ಬೆಂಗಳೂರು: ಕರೊನಾ ಸೋಂಕಿನ ಕಾರಣ ನಾವಿಕೋತ್ಸವ 2020 ವರ್ಚುವಲ್ ಕಾನ್ಫರೆನ್ಸ್ ಆಗಿರಲಿದ್ದು, ಆಗಸ್ಟ್​ 28,29,30ರಂದು ನಡೆಯಲಿದೆ. ನಾವು ವಿಶ್ವ ಕನ್ನಡಿಗರು(ನಾವಿಕ) ಸಂಸ್ಥೆಯು ನಾವಿಕೋತ್ಸವ 2020ರ ಪ್ರಯುಕ್ತ ಕರ್ನಾಟಕದ ಬರಹಗಾರರಿಗಾಗಿಯೇ ಪ್ರತ್ಯೇಕ ಕಥಾ ಸ್ಪರ್ಧೆಯನ್ನು ಏರ್ಪಡಿಸಿದೆ ಎಂದು ನಾವಿಕದ ಪಬ್ಲಿಸಿಟಿ ಕಮಿಟಿ ಚೇರ್​ಮನ್ ಬೆಂಕಿ ಬಸಣ್ಣ ತಿಳಿಸಿದ್ದಾರೆ.
ಸ್ಪರ್ಧೆಗೆ ಕಳುಹಿಸುವ ಕಥೆ ಸ್ವಂತ ರಚನೆಯಾಗಿರಬೇಕು. ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು. ಕಥೆ 2000 ಪದಮಿತಿಯಲ್ಲಿರಬೇಕು. ಕಥೆಯನ್ನು ಕಡ್ಡಾಯವಾಗಿ ಬರಹ/ಯೂನಿಕೋಡ್ ನಲ್ಲಿ ಟೈಪ್ ಮಾಡಿ ಪಿಡಿಎಫ್ ಅಥವಾ ವರ್ಡ್ ಫಾರ್ಮ್ಯಾಟಿನಲ್ಲಿ[email protected]ಗೆ  ಇ-ಮೇಲ್ ಮೂಲಕ ಕಳುಹಿಸಬೇಕು. ಕಥೆ ತಲುಪಲು (ಇ-ಮೇಲ್ ಮುಖಾಂತರವಷ್ಟೇ ಕಳುಹಿಸುವ ಅವಕಾಶ) ಆಗಸ್ಟ್ 10 ,2020 ಕೊನೆಯ ದಿನವಾಗಿರುತ್ತದೆ.
ಈ ಸಲದ ಸಮ್ಮೇಳನವು ವರ್ಚುವಲ್ ಕಾನ್ಫರೆನ್ಸ್ ಆದರೂ, ಮೂರು ದಿನಗಳ ಸಮ್ಮೇಳನದಲ್ಲಿ ಕವಿ ಸಮ್ಮೇಳನ, ನೃತ್ಯ, ಗಾಯನ, ಔದ್ಯಮಿಕ ಸಂವಾದ, ಸಂಗೀತ, ಸಾಹಿತ್ಯ, ಮಾತ್ರವಲ್ಲದೆ ಜೊತೆಗೆ ಕನ್ನಡ ಸಂಸ್ಕೃತಿ ಮತ್ತು ಭಾಷೆಗೆ ಸಂಬಂಧಪಟ್ಟಂತೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಥಾ ಸ್ಪರ್ಧೆ ಮತ್ತು ಸಮ್ಮೇಳನದ ಕುರಿತ ಹೆಚ್ಚಿನ ಮಾಹಿತಿಗೆನಾವಿಕ ವೆಬ್​​ಸೈಟ್​ಗೆ ಭೇಟಿ ನೀಡಬಹುದು ಎಂದು ಬಸಣ್ಣ ತಿಳಿಸಿದ್ದಾರೆ.
ಭಾರತದಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ ನಿಯೋವಿಸ್ ಧೂಮಕೇತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + seven =
Remember me
