ಬೆಂಗಳೂರು:ನಾರ್ಕೋಟಿಕ್ ಕಂಟ್ರೋಲ್ ಬ್ಯುರೋ(ಎನ್‌ಸಿಬಿ) ಬೆಂಗಳೂರು ವಲಯ ಕಳೆದ ಎರಡು ತಿಂಗಳ ಅವಧಿಯಲ್ಲಿ 9 ಪ್ರಕರಣವನ್ನು ದಾಖಲಿಸಿಕೊಂಡು 27 ಮಂದಿ ಆರೋಪಿಗಳನ್ನು ಬಂಧಿಸಿ 15 ಲಕ್ಷ ರೂ. ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ. ಎಂದು ಎನ್‌ಸಿಬಿ ಬೆಂಗಳೂರು ವಲಯದ ನಿರ್ದೇಶಕ ಪಿ.ಅರವಿಂದನ್ ತಿಳಿಸಿದ್ದಾರೆ.
ಬಂಧಿತರಿಂದ ಹೈಡ್ರೋ ಗಾಂಜಾ, ಎಲ್‌ಎಸ್‌ಡಿ, ಹ್ಯಾಶಿಶ್ ಸೇರಿ 15 ಲಕ್ಷ ಮೌಲ್ಯದ ಡ್ರಗ್ಸ್‌ಗಳನ್ನು ಜಪ್ತಿ ಮಾಡಿಕೊಂಡಿದೆ. ಆರೋಪಿಗಳು ಡಾರ್ಕ್‌ನೆಟ್ ವೆಬ್‌ಸೈಟ್ ಮೂಲಕ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಮಾಕದವಸ್ತುಗಳನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದರು. ಮಾದಕವಸ್ತುವನ್ನು ಸ್ವೀಕರಿಸುವವರನ್ನು ಮಾತ್ರವಲ್ಲದೇ ಈ ದಂಧೆಯಲ್ಲಿ ಭಾಗಿಯಾಗಿರುವವರನ್ನು ಮತ್ತು ಆರ್ಥಿಕವಾಗಿ ಸಹಾಯ ಮಾಡುವವರನ್ನು, ಸಾಗಿಸುವವರನ್ನು ಮತ್ತು ಸರಬರಾಜು ಮಾಡುವವರನ್ನು ಸಹ ಬಂಧಿಸಲಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಡಾರ್ಕ್‌ನೆಟ್, ಟೆಲಿಗ್ರಾಂ ಮತ್ತು ವಾಟ್ಸ್‌ಆ್ಯಪ್ ಮೂಲಕ ಮಾದಕವಸ್ತು ಸರಬರಾಜು ಮಾಡುತ್ತಿದ್ದರು. ಕ್ರಿಪ್ಟೋ ಕರೆಸ್ಸಿ ಮತ್ತು ಆನ್‌ಲೈನ್ ಪೇಮೆಂಟ್ ಮೂಲಕ ಹಣ ಪಾವತಿಸುತ್ತಿದ್ದರು. ಬಂಧಿಸಿರುವ ಆರೋಪಿಗಳ ಪೈಕಿ 20-25 ವಯಸ್ಸಿನವರೇ ಹೆಚ್ಚಾಗಿ ಇದ್ದಾರೆ. ಹೆಚ್ಚಿನವರು ವಿದ್ಯಾರ್ಥಿಗಳು ಮತ್ತು ಸಾಫ್ಟ್​ವೇರ್ ಎಂಜಿನಿಯರ್‌ಗಳಾದ್ದಾರೆ. ಬಂಧಿತರ ಪೈಕಿ ಬಹುತೇಕರು ವಿದ್ಯಾವಂತರೇ ಆಗಿದ್ದು, ಕಲ್ಕತ್ತಾ, ಚೆನ್ನೈ, ದೆಹಲಿ ಸೇರಿ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಎನ್‌ಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡ್ರಗ್ ಸರಬರಾಜು ಮಾಡುತ್ತಿದ್ದ ಪ್ರಕರಣದಲ್ಲಿ ಆರೋಪಿ ಒಬ್ಬನನ್ನು ಪಶ್ಚಿಮ ಬಂಗಾಳದ ಸಿಲಿಗುರಿ ಎಂಬ ಸ್ಥಳದಲ್ಲಿ ಬಂಧಿಸಲಾಗಿತ್ತು. ಈತ ಲೋಕಲ್ ಕೊರಿಯರ್ ಕಂಪನಿ ಮೂಲಕ ದೇಶದ ವಿವಿದೆಡೆಗೆ ಡ್ರಗ್ಸ್ ಅನ್ನು ಸರಬರಾಜು ಮಾಡುತ್ತಿದ್ದ. ಇವನಿಗೆ ಗ್ರಾಹಕರು ವಾಟ್ಸ್‌ಆ್ಯಪ್ ಮೂಲಕ ಮಾದಕ ವಸ್ತುಗಳ ಆರ್ಡರ್ ನೀಡುತ್ತಿದ್ದರು. ಬಳಿಕ ಹಣವನ್ನು ಯುಪಿಐ ಮೂಲಕ ಪಾವತಿ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಹೆಸರು/ರಾಜ್ಯ/ದೇಶ ಬಂಧಿತರ ಸಂಖ್ಯೆಇರಾನ್ ೦೧ಬೆಂಗಳೂರು ೧೩ಮುಂಬೈ ೦೧ತಮಿಳುನಾಡು ೦೨ಹೈದಾರಾಬಾದ್ ೦೩ಮಿಜೋರಾಮ್ ೦೧ಹರಿಯಾಣ ೦೧ದೆಹಲಿ ೦೧ರಾಜಸ್ಥಾನ್ ೦೧ಕಲ್ಕಾತ್ತಾ ೦೨ಉತ್ತರ ಪ್ರದೇಶ ೦೧ಒಟ್ಟು ೨೭
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + nineteen =
Remember me
