ಬೆಳಗಾವಿ:ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ರಾವ್​ ಮತ್ತು ರಾಜಕುಮಾರ ಟಾಕಳೆ ಸಂಬಂಧಿತ ಸಂಘರ್ಷದ ಪ್ರಕರಣದಲ್ಲಿ ಇದೀಗ ಟಾಕಳೆ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಟಾಕಳೆ ವಿರುದ್ಧ ನವ್ಯಶ್ರೀ ದಾಖಲಿಸಿರುವ ದೂರಿನ ಮೇರೆಗೆ ಬೆಳಗಾವಿ ಎಪಿಎಂಸಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ವಿರುದ್ಧ ನವ್ಯಶ್ರೀ ಹಲವಾರು ಆರೋಪಗಳನ್ನು ಮಾಡಿದ್ದು, ಅತ್ಯಾಚಾರ, ಕಿಡ್ನ್ಯಾಪ್​, ಗರ್ಭಪಾತ ಮಾಡಿಸಿದ್ದು, ‌ಮೋಸ, ಮಹಿಳೆ ಮೇಲೆ ಹಲ್ಲೆ, ಅವಾಚ್ಯ ನಿಂದನೆ, ಜೀವ ಬೆದರಿಕೆ, ಗೌರವಕ್ಕೆ ಧಕೆ ತರುವುದು ಮಾತ್ರವಲ್ಲದೆ ಲೈಂಗಿಕ ಪ್ರಚೋದನಕಾರಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್​ಲೋಡ್ ಮಾಡಿ, ಖಾಸಗಿತನಕ್ಕೆ ಧಕ್ಕೆ ವಿಚಾರವಾಗಿಯೂ ದೂರು ನೀಡಲಾಗಿದೆ. ಈ ಮೇರೆಗೆ ಸಂಬಂಧಿತ ಸೆಕ್ಷನ್​ಗಳನ್ವಯ ಎಫ್​ಐಆರ್ ದಾಖಲು ಮಾಡಲಾಗಿದೆ.
ಇಂದು ಈ ಕುರಿತು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ನವ್ಯಶ್ರೀ, ದೂರು ನೀಡಿ ಖಾಸಗಿ ಹೋಟೆಲ್​ಗೆ ತೆರಳಿದ್ದು, ನಾಳೆ ಬೆಳಗ್ಗೆ ಬೆಂಗಳೂರಿಗೆ ತೆರಳಿ ಮತ್ತೆ ಸೋಮವಾರ ಬೆಳಗಾವಿಗೆ ವಾಪಸ್ ಆಗಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ನವ್ಯಶ್ರೀ ವಿರುದ್ಧ ರಾಜಕುಮಾರ ಟಾಕಳೆ ಕೇಸ್ ದಾಖಲಿಸಿದ್ದರು.
ಸ್ಫೋಟಕ್ಕೀಡಾದ ಕಾರ್ಖಾನೆ ಅನಧಿಕೃತ; ಗುಟ್ಟಾಗಿ ಫ್ಯಾಕ್ಟರಿ ಆರಂಭಿಸಿದ್ದ ಮಾಲೀಕ ಪರಾರಿ..

ಆ್ಯಂಬುಲೆನ್ಸ್ ಅಪಘಾತ ಪ್ರಕರಣ; ಗ್ರಾಮಸ್ಥರಿಂದ ಸಾಮೂಹಿಕವಾಗಿ ನಾಲ್ವರ ಅಂತಿಮಸಂಸ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − fourteen =
Remember me
