ಬೆಂಗಳೂರು:ಶ್ರೀ ಬಂಡೆ ಮಹಾಕಾಳಿ ಅಮ್ಮನವರ ದೇವಾಲಯದಲ್ಲಿ ಈಗ ನವರಾತ್ರಿಯ ಸಂಭ್ರಮ. ಇದರ ಅಂಗವಾಗಿ ಅ.24ರವರೆಗೆ ‘ಕಾಳಿ ಉತ್ಸವ’ ಆಯೋಜಿಸಲಾಗಿದೆ. ಒಂಬತ್ತು ದಿನಗಳ ಈ ಉತ್ಸವದಲ್ಲಿ ಅಮ್ಮನವರಿಗೆ ನಿತ್ಯವೂ ಅಭಿಷೇಕ ಹಾಗೂ ವಿಶೇಷ ಅಲಂಕಾರ ಮಾಡಲಾಗುವುದು. ನಿತ್ಯ ಹೋಮ ಹಾಗೂ ಲಲಿತ ಸಹಸ್ರನಾಮ ಪಾರಾಯಣ ಹಾಗೂ ಪ್ರವಚನಗಳು ನಡೆಯಲಿದೆ. ಭಕ್ತರ ಕ್ಷೇಮ, ಆಯುರಾರೋಗ್ಯ, ಭಾಗ್ಯಾಭಿವೃದ್ಧಿಗಾಗಿ ಪ್ರಾರ್ಥಿಸುವ ಮೂಲಕ ನಿತ್ಯ ಪೂಜಾ ಕೈಂಕರ್ಯಗಳು ನಡೆಯಲಿವೆ. ಉತ್ಸವದಲ್ಲಿ ಕಳಸ ಸ್ಥಾಪನೆ, ಪ್ರಾಣ ಪ್ರತಿಷ್ಠೆ, ಗಣಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ನವ ದುರ್ಗಾ ಹೋಮ, ಸುದರ್ಶನ ಹೋಮ, ಮಹಾಲಕ್ಷ್ಮೀ ಹೋಮ, ಮಹಾಸರಸ್ವತಿ ಹೋಮ, ಮನ್ಯೂಸೂಕ್ತ ಹೋಮ, ಚಂಡಿಕಾ ಹೋಮ, ಗಾಯತ್ರಿ ಹೋಮ, ಕುಂಭಾಭಿಷೇಕ, ನವವರ್ಣ ಅಭಿಷೇಕ ಇರಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ
ಅ.18ರಂದು ಸಂಜೆ ಹಾಸ್ಯ ಕಲಾವಿದರಿಂದ ‘ಹಾಸ್ಯ ಸಂಜೆ’ ಏರ್ಪಡಿಸಲಾಗಿದೆ. ಅ.19ರಂದು ಕುಂದಾಪುರದ ವಿಶ್ವನಾಥ ಶೆಟ್ಟಿ ಅವರ ಕರ್ನಾಟಕ ಕಲಾದರ್ಶಿನಿ ತಂಡದಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಅ.20ರಂದು ಕಲಾವಿದ ಡಾ. ಸಂಜಯ್ ಶಾಂತಾರಾಮ್ ತಂಡದಿಂದ ‘ದೇವಿ ವೈಭವ’ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಅ.21ರಂದು ನಾಗೇಶ್ ಮತ್ತು ತಂಡದವರು ನಾಟ್ಯಾಂಕುರ ಕಲಾ ಪ್ರದರ್ಶನ ನೀಡಲಿದ್ದಾರೆ. ಅ.22ರಂದು ನಟರಾಜ್ ಎಂಟರ್​ಟೈನರ್ಸ್ ತಂಡದಿಂದ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅ.23ರಂದು ವಿದುಷಿ ಭವ್ಯಶ್ರೀ ಅವರ ಕೃಷ್ಣಗಂಗ ತಂಡದಿಂದ ನೃತ್ಯರೂಪಕ ಆಯೋಜಿಸಲಾಗಿದೆ.
ಇದನ್ನೂ ಓದಿ:ಮೈಸೂರು ದಸರಾ ಜಂಬೂ ಸವಾರಿ ವೀಕ್ಷಣೆ ಬಲು ದುಬಾರಿ! ಗ್ಯಾರೆಂಟಿ ಯೋಜನೆಗಳ ಎಫೆಕ್ಟ್​ ಎಂದ ಸಾರ್ವಜನಿಕರು
ಎಲ್ಲಿದೆ?
ಶ್ರೀ ಬಂಡೆ ಮಹಾಕಾಳಿ ದೇವಾಲಯ, ಕೆಂಪಾಂಬುದಿ ಕರೆ ಏರಿ, ಕೆಂಪೇಗೌಡನಗರ, ಗವಿಪುರ ಗುಟ್ಟಹಳ್ಳಿ, ಬೆಂಗಳೂರು.
ವಿಶೇಷ ಅಲಂಕಾರಗಳುಬಂಡೆ ಮಹಾಕಾಳಿಗೆ ಪ್ರತಿ ದಿನ ಒಂದೊಂದು ರೀತಿಯ ಅಲಂಕಾರ ಮಾಡಲಾಗುತ್ತಿದೆ. ಬೆಣ್ಣೆ ಅಲಂಕಾರ, ರಾಜರಾಜೇಶ್ವರಿ ಅಲಂಕಾರ, ಅರಿಶಿನ- ಕುಂಕುಮ ಅಲಂಕಾರ, ಮಹಾಲಕ್ಷ್ಮೀ ಅಲಂಕಾರ, ಸರಸ್ವತಿ ಅಲಂಕಾರ, ಕಾಮಾಕ್ಷಿ ಅಲಂಕಾರ, ಚಾಮುಂಡೇಶ್ವರಿ ಅಲಂಕಾರ, ಮೀನಾಕ್ಷಿ ಅಲಂಕಾರ, ವಜ್ರಾಭರಣ ಅಲಂಕಾರ ಮಾಡಲಾಗುವುದು. ವಿಜಯದಶಮಿಯಂದು ವಜ್ರಾಭರಣ ಅಲಂಕಾರದಲ್ಲಿ ಕಂಗೊಳಿಸುವ ಅಮ್ಮನವರ ಅದ್ದೂರಿ ಪಲ್ಲಕ್ಕಿ ಉತ್ಸವ ಜರುಗಲಿದೆ.
ದೇವಾಲಯದ ಐತಿಹ್ಯಶ್ರೀ ಬಂಡೆ ಮಹಾಕಾಳಿ ಅಮ್ಮನವರ ದೇವಾಲಯ ನಗರದ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ವಿಶಾಲವಾದ ಪ್ರಾಂಗಣ, ಗರ್ಭಗುಡಿ, ಪ್ರದಕ್ಷಿಣಾ ಪಥ ಹೊಂದಿದ್ದು, ಈ ದೇವಾಲಯದಲ್ಲಿ ಬಂಡೆಯಲ್ಲಿ ಮೂಡಿರುವ 3 ಅಡಿ ಎತ್ತರವಿದೆ. ಹಿಂದೆ ಅಮ್ಮನ ದರ್ಶನಕ್ಕಾಗಿ ಭಕ್ತರು ಎತ್ತಿನ ಬಂಡಿಯಲ್ಲಿ ಬರುತ್ತಿದ್ದರು. ಅದೇ ದಿನ ಮರಳಲು ಸಾಧ್ಯವಾಗದವರು ದೇವಾಲಯದ ಸುತ್ತಲು ಬಂಡಿಗಳನ್ನು ನಿಲ್ಲಿಸುತ್ತಿದ್ದರು. ಹಾಗಾಗಿ ‘ಬಂಡಿ ಕಾಳಮ್ಮ’ ಎಂಬ ಹೆಸರಿನಿಂದಲೂ ಅಮ್ಮನನ್ನು ಕರೆಯುತ್ತಾರೆ.
ಯಶಸ್ಸು ಕರುಣಿಸುವ ಕೂಷ್ಮಾಂಡಾ: ನವರಾತ್ರಿ 4ನೇ ದಿನ

Navaratri; ದುರ್ಗಾ ಮಾತೆಯ ಮೂರನೇ ಶಕ್ತಿಯಾದ ಚಂದ್ರಘಂಟಾ ಪೂಜೆ ಮಹತ್ವ….

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 4 =
Remember me
