ಬೆಂಗಳೂರು:ಬಿಬಿಎಂಪಿ ಕಾರ್ಪೋರೇಟರೊಬ್ಬರ ಮಗನಿಗೆ ಮಾದಕದ್ರವ್ಯ ನಿಯಂತ್ರಣ ದಳ (ಎನ್​ಸಿಬಿ)ದಿಂದ ನೋಟಿಸ್​ ನೀಡಲಾಗಿದೆ.
ಎನ್​ಸಿಬಿಯಿಂದ ಮುಂಬೈನಲ್ಲಿ ಬಂಧಿಯಾಗಿರುವ ಮಹಮ್ಮದ್ ರೆಹಮಾನ್ ಸಂಪರ್ಕದಲ್ಲಿ ರಾಜಾಜಿನಗರದ ಕಾರ್ಪೋರೇಟರ್ ಕೇಶವ ಮೂರ್ತಿ ಮಗ ಯಶಸ್​ ಇರುವ ಬಗ್ಗೆ ಮಾಹಿತಿ ತಿಳಿದಿದೆ. ಹೀಗಾಗಿ ನಿನ್ನೆ ಬೆಂಗಳೂರಿಗೆ ಆಗಮಿಸಿದ್ದ ಎನ್​ಸಿಬಿ ಅಧಿಕಾರಿಗಳು ಕಾರ್ಪೋರೇಟರ್ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ವೇಳೆ ಯಾವುದೇ ಮಾದಕ ವಸ್ತುಗಳು ಪತ್ತೆಯಾಗಿಲ್ಲ.
ಸದ್ಯ ವಿಚಾರಣೆಗೆ ಹಾಜರಾಗಲು ಕಾರ್ಪೋರೇಟರ್ ಮಗನಿಗೆ ಎನ್​ಸಿಬಿ ನೋಟಿಸ್ ನೀಡಿದೆ. ಮುಂಬೈ ಡ್ರಗ್ಸ್ ಪೆಡ್ಲರ್ ಮಹಮದ್ ರೆಹಮಾನ್ ಜತೆ ಸೇರಿ ಡ್ರಗ್ಸ್ ಖರೀದಿ ಮತ್ತು ಡ್ರಗ್ಸ್ ಮಾರಾಟ ಮಾಡಿರುವ ಅನುಮಾನದ ಮೇಲೆ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ:ನಾನು- ರಾಗಿಣಿ ಕ್ಲೋಸ್‌ ಕ್ಲೋಸ್‌: ಅರೆಸ್ಟ್‌ ಮಾಡಿ ಪ್ಲೀಸ್‌… ಸಿಸಿಬಿ ಕಚೇರಿಗೆ ಯುವಕನ ದೌಡು!
ಮುಂಬೈನ ಎನ್​ಸಿಬಿ ಕಚೇರಿಗೆ ಆಗಮಿಸಿ ವಿವರಣೆ ನೀಡುವಂತೆ ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ. ಡ್ರಗ್ಸ್ ಪೆಡ್ಲಿಂಗ್ ಮಾಡಿರುವುದಕ್ಕೆ ಹಲವು ಬಾರಿ ಹಣ ವರ್ಗಾವಣೆ ಮಾಡಿರುವ ಆಧಾರದ ಮೇಲೂ ನೋಟಿಸ್​ ನೀಡಲಾಗಿದೆ. ಸದ್ಯ ಕೇಶವ ಮೂರ್ತಿ ಮಗ ಯಶಸ್ ನಾಪತ್ತೆಯಾಗಿದ್ದು, ಆತನಿಗಾಗಿ ಎನ್​ಸಿಬಿ ಹುಡುಕಾಟ ನಡೆಸುತ್ತಿದೆ.(ದಿಗ್ವಿಜಯ ನ್ಯೂಸ್​)
ಭಾರತಕ್ಕೆ ಅಭಿನಂದನೆಗಳು ನನ್ನ ಮಗನನ್ನು ಬಂಧಿಸಿದ್ದೀರಿ: ರಿಯಾ ತಂದೆಯ ನೋವಿನ ಮಾತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − three =
Remember me
