ಬೆಂಗಳೂರು:ಕರೊನಾ ಸಂಕಷ್ಟದ ಸಮಯದಲ್ಲೂ ‘ನಾವಿಕೋತ್ಸವ-2020’ ಯಶಸ್ವಿಯಾಗಿ ನಡೆದು, ಮನಸ್ಸಿನಲ್ಲಿ ಮನೆ ಮಾಡಿರುವ ಆತಂಕವನ್ನು ಹೋಗಲಾಡಿಸುವ ಜತೆಗೆ ಅಂತರ್ಜಾಲದಲ್ಲಿ ವಿಶ್ವದ ಕನ್ನಡಿಗರನ್ನು ಬೆಸೆಯಿತು. ಅಮೆರಿಕದಲ್ಲಿ ಕನ್ನಡ ಡಿಂಡಿಮ ಬಾರಿಸುತ್ತಿರುವ ನಾವು ವಿಶ್ವ ಕನ್ನಡಿಗರು (ನಾವಿಕ) ಸಂಸ್ಥೆಯು ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ 247 ಮಾಧ್ಯಮ ಸಹಯೋಗದಲ್ಲಿ ಶನಿವಾರ ಹಾಗೂ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 25 ದೇಶಗಳ 80 ಕನ್ನಡ ಸಂಘಗಳು ಹಾಗೂ ಕನ್ನಡಿಗರು ಭಾಗವಹಿಸಿದರು.

ಸಿಎಂ ಯಡಿಯೂರಪ್ಪ ಅವರಿಂದ ಉದ್ಘಾಟನೆ ಆದ ನಾವಿಕೋತ್ಸವ ಇತಿಹಾಸದಲ್ಲಿಯೇ ಪ್ರಪ್ರಥಮ ಅಂತರ್ಜಾಲ ಚಾಲಿತ ವಿಶ್ವ ಕನ್ನಡ ಸಮೆ್ಮೕಳನವಾಗಿ ಹೊಸ ದಾಖಲೆ ಸೃಷ್ಟಿಸಿತು. ಡಿಸಿಎಂ ಡಾ.ಅಶ್ವತ್ಥನಾರಾಯಣ, ಸಚಿವ ಸಿ.ಟಿ.ರವಿ ಭಾಗವಹಿಸಿ ಶುಭ ಸಂದೇಶ ಹೇಳಿದರು. ಕರ್ನಾಟಕದ ಪ್ರವಾಹ ವಿಕೋಪ, ಕರೊನಾ ವಿರುದ್ಧ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ನಾವಿಕ ಸಂಸ್ಥೆ ಧನಸಹಾಯ ಮಾಡುತ್ತಿರುವುದಕ್ಕೆ ಅಭಿನಂದಿಸಿದರು. ಇನೊ್ಪೕಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಹೊರದೇಶಗಳಲ್ಲಿರುವ ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡ ಕಲಿಸಲು ಮಾಡುತ್ತಿರುವ ಶ್ರಮವನ್ನು ಪ್ರಶಂಸಿಸಿದರು. ಕನ್ನಡ ಭಾಷೆ, ಸಂಸೃ್ಕಗೆ ಸಾವಿಲ್ಲ ಎಂದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ನಾವಿಕೋತ್ಸವ ಸಮೆ್ಮೕಳನದ ‘ಸ್ನೇಹಸಂಗಮ‘ ಸಂಚಿಕೆ ಬಿಡುಗಡೆ ಮಾಡಿದರು.
ಗಿರೀಶ್ ನಿಂಬೇಕಾಯಿ ಮತ್ತು ಬೆಂಕಿ ಬಸಣ್ಣ ಕಾರ್ಯಕ್ರಮ ನಡೆಸಿಕೊಟ್ಟರು. ನಾವಿಕ ಸಂಸ್ಥೆ ಅಧ್ಯಕ್ಷ ವಲ್ಲೀಶ ಶಾಸ್ತ್ರಿ ಸ್ವಾಗತಿಸಿದರು, ಡಾ. ಅಶೋಕ ಕಟ್ಟಿಮನಿ ನಾವಿಕೋತ್ಸವ-2020ರ ಪ್ರಮುಖ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.
ಸಾಂಸ್ಕೃತಿಕ ಮನೋಲ್ಲಾಸ:ಸವಿತಕ್ಕನವರ ಹಳ್ಳಿ ಬ್ಯಾಂಡ್​ನಿಂದ ಜಾನಪದ ಗೀತೆಗಳು ಮತ್ತು ಪ್ರದೀಪ್ ಮತ್ತು ಪ್ರವೀಣ್ ತಂಡದಿಂದ ಭಾವಸಂಗಮ ಗೀತೆಗಳು ವೀಕ್ಷಕರ ಮನಸೂರೆಗೊಂಡವು. ಆಸ್ಟ್ರೇಲಿಯಾದ ಕನ್ನಡ ಸಂಘಗಳು, ಅಮೆರಿಕದ ಪೂರ್ವ ಕರಾವಳಿ ನಂತರ ಅಮೆರಿಕದ ಪಶ್ಚಿಮ ಕರಾವಳಿಯ ಕನ್ನಡ ಸಂಘಗಳಿಂದ ಕಾರ್ಯಕ್ರಮಗಳು ನಡೆದವು.
ಯುವ ಹಾಸ್ಯ ಕಲಾವಿದರ ನಮ್ದುಕೆ ತಂಡದವರಿಂದ ಸ್ಟಾಂಡ್ ಅಪ್ ಕಾಮಿಡಿ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತು. ಗಣೇಶ್ ದೇಸಾಯಿ ಮತ್ತು ತಂಡದವರಿಂದ ಸುಗಮ ಸಂಗೀತ, ಈಶ ಬಾಬು ಮತ್ತು ಸಂಗಡಿಗರಿಂದ ಭರತನಾಟ್ಯ, ಉದಯೋನ್ಮುಖ ಕನ್ನಡ ಕೋಗಿಲೆ ಕಲಾವಿದರಿಂದ ಸಂಗೀತ ಸಂಜೆ ಆಕರ್ಷಣೆಗಳಾಗಿದ್ದವು.
ಯುರೋಪ್, ಆಫ್ರಿಕಾ, ಮಧ್ಯಪ್ರಾಚ್ಯ, ಕೆನಡಾ, ಅಮೆರಿಕ ದೇಶದ ಕನ್ನಡ ಸಂಘಗಳು ವೈವಿಧ್ಯಮಯ ಕಾರ್ಯಕ್ರಮ ನೀಡಿದವು. ಕ್ಯಾಲಿಫೋರ್ನಿಯಾದ ಅಲಮೇಲು ಅಯ್ಯಂಗಾರ್ ನಿರ್ದೇಶನದ ಪುತಿನ ವಿರಚಿತ, ಶ್ರೀರಾಮಪಟ್ಟಾಭಿಷೇಕ ಸಂಗೀತ ನಾಟಕ ಆಕರ್ಷಣೀಯವಾಗಿತ್ತು. ಅಮೆರಿಕದಲ್ಲಿ ನೆಲೆಸಿರುವ ಉತ್ತರ ಕರ್ನಾಟಕ ಮಂದಿಯನ್ನು ಒಂದುಗೂಡಿಸಿ ಇತಿ್ತೕಚಿಗೆ ಸ್ಥಾಪಿತವಾದ ‘ನೌಕಾ’ ಸಂಸ್ಥೆ ಸದಸ್ಯರು ‘ನಿಂಬಿಯಾ ಬನದಾ ಮ್ಯಾಗಳ..’ ನೃತ್ಯವನ್ನು ಉತ್ತರ ಕರ್ನಾಟಕ ಶೈಲಿಯಲ್ಲಿ ಅಭಿನಯಿಸಿದರು. ಕನ್ನಡ ಕಲಿ ಸ್ಪರ್ಧೆಗಳ ವಿಜೇತರು, ಸೌಂದರ್ಯ ಸ್ಪರ್ಧೆ ವಿಜೇತರು, ‘ಪ್ರಣಯಪ್ರಜ್ಞೆ’ ಎಂಬ ಕಿರುಚಿತ್ರ, ಸಿನಿಸಂವಾದ, ಕರೊನ ವಿರುದ್ಧ ಹೋರಾಡಿದ ವೈದ್ಯರಿಗೆ ಸಲಾಂ ಹಾಗೂ ಸಂಗೀತ ನಿರ್ದೇಶಕ ಮನೋಮೂರ್ತಿ ಅವರೊಂದಿಗೆ 25 ವರ್ಷದ ಸಂಗೀತ ಪಯಣ ಕಾರ್ಯಕ್ರಮಗಳು ನಡೆದವು.
ಉದ್ಯಮಿಗಳಿಂದ ಮಾರ್ಗದರ್ಶನ:ಬಿಜಿನೆಸ್ ಫೋರಂನಲ್ಲಿ ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ, ಡಾ. ಉದಯಶಂಕರ್ ಪುರಾಣಿಕ್, ಆರತಿ ರಾಮಪ್ಪ, ಕೆನಡಾ ದೇಶದ ಟಾಪ್​ 25 ಇಮಿಗ್ರೆಂಟ್ ಪ್ರಶಸ್ತಿ ಅಭ್ಯರ್ಥಿಯಾಗಿರುವ ಬಸವರಾಜ ಹಳ್ಳಿ, ಅಮೆರಿಕದ ಯಶಸ್ವಿ ಉದ್ಯಮಿ ಸಿ.ವಿ. ಶಶಿಕುಮಾರ್ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕರೊನಾದ ಕಠಿಣ ಪರಿಸ್ಥಿತಿಯಲ್ಲಿ ಉದ್ಯಮವನ್ನು ಹೇಗೆ ಬೆಳೆಸಬೇಕು ಎಂದು ಯುವ ಉದ್ಯಮಿಗಳಿಗೆ ಮಾರ್ಗದರ್ಶನ ಮಾಡಿದರು.
9 ತಾಸಿನ ನಿದ್ದೆಯೇ ಉದ್ಯೋಗ; ಲಕ್ಷ ರೂ. ಸಂಬಳ; ಷರತ್ತುಗಳು ಅನ್ವಯ….!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
