ವರ್ಷಕ್ಕೊಮ್ಮೆ ತಲಕಾವೇರಿ ಕ್ಷೇತ್ರಕ್ಕೆ ಭೇಟಿ ನೀಡಿ ತಾಯಿ ಕಾವೇರಿಯನ್ನು ಪ್ರಾರ್ಥಿಸುತ್ತೇನೆ. ಕೊಡಗಿನವರ ಹೆಸರಿನಲ್ಲಿ ಬಿಷಪ್ 49.50 ಕೋಟಿ ರೂ. ಸಂಗ್ರಹಿಸಿದ್ದು, ಈ ಹಣ ಏನಾಯಿತೆಂದು ಗೊತ್ತಾಗಬೇಕಾಗಿದೆ. ನ್ಯಾಯ ಸಿಗುವವರೆಗೂ ಈ ವಿಷಯದ ಬಗ್ಗೆ ಗಟ್ಟಿ ಧ್ವನಿ ಎತ್ತಬೇಕೆಂದು ವಿಜಯವಾಣಿಗೆ ಸಾಲ್ಡಾನ್ಹಾ ಮನವಿ ಮಾಡಿದ್ದಾರೆ.
ಟಿಂಬರ್ ಮಾಫಿಯದ ಪ್ರಭಾವದಿಂದ ಕೊಡಗಿನಲ್ಲಿ ವ್ಯಾಪಕವಾಗಿ ಮರ ಕಡಿದಿದ್ದರಿಂದ 2018 ರಲ್ಲಿ ಭೂಕುಸಿತ ಉಂಟಾಗಿತ್ತು. 2,400ಕ್ಕೂ ಹೆಚ್ಚು ಜನ ಮನೆ ಕಳೆದುಕೊಂಡಿದ್ದಾರೆ. ಜಾನುವಾರು, ಆಸ್ತಿಪಾಸ್ತಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಡಗಿನ ಸಂತ್ತಸ್ತರಿಗೆ ಸಹಾಯ ಮಾಡುವಂತೆ ನಾನು ಬಿಷಪ್‌ಗಳಿಗೆ ಮನವಿ ಮಾಡಿಕೊಂಡಿದ್ದೆ ಎಂದು ಮಾಹಿತಿ ನೀಡಿದ್ದಾರೆ.
ಬಿಷಪ್ ಕೆ. ವಿಲಿಯಂ ಮುಂದಾಳತ್ವದಲ್ಲಿ ಕೊಡಗಿನ ಬೆಳೆಗಾರರು, ಕ್ಯಾಥೊಲಿಕ್, ನಾನ್ ಕ್ಯಾಥೊಲಿಕ್ ಸಮುದಾಯದವರಿಂದ 1.50 ಕೋಟಿ ರೂ. ಸಂಗ್ರಹಿಸಲಾಗಿದೆ. ಮಂಗಳೂರಿನಲ್ಲಿ 3.50 ಕೋಟಿ ರೂ. ಸಂಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಬಿಷಪ್ ವಿಲಿಯಮ್, ಪೀಟರ್ ಮಚ್ಚಾಡೊ ಅವರೊಂದಿಗೆ ಸೇರಿ 6 ಕೋಟಿ ರೂ. ಸಂಗ್ರಹಿಸಿದ್ದಾರೆ. ಬೆಂಗಳೂರಿನ ಸಂತ ಜೋಸೆಫರ ಪ್ರೌಢಶಾಲಾ ಮೈದಾನದಲ್ಲಿ ಸೋನು ನಿಗಮ್ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡುವುದರ ಮೂಲಕ 13 ಕೋಟಿ ರೂ. ಸಂಗ್ರಹಿಸಲಾಗಿದೆ. ಸೇವಾರ್ಥವಾಗಿ ಸೋನು ನಿಗಮ್ ಗೌರವಧನ ಸ್ವೀಕರಿಸದೆ ಉಚಿತವಾಗಿ ಪಾಲ್ಗೊಂಡಿದ್ದರು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮಡಿಕೇರಿ, ಮಂಗಳೂರು, ಬೆಂಗಳೂರು ಸೇರಿ ವಿವಿಧೆಡೆ ಸಂಗ್ರಹವಾಗುತ್ತಿದ್ದ ಹಣದ ಮಾಹಿತಿ ಬಿಷಪ್ ವಿಲಿಯಂ ಪ್ರತಿ ವಾರ ಮೈಸೂರು ಚರ್ಚ್‌ನಲ್ಲಿ ನೀಡುತ್ತಿದ್ದರು. 18 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಿಸಲಾಗುವುದು. ಆರ್ಥಿಕ ಶಕ್ತಿ ವೃದ್ಧಿಸಲು ಪಶುಸಂಗೋಪನೆ ಸೇರಿ ವಿವಿಧ ಚಟುವಟಿಕೆಗೆ ಬೆಂಬಲ ನೀಡುವುದಾಗಿ ಹೇಳಿದ್ದರು. ಆದರೆ, ಪ್ರಕೃತಿ ವಿಕೋಪ ಸಂಭವಿಸಿ 24 ತಿಂಗಳು ಕಳೆದಿದ್ದರೂ ಏನೂ ಮಾಡಿಲ್ಲ ಎಂದು ಸಾಲ್ಡಾನ್ಹಾ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
