ಚಿತ್ರದುರ್ಗ:ದೇವರಿಗೆ ಕಾಣಿಕೆ-ಹರಕೆಯಾಗಿ ಬಂದ ವಸ್ತುಗಳನ್ನು ನಂತರ ಹರಾಜಿನ ಮೂಲಕ ಭಕ್ತರಿಗೆ ನೀಡುವುದು ಹಲವೆಡೆ ಇರುವ ಸಂಪ್ರದಾಯ. ಚಿತ್ರದುರ್ಗ ಜಿಲ್ಲೆಯಲ್ಲೂ ದೇವಸ್ಥಾನದ ರಥದ ಮುಕ್ತಿ ಬಾವುಟ ಭರ್ಜರಿ ಮೊತ್ತಕ್ಕೆ ಹರಾಜಾಗಿದೆ.
ಜಿಲ್ಲೆಯ ಚಳ್ಳಕೆರೆಯ ನಾಯಕನಹಟ್ಟಿ ಪವಾಡಪುರುಷ ಶ್ರೀಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನದ ರಥೋತ್ಸವದ ಬಳಿಕ ರಥದ ಮುಕ್ತಿ ಬಾವುಟವನ್ನು ಭರ್ಜರಿ ಮೊತ್ತಕ್ಕೆ ಹರಾಜು ಹಾಕಲಾಗಿದೆ. ಈ ಬಾವುಟವನ್ನು ಮಾಜಿ ಶಾಸಕ ಡಿ. ಸುಧಾಕರ್ 55 ಲಕ್ಷ ರೂಪಾಯಿ ನೀಡಿ ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ:ಹೊರರಾಜ್ಯಗಳಿಗೆ ನಂದಿನಿ ಹಾಲಿನ ಪೂರೈಕೆ ಸ್ಥಗಿತಗೊಳಿಸಿ; ಹೋಟೆಲ್​ ಮಾಲೀಕರಿಂದ ಕೆಎಂಎಫ್​ಗೆ ಪತ್ರ
ಹರಾಜಿನ ಆರಂಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜಯಪಾಲಯ್ಯ, ನವೀನ್​ ಕುಮಾರ್ ಎಂಬವರು ಭಾರಿ ಪೈಪೋಟಿ ನೀಡಿದರು. ಅದಾಗ್ಯೂ ಅವರೊಂದಿಗೆ ಮೇಲಾಟ ನಡೆಸಿದ ಮಾಜಿ ಶಾಸಕ ಸುಧಾಕರ್ ಕೊನೆಗೆ 55 ಲಕ್ಷ ರೂ. ಮೊತ್ತಕ್ಕೆ ಬಾವುಟ ತಮ್ಮದಾಗಿಸಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − one =
Remember me
