ಬೆಂಗಳೂರು: ಹವಾಮಾನ ವೈಪರೀತ್ಯದಿಂದ ಜನರಲ್ಲಿ ನೆಗಡಿ, ಕೆಮ್ಮು ಸಮಸ್ಯೆ ಹೆಚ್ಚಾಗುತ್ತಿದೆ. ಮಳೆಗಾಲದಲ್ಲಿ ಈ ಸಮಸ್ಯೆ ಸರ್ವೆಸಾಮಾನ್ಯವಾಗಿದೆ. ಅಡುಗೆಮನೆಯಲ್ಲಿ ಇರುವ ಕೆಲವು ಮಸಾಲೇ ಪದಾರ್ಥಗಳನ್ನು ಬಳಸಿಕೊಂಡು ಶೀತ ಮತ್ತು ಕೆಮ್ಮನ್ನು ತಕ್ಷಣವೇ ಹೋಗಲಾಡಿಸುವುದು ಹೇಗೆ ಎಂದು ತಿಳಿಯೋಣವೇ?…
ಇದನ್ನೂ ಓದಿ:ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಒಂದು ವರ್ಷ ಹೆರಿಗೆ ರಜೆ ಘೋಷಿಸಿದ ಸಿಕ್ಕಿಂ ಸರ್ಕಾರ
ಕೆಮ್ಮು ಮತ್ತು ನೆಗಡಿ ಯಾವುದೇ ಋತುವಿನಲ್ಲಿ ಬರಬಹುದು, ಆದರೆ ಈ ಸಣ್ಣ ಸಮಸ್ಯೆಗೆ ಪ್ರತಿ ಬಾರಿ ವೈದ್ಯರ ಬಳಿ ಓಡುವ ಅಗತ್ಯವಿಲ್ಲ, ಏಕೆಂದರೆ ಅದರ ಚಿಕಿತ್ಸೆಗೆ ಮದ್ದು ನಮ್ಮ ಮನೆಯ ಅಡುಗೆಮನೆಯಲ್ಲಿಯೇ ಇರುತ್ತದೆ. ಭಾರತೀಯರ ಅಡುಗೆಮನೆಯ ಮಸಾಲೆ ಪೆಟ್ಟಿಗೆಯಲ್ಲಿರುವ ಮಸಾಲೆಗಳು ಔಷಧೀಯ ಗುಣಗಳಿಂದ ತುಂಬಿವೆ.
ಇದನ್ನೂ ಓದಿ:24 ಕೋಟಿ ರೂ. ಬೆಲೆ ಬಾಳುವ ಎಮ್ಮೆ; ಗೋಡಂಬಿ, ಬಾದಾಮಿ, ತುಪ್ಪ ತಿನ್ನುವ ಇದರ ವೀರ್ಯದಿಂದ ಬರುತ್ತದೆ ಲಕ್ಷಗಟ್ಟಲೆ ಆದಾಯ
ಮನೆ ಮದ್ದು:ಅಡುಗೆ ಮನೆಗಳಲ್ಲಿರುವ ಅರಿಶಿನ ಆಂಟಿ ಆಕ್ಸಿಡೆಂಟ್ (ಉತ್ಕರ್ಷಣ ನಿರೋಧಕ) ಗುಣವನ್ನು ಹೊಂದಿದ್ದು, ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಬೆಚ್ಚಗಿನ ಹಾಲಿನಲ್ಲಿ ಚಿಟಿಕೆಯಷ್ಟು ಅರಿಶಿನ ಬೆರೆಸಿ ಕುಡಿಯಿರಿ. ಇದು ಶೀತ ಮತ್ತು ಕೆಮ್ಮಿನ ವಿರುದ್ಧ ಹೋರಾಡಲು ಜನಪ್ರಿಯ ಮತ್ತು ಪರಿಣಾಮಕಾರಿ ಮದ್ದಾಗಿದೆ.
ತುಳಸಿ, ಶುಂಠಿ ಮತ್ತು ಕರಿಮೆಣಸು ಸೇರಿಸಿ ಮಾಡಿದ ಮಸಾಲೆಯುಕ್ತ ಚಹಾ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಕೆಮ್ಮಿನ ವಿರುದ್ಧ ಹೋರಾಡುವಲ್ಲಿ ಈ ಮೂರು ಪದಾರ್ಥಗಳು ಪ್ರಮುಖ ಪಾತ್ರವಹಿಸುತ್ತವೆ.
ಇದನ್ನೂ ಓದಿ:ಅಂದು 3 ಕಾಲಿನ ಕರು ಜನನ, ಇಂದು ಗುಡೇಕೋಟೆಯಲ್ಲಿ ಎರಡು ಕಾಲಿನ ಕರುವಿಗೆ ಜನ್ಮ ಕೊಟ್ಟ ಹಸು
ಕೆಮ್ಮಿನೊಂದಿಗಿನ ಕಫದ ಸಮಸ್ಯೆ ಇದ್ದರೆ ಒಂದು ಚಮಚ ಜೇನುತುಪ್ಪಕ್ಕೆ ಕಾಳು ಮೆಣಸು ಬೆರೆಸಿ ಸೇವಿಸಿ. ಇದನ್ನು ತಿನ್ನುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ.
ಸ್ವಲ್ಪ ಬೆಚ್ಚಗಿರುವ ನೀರಿಗೆ ನಿಂಬೆ ರಸ, ಜೇನುತುಪ್ಪವನ್ನು ಸೇರಿಸಿ ಕುಡಿಯುವುದು ಸಾಮಾನ್ಯ ಶೀತ ಮತ್ತು ಕೆಮ್ಮನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ತುಪ್ಪದಲ್ಲಿ ಕೆಲವು ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಹುರಿಯಿರಿ. ಇದು ಬೆಚ್ಚಗಿರುವಾಗಲೇ ಸೇವಿಸಿ. ಇದು ಕಹಿಯಾಗಬಹುದು. ಆದರೆ ನೆಗಡಿ ಮತ್ತು ಕೆಮ್ಮಿಗೆ ಹಿತವಾದ ಪರಿಣಾಮ ಬೀರುತ್ತದೆ.
24 ಕೋಟಿ ರೂ. ಬೆಲೆ ಬಾಳುವ ಕೋಣ; ಗೋಡಂಬಿ, ಬಾದಾಮಿ, ತುಪ್ಪ ತಿನ್ನುವ ಇದರ ವೀರ್ಯದಿಂದ ಬರುತ್ತದೆ ಲಕ್ಷಗಟ್ಟಲೆ ಆದಾಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 4 =
Remember me
