ದೇಶದಾದ್ಯಂತ ಬಹಳಷ್ಟು ವೈಭವದಿಂದ ಆಚರಿಸುವ ನವರಾತ್ರಿ ಒಂಬತ್ತು ದಿನಗಳು ಆಚರಿಸುವ ಮಂಗಳಕರ ಹಬ್ಬ. ನವರಾತ್ರಿ ಈಗಾಗಲೇ ಆರಂಭವಾಗಿದ್ದು, ಇಂದು ಮೂರನೇ ದಿನ. ಈ ಬನ್ನಿ ಈ ದಿನದ ವಿಶೇಷತೆ ಏನು? ಚಂದ್ರಘಂಟಾ ದೇವಿ ಆರಾಧನೆ ಮಾಡುವುದು ಹೇಗೆ? ಮಹತ್ವ ಏನು ಎಂದು ತಿಳಿದುಕೊಳ್ಳೋಣ…
ನವರಾತ್ರಿಯ 3ನೆಯ ದಿನ:ದುರ್ಗಾ ಮಾತೆಯ ಮೂರನೆಯ ಶಕ್ತಿಯ ಹೆಸರೇ ಚಂದ್ರ ಘಂಟ. ನವರಾತ್ರಿಯ 3ನೆಯ ದಿನದಂದು ಈ ದೇವಿಯ ಪೂಜೆಯನ್ನು ಮಾಡಲಾಗುತ್ತದೆ. ನೋಡಲು ಶಾಂತಿ ಸ್ವರೂಪಿಯಂತೆ ಕಾಣುತ್ತಾಳೆ.
ಚಂದ್ರಘಂಟಾ ದೇವಿ ಎನ್ನುವ ಹೆಸರು ಬರಲು ಕಾರಣ:ಮಸ್ತಕದಲ್ಲಿ ಘಂಟೆಯನ್ನು ಹೋಲುವ ಅರ್ಧ ಚಂದ್ರನಿದ್ದಾನೆ. ಈ ಕಾರಣದಿಂದಲೇ ಈಕೆಗೆ ಚಂದ್ರ ಘಂಟ ಎಂಬ ಹೆಸರು ಬಂದಿದೆ. ಪ್ರತಿಯೊಂದು ಕೈಗಳಲ್ಲಿಯೂ ಆಯುಧಗಳನ್ನು ಹಿಡಿದುತನ್ನ ವಾಹನವಾದ ಸಿಂಹದ ಮೇಲೆ ಈಕೆ ಕುಳಿತಿದ್ದಾಳೆ. ಇವಳ ಆಕೃತಿ ರಾಕ್ಷಸರನ್ನು ಸಂಹರಿಸಲು ಹೊರಟಂತಿದೆ.
ಚಂದ್ರಘಂಟಾ ದೇವಿಯ ವಿಗ್ರಹವನ್ನು ಕೇಸರ (ಕೇಸರಿ), ಗಂಗಾಜಲ (ಪವಿತ್ರ ನೀರು) ಮತ್ತು ಕೇವ್ರಾ (ಹೂವಿನ ನೀರು) ನಲ್ಲಿ ಸ್ನಾನ ಮಾಡಿ ಮರದ ಮೇಜಿನ ಮೇಲೆ ಇರಿಸುವ ಮೂಲಕ ಪೂಜೆ ಪ್ರಾರಂಭವಾಗುತ್ತದೆ. ನಂತರ ಆಕೆಗೆ ಚಿನ್ನದ ಬಣ್ಣದ ಬಟ್ಟೆಗಳನ್ನು ಹೊದಿಸಿ ಮತ್ತು ಅವಳಿಗೆ ಹಳದಿ ಹೂವುಗಳು, ಕಮಲಗಳು, ಸಿಹಿತಿಂಡಿಗಳು, ಪಂಚಾಮೃತವನ್ನು ಅರ್ಪಿಸಲಾಗುತ್ತದೆ.
ಪೂಜಾ ವಿಧಾನ:ತಾಯಿ ಚಂದ್ರಘಂಟಾ ಪೂಜೆಯಲ್ಲಿ ಹೆಚ್ಚು ಕೆಂಪು ಮತ್ತು ಕಿತ್ತಳೆ ಬಣ್ಣಗಳನ್ನು ಬಳಸಬೇಕು. ನವರಾತ್ರಿಯ ಮೂರನೇ ದಿನದಂದು “ರಣ್” ಅಕ್ಷರವನ್ನು ಪಠಿಸುವುದು ಮಣಿಪುರ ಚಕ್ರವನ್ನು ಬಲಪಡಿಸುತ್ತದೆ. ಇದರಿಂದ ಮಂಗಳನ ಅಶುಭ ಪರಿಣಾಮಗಳು ಕಡಿಮೆಯಾಗುತ್ತವೆ. ಈ ದೇವಿಗೆ ಕೆಂಪು ಚಂದನ, ಕೆಂಪು ಚುನ್ರಿ, ಕೆಂಪು ಹೂವುಗಳು ಮತ್ತು ಕೆಂಪು ಹಣ್ಣು (ಸೇಬು) ಅರ್ಪಿಸಬೇಕು. ದುರ್ಗಾ ದೇವಿಯ ಪ್ರತಿಯೊಂದು ರೂಪಕ್ಕೂ ವಿಶೇಷ ಅರ್ಪಣೆಗಳನ್ನು ಮಾಡಲಾಗುತ್ತದೆ. ತಾಯಿ ಚಂದ್ರಘಂಟಾಗೆ ಹಾಲಿನಿಂದ ಮಾಡಿದ ಸಿಹಿಯನ್ನು ಅರ್ಪಿಸಿ ನಂತರ ದೇವಿಯ ಆರತಿಯನ್ನು ಮಾಡಿ. ಚಂದ್ರಘಂಟಾ ಮಾತೆಯನ್ನು ಹೀಗೆ ಪೂಜಿಸುವುದರಿಂದ ಧೈರ್ಯದ ಜೊತೆಗೆ ಸೌಮ್ಯತೆ ಮತ್ತು ವಿನಯವೂ ಹೆಚ್ಚುತ್ತದೆ.
ಚಂದ್ರಘಂಟಾ ದೇವಿಗೆ ಬಿಳಿ ಬಣ್ಣದ ಕಮಲದ ಹೂವುಗಳನ್ನು ಮತ್ತು ಹಳದಿ ಗುಲಾಬಿ ಹೂವುಗಳ ಹಾರವನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ.
ಮಂತ್ರ:ಓಂ ದೇವೀ ಚಂದ್ರಘಂಟಾಯೈ ನಮಃ॥
ದೇವಿಯ ಮೂರನೇ ರೂಪ:ದುರ್ಗಾದೇವಿಯ ಮೂರನೇ ಅವತಾರವೇ ಚಂದ್ರಘಂಟಾ. ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು ಹಾಗೂ ಚಂದ್ರೆ ಘಂಟೆಯ ಮೂರನೇ ಕಣ್ಣು ತೆರೆದೇ ಇದ್ದು ಯಾವ ಸಮಯದಲ್ಲಿ ಆದರೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಸಿದ್ಧಳಾಗಿರುವಂತೆ ಕಾಣುತ್ತಾಳೆ. ಚಂದ್ರ ಘಂಟೆಯನ್ನು ಚಂದ್ರಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಇವಳಿಗೆ ಹತ್ತು ಕೈಗಳಿದ್ದು, ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದುಕೊಂಡು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ.
ಶಿವನ ರೂಪ ಬದಲಾಯಿಸಲು ಚಂದ್ರಘಂಟೆಯಾದ ಪಾರ್ವತಿ ಹಿಮವಂತ ಹಾಗೂ ಮೈನಾ ದೇವಿಯ ಪುತ್ರಿಯಾಗಿ ಜನಿಸಿದ ಪಾರ್ವತಿಯು ಶಿವನನ್ನು ಪಡೆಯಲು ಕಠಿಣ ತಪಸ್ಸನ್ನು ಕೈಗೊಳ್ಳುತ್ತಾಳೆ. ತಪಸ್ಸಿಗೆ ಮೆಚ್ಚಿ ಶಿವ ಪಾರ್ವತಿಯನ್ನು ಮದುವೆಯಾಗಲು ಒಪ್ಪಿಕೊಳ್ಳುತ್ತಾನೆ. ಹಿಮವಾನನ ಅರಮನೆಯಲ್ಲಿ ಮದುವೆಯ ಏರ್ಪಾಡುಗಳು ನಡೆಯುತ್ತವೆ. ಸ್ಮಶಾನವಾಸಿಯಾದ ಶಿವನು ತನ್ನ ಭಯಾನಕ ರೂಪದಲ್ಲೇ ಮೆರವಣಿಗೆಯಲ್ಲಿ ಅರಮನೆಯನ್ನು ತಲುಪುತ್ತಾನೆ. ಬೂದಿಯಿಂದ ಮುಚ್ಚಲ್ಪಟ್ಟ ಶರೀರ, ಕೊರಳಿನಲ್ಲಿ ಸುತ್ತಿದ ಹಾವುಗಳು, ಗಂಟಿನಂತಿರುವ ಜಟೆಧಾರಿಯಾದ ಶಿವ, ಅವನೊಂದಿಗೆ ದೆವ್ವಗಳು, ಪಿಶಾಚ, ಗಣಗಳು, ಋಷಿಮುನಿಗಳು, ಅಘೋರಿಗಳನ್ನು ಒಳಗೊಂಡ ವಿಚಿತ್ರ ಮೆರವಣಿಗೆಯನ್ನು ನೋಡಿ, ಪಾರ್ವತಿಯ ತಾಯಿ ಮೂರ್ಛೆ ಹೋಗುತ್ತಾಳೆ. ವಿವಾಹಕ್ಕೆಂದು ಸೇರಿದ್ದವರು ಶಿವನ ರೂಪ, ಅವನ ಗಣಗಳನ್ನು ನೋಡಿ ಆಘಾತವನ್ನು ಅನುಭವಿಸುತ್ತಾರೆ. ಇದನ್ನು ಕಂಡ ಪಾರ್ವತಿಯು ಶಿವನಿಗೆ ಮುಜುಗರವಾಗದಿರಲೆಂದು ಭಯಾನಕ ರೂಪವಾಗಿ ಚಂದ್ರಘಂಟೆಯಾಗಿ ಪರಿವರ್ತನೆಯಾಗುತ್ತಾಳೆ. ಚಿನ್ನದ ಮೈಬಣ್ಣವನ್ನು ಹೊಂದಿದ ಚಂದ್ರ ಘಂಟೆಯು ಹತ್ತು ಕೈಗಳನ್ನು ಹೊಂದುತ್ತಾಳೆ. ಒಂಭತ್ತು ಎಂಟು ಕೈಗಳಲ್ಲಿ ತ್ರಿಶೂಲ, ಗದೆ, ಬಿಲ್ಲು-ಬಾಣ, ಖಡ್ಗ, ಕಮಲ, ಘಂಟೆ, ಕಮಂಡಲ ಹಾಗೂ ಒಂದು ತೋಳಿನಲ್ಲಿ ಅಭಯ ಮುದ್ರೆಯಿಂದ, ಸಿಂಹವಾಹಿನಿಯಾಗಿ ರೂಪ ತಾಳುತ್ತಾಳೆ. ತನ್ನ ಭಕ್ತರಿಗೆ ತಾಯಿಯಂತೆ ಆದಿಶಕ್ತಿಯು ಸಹಾನುಭೂತಿಯನ್ನು ತೋರುತ್ತಾಳೆ. ಕೆಟ್ಟವರಿಗೆ ಭಯಾನಕ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ಚಂದ್ರಘಂಟೆಯ ರೂಪತಾಳಿದ ಪಾರ್ವತಿಯು ಶಿವನಿಗೆ ಸುಂದರವಾದ ವರನ ರೂಪವನ್ನು ತಾಳಲು ಪ್ರೇರೇಪಿಸುತ್ತಾಳೆ. ಪಾರ್ವತಿಯ ಮಾತಿಗೆ ಒಪ್ಪಿದ ಶಿವನು ಸುಂದರ ರೂಪತಾಳುತ್ತಾನೆ.




ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty + fifteen =
Remember me
