|ಡಾ.ಗಣಪತಿ ಹೆಗಡೆ
ನವರಾತ್ರಿಯ ಏಳನೆಯ ದಿನ ಅಂದರೆ ಆಶ್ವಯುಜ ಶುಕ್ಲಪಕ್ಷದ ಸಪ್ತಮಿಯ ದಿನ ದುರ್ಗಾದೇವಿಯನ್ನು ಕಾಲರಾತ್ರಿಯ ರೂಪದಲ್ಲಿ ಆರಾಧನೆ ಮಾಡಲಾಗುತ್ತದೆ. ಅಂದಿನ ರಾತ್ರಿಯನ್ನು ‘ಕಾಲರಾತ್ರಿ’ ಎಂದೇ ಕರೆಯುತ್ತಾರೆ.
ಒಂದೇ ಜಡೆ, ಹರಡಿದ ಕೂದಲು, ಎಣ್ಣೆಯಿಂದ ಒದ್ದೆಯಾದ ಶರೀರ, ನಗ್ನರೂಪಿಣಿ, ಕತ್ತೆಯನ್ನು ಏರಿದವಳಾಗಿ, ಕಪ್ಪುಬಣ್ಣದ ಶರೀರದವಳಾಗಿ ಭಯಂಕರಸ್ವರೂಪವನ್ನು ಹೊಂದಿರುವವಳು ಕಾಲರಾತ್ರಿ. ನಾಲ್ಕು ಕೈಗಳಿರುವ ಕಾಲರಾತ್ರಿಯು ಅಭಯಮುದ್ರೆ, ಕಬ್ಬಿಣದ ಮುಳ್ಳು, ಖಡ್ಗ ಹಾಗೂ ಆಶೀರ್ವಾದ ಮುದ್ರೆಯನ್ನು ತೋರುತ್ತಿದ್ದಾಳೆ. ಇವಳು ಸಜ್ಜನರಿಗೆ ಸದಾ ಶುಭಫಲಗಳನ್ನು ಕರುಣಿಸುತ್ತಾಳೆ ಎಂಬ ಕಾರಣಕ್ಕೆ ಇವಳನ್ನು ‘ಶುಭಂಕರೀ’ ಎಂದು ಕರೆದಿದ್ದಾರೆ. ಅದೇ ರೀತಿ ಅವಳು ಕಾಲರಾತ್ರಿಯಾಗಿ ದುಷ್ಟರನ್ನು ಶಿಕ್ಷಿಸುತ್ತಾಳೆ. ಕಾಲರಾತ್ರಿಯ ಆರಾಧನೆಯಿಂದ ಗ್ರಹಬಾಧೆಗಳು ಕಳೆಯುತ್ತದೆ, ಅಗ್ನಿ, ಜಲ, ಶತ್ರುಭಯಗಳು ದೂರಾಗುತ್ತವೆ. ಅಂದು ಸಾಧಕರು, ಯೋಗಿಗಳು ಮನಸ್ಸನ್ನು ಸಹಸ್ರಾರ ಚಕ್ರದಲ್ಲಿ ಕೇಂದ್ರೀಕರಿಸಿ ಆರಾಧನೆ ಮಾಡುತ್ತಾರೆ. ಇದರಿಂದ ಜಗತ್ತಿನ ಎಲ್ಲ ಸಿದ್ಧಿಗಳು ಅವರಿಗೆ ಲಭ್ಯವಾಗುತ್ತವೆ.
‘ಯಾವ ದೇವಿಯು ಸಕಲ ಚರಾಚರ ಭೂತಗಳಲ್ಲಿ ಶ್ರದ್ಧೆಯ ರೂಪದಲ್ಲಿ ನೆಲೆಸಿರುವಳೋ ಅಂತಹ ದೇವಿಗೆ ನಮಸ್ಕಾರ’ ಎಂಬ ಅರ್ಥವನ್ನು ಕೊಡುವ
ಯಾ ದೇವೀ ಸರ್ವಭೂತೇಷು ಶ್ರದ್ಧಾರೂಪೇಣ ಸಂಸ್ಥಿತಾ|
ನಮಸ್ತಸೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||
ಎಂಬ ಶ್ಲೋಕವನ್ನು ಶ್ರದ್ಧಾಭಕ್ತಿಗಳಿಂದ 11 ಬಾರಿ ಹೇಳಿಕೊಂಡು ದೇವಿಗೆ ನಮಸ್ಕರಿಸಿ, ಪ್ರಾರ್ಥಿಸಿದರೆ ಆರಾಧಿಸುವವರ ಮನಸ್ಸಿನ ಕಾಮನೆಗಳು ಈಡೇರುತ್ತವೆ.
‘ಎಲ್ರೂ ನನ್ನ ಶವ ನೋಡಲು ಬನ್ನಿ, ಇಲ್ಲಂದ್ರೆ ದೆವ್ವ ಆಗಿ ಬರ್ತೀನಿ’; ಡೆತ್​ನೋಟ್​ನಲ್ಲಿತ್ತು ಈ ಕೊನೇ ಆಸೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − thirteen =
Remember me
