|ಡಾ.ಗಣಪತಿ ಹೆಗಡೆ
ಚಂದ್ರಹಾಸೋಜ್ಜ್ವಲಕರಾ ಶಾರ್ದೂಲವರವಾಹನಾ|
ಕಾತ್ಯಾಯನೀ ಶುಭಂ ದದ್ಯಾತ್ ದೇವೀ ದಾನವಘಾತಿನೀ||
ನವರಾತ್ರಿಯ ಆರನೆಯ ದಿನ ಅಂದರೆ ಆಶ್ವಯುಜ ಶುಕ್ಲ ಷಷ್ಠಿಯಂದು ದುರ್ಗಾದೇವಿಯನ್ನು ಕಾತ್ಯಾಯನಿ ರೂಪದಲ್ಲಿ ಪೂಜಿಸುತ್ತೇವೆ. ಕಾತ್ಯಾಯನಿ ದೇವಿಗೆ ನಾಲ್ಕು ಭುಜಗಳಿವೆ. ಬಲಗಡೆಯ ಮೇಲಿನ ಕೈಯಲ್ಲಿ ಅಭಯಮುದ್ರೆ, ಕೆಳಗಿನ ಕೈಯಲ್ಲಿ ವರಮುದ್ರೆ, ಎಡಗಡೆಯ ಮೇಲಿನ ಕೈಯಲ್ಲಿ ಖಡ್ಗ ಹಾಗೂ ಕೆಳಗಿನ ಕೈಯಲ್ಲಿ ಕಮಲಪುಷ್ಪ. ಇದನ್ನು ನಾವು ದೇವಿ ಕಾತ್ಯಾಯನಿಯ ಸ್ವರೂಪದಲ್ಲಿ ನೋಡಬಹುದು. ಕಾತ್ಯಾಯನಿ ಸಿಂಹವಾಹನಳಾಗಿ ಶೋಭಿಸುತ್ತಾಳೆ. ದೇವಿಯ ಅವತಾರದ ಹಿನ್ನೆಲೆ ವಿಶೇಷವಾಗಿದೆ.
ಪುರಾಣಗಳು ಈ ವಿಚಾರವನ್ನು ಸುಂದರವಾಗಿ ಚಿತ್ರಣ ಮಾಡುತ್ತವೆ. ಕಾತ್ಯಾಯನಿದೇವಿಯು ಕಾತ್ಯಾಯನ ಋಷಿಗಳ ತಪಸ್ಸಿನ ಫಲದ ಸ್ವರೂಪವಾಗಿ ಅವರ ಪುತ್ರಿಯಾಗಿ ಪ್ರಕಟವಾದಳು. ಹಾಗೂ ದಾನವನಾದ ಮಹಿಷಾಸುರನ ಹಾವಳಿ ಹೆಚ್ಚಾದಾಗ ಬ್ರಹ್ಮ, ವಿಷ್ಣು, ಮಹೇಶ್ವರರಾದಿಯಾಗಿ ಎಲ್ಲ ದೇವತೆಗಳು ತಮ್ಮ ತೇಜಸ್ಸಿನ ಅಂಶವನ್ನು, ವಿವಿಧ ಶಸ್ತ್ರಾಸ್ತ್ರಗಳನ್ನು ಈಕೆಗೆ ನೀಡಿದರು. ಈ ಶಕ್ತಿಯ ಫಲವಾಗಿ ಅವಳು ದೇವಿಯಾಗಿ ಪರಿವರ್ತನೆ ಹೊಂದಿ ಮೂರು ದಿನಗಳ ಕಾಲ ಮಹರ್ಷಿ ಕಾತ್ಯಾಯನರಿಂದ ಪೂಜೆ ಸ್ವೀಕರಿಸಿ ದಶಮಿಯಂದು ಮಹಿಷಾಸುರನನ್ನು ವಧಿಸಿದಳು ಎಂಬ ಕಾರಣದಿಂದ ಅವಳನ್ನು ‘ಮಹಿಷಾಸುರಮರ್ದಿನೀ’ ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೆ ಅವಳು ಮಹಿಷಾಸುರಮರ್ದಿನಿಯ ರೂಪವನ್ನು ಸಹ ತಾಳುತ್ತಾಳೆ. ಕೃಷ್ಣನನ್ನೇ ಪತಿಯನ್ನಾಗಿ ಪಡೆಯಬೇಕೆಂಬ ಮಹದಾಸೆಯಿಂದ ಗೋಪಿಕಾಸ್ತ್ರೀಯರು ಯಮುನಾ ನದಿಯ ತೀರದಲ್ಲಿ ಕಾತ್ಯಾಯನಿಯನ್ನು ಪೂಜಿಸಿದ್ದರು ಅನ್ನುವ ಕಥೆ ಜನಜನಿತವಾಗಿದೆ. ಕಾತ್ಯಾಯನಿಯ ಬಣ್ಣವು ಬಂಗಾರದಂತೆ ಹೊಳೆಯುತ್ತಿರುತ್ತದೆ.
ಕಾತ್ಯಾಯನೀ ದೇವಿಯ ಪೂಜಾವಿಧಾನ ವಿಶಿಷ್ಟವಾದದ್ದು. ಆರನೆಯ ದಿನವಾದ ಷಷ್ಠಿಯಂದು ಕಾತ್ಯಾಯನಿಗೆ ಕೆಂಪುಬಣ್ಣದ ಸೀರೆ, ಕುಪ್ಪಸವನ್ನು ತೊಡಿಸಿ ಅಲಂಕರಿಸಲಾಗುತ್ತದೆ. ಕೆಂಪುಬಣ್ಣದ ಹೂಗಳು, ಕೆಂಪುಬಣ್ಣದ ಅಕ್ಷತೆ, ಗೆಜ್ಜೆವಸ್ತ್ರಗಳಿಂದ ಪೂಜಿಸಬೇಕು. ಲಲಿತಾಸಹಸ್ರನಾಮವನ್ನು ಪಾರಾಯಣ ಮಾಡುತ್ತಾ, ಕುಂಕುಮಾರ್ಚನೆ ಮಾಡಬೇಕು. ಕಡಲೇಬೇಳೆಯ ಪಾಯಸ ಹಾಗೂ ಅನ್ನವನ್ನು ನೈವೇದ್ಯ ಮಾಡಬೇಕು. ಷಷ್ಠಿಯಂದು ಇಂದ್ರಾಣಿಯ ಅಲಂಕಾರ ಮಾಡಬೇಕು ಎಂಬ ಆಚರಣೆಯ ನಂಬಿಕೆಯಿದೆ.
ಕಾತ್ಯಾಯನಿಯನ್ನು ಪೂಜಿಸುವುದರಿಂದ ಅನೇಕ ಒಳ್ಳೆಯ ಫಲಗಳನ್ನು ಹೊಂದಬಹುದು. ಆರಾಧಿಸುವವರು ಶಾರೀರಿಕ ಹಾಗೂ ಮಾನಸಿಕ ರೋಗದಿಂದ ಮುಕ್ತರಾಗುತ್ತಾರೆ. ಮನಸ್ಸಿನ ಸಂತಾಪಾದಿಗಳು ದೂರವಾಗುತ್ತವೆ. ಭಯ, ಶೋಕ, ವ್ಯಾಕುಲತೆ, ಅನಿಶ್ಚಿತತೆ ಮುಂತಾದವು ನಾಶವಾಗುತ್ತವೆ. ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳ ಫಲಪ್ರಾಪ್ತಿಯಾಗುತ್ತದೆ. ಕಾತ್ಯಾಯನಿಯ ಉಪಾಸಕರಿಗೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಧನಲಾಭ, ಕಂಕಣಭಾಗ್ಯಗಳು ಕೂಡಿಬರುತ್ತವೆ. ಅಂದು ಯೋಗಿಗಳು, ಸಾಧಕರು ಕಾತ್ಯಾಯನಿಯನ್ನು ಆರಾಧಿಸುವಾಗ ಮನಸ್ಸನ್ನು ಆಜ್ಞಾಚಕ್ರದಲ್ಲಿ ನೆಲೆಗೊಳಿಸುತ್ತಾರೆ.
ಯಾ ದೇವಿ ಸರ್ವಭೂತೇಷು ಕ್ಷುಧಾರೂಪೇಣ ಸಂಸ್ಥಿತಾ|
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||
‘ಯಾವ ದೇವಿಯು ಸಕಲ ಚರಾಚರ ಭೂತಗಳಲ್ಲಿ ಕ್ಷುಧಾರೂಪದಿಂದ ನೆಲೆನಿಂತಿರುವಳೋ ಆ ದೇವಿಗೆ ನಮಸ್ಕಾರಗಳು’ ಎನ್ನುವ ಅರ್ಥವನ್ನು ಕೊಡುವ ಈ ಶ್ಲೋಕವನ್ನು 32 ಬಾರಿ ಹೇಳಿಕೊಂಡು ದೇವಿಗೆ ಭಕ್ತಿಪುರಸ್ಸರವಾಗಿ ನಮಸ್ಕರಿಸಿ ಬೇಡಿಕೊಂಡರೆ ಆರಾಧಿಸುವವರ ಮನಸ್ಸಿನ ಕಾಮನೆಗಳು ಈಡೇರುತ್ತವೆ.
ಭಾರತವನ್ನೇ ತಪ್ಪಾಗಿ ತೋರಿಸಿದ ಶಶಿ ತರೂರ್ ಪ್ರಣಾಳಿಕೆ!; ಜಮ್ಮು-ಕಾಶ್ಮೀರವೇ ಇರದ ನಕಾಶೆ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
