ಬೆಂಗಳೂರು:ರಾಜ್ಯದ ಪದವಿಪೂರ್ವ ಶಿಕ್ಷಣ ಇಲಾಖೆಯು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್​ಸಿಇಆರ್​ಟಿ) ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳನ್ನು ಮಾತ್ರ ಅಳವಡಿಸಿಕೊಂಡಿರುವುದಾಗಿ ಪಿಯು ಇಲಾಖೆಯು ತಿಳಿಸಿದೆ.
ಆದರೆ, ಪ್ರಸ್ತುತ ವಿವಾದಕ್ಕೆ ಗುರಿಯಾಗಿರುವ ಎನ್​ಸಿಇಆರ್​ಟಿ 12ನೇ ತರಗತಿ ರಾಜ್ಯಶಾಸ್ತ್ರ ಪಠ್ಯದಲ್ಲಿ ಕಡಿತವಾಗಿರುವ ‘ಮಹಾತ್ಮ ಗಾಂಧಿ ಹತ್ಯೆ ಮತ್ತು ಆರ್​ಎಸ್​ಎಸ್ ನಿಷೇಧ ಕುರಿತ ವಿಷಯಗಳು’ ಹಾಗೂ 11ನೇ ತರಗತಿಯ ಸಮಾಜ ವಿಜ್ಞಾನದಲ್ಲಿನ ‘ಗುಜರಾತ್ ಗಲಭೆ’ಗೆ ಸಂಬಂಧಿಸಿದ ವಿಷಯಗಳು ರಾಜ್ಯಕ್ಕೆ ಅನ್ವಯಿಸುವುದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದೆ.
ಇದನ್ನೂ ಓದಿ:ಬಿಜೆಪಿ ಯಾಕಿನ್ನೂ ಟಿಕೆಟ್ ಘೋಷಿಸಿಲ್ಲ ಎಂದ ಡಿಕೆಶಿ; ಇತ್ತ ದೆಹಲಿಗೆ ಹಾರಲು ಸಜ್ಜಾದ ಬಿಎಸ್​ವೈ!
ರಾಜ್ಯಶಾಸ್ತ್ರ ಮತ್ತು ಸಮಾಜವಿಜ್ಞಾನ ವಿಷಯಗಳು ಕಲಾ ವಿಭಾಗಕ್ಕೆ ಸೇರಲಿವೆ. ಕಲಾ ವಿಭಾಗದ ವಿಷಯಗಳನ್ನು ರಾಜ್ಯಪಠ್ಯಕ್ರಮದ ವಿಷಯಗಳನ್ನೇ ಅಳವಡಿಸಿಕೊಳ್ಳಲಾಗಿದೆ. ಹೀಗಾಗಿ, ವಿವಾದಿತ ಪಠ್ಯಗಳು ರಾಜ್ಯಕ್ಕೆ ಅನ್ವಯವಾಗುವುದಿಲ್ಲ ಎಂದು ಪಿಯು ಇಲಾಖೆ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಅಳವಡಿಸಿಕೊಂಡಿರುವ ಪಠ್ಯ ವಿಷಯ: ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಜೀವಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ಗಣಿತ (ಪಿಸಿಎಂಬಿ) ವಿಷಯಗಳು ಹಾಗೂ ವಾಣಿಜ್ಯ ವಿಭಾಗದ ಲೆಕ್ಕಶಾಸ್ತ್ರ, ವ್ಯವಹಾರ ಅಧ್ಯಯನ ಮತ್ತು ಅರ್ಥಶಾಸ್ತ್ರ ವಿಷಯ ಸೇರಿ 7 ವಿಷಯಗಳನ್ನು ಮಾತ್ರ ಎನ್​ಸಿಇಆರ್​ಟಿ ಪಠ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಪಿಯು ಇಲಾಖೆ ತಿಳಿಸಿದೆ. ರಾಜ್ಯದಲ್ಲಿ 2023-24ನೇ ಸಾಲಿಗೆ 12ನೇ ತರಗತಿ ಪಠ್ಯಪುಸ್ತಕದಲ್ಲಿ ಕೆಲ ಅಧ್ಯಾಯಗಳನ್ನು ಕಡಿತಗೊಳಿಸಿದೆ. ರಾಜ್ಯದಲ್ಲಿ ಅಳವಡಿಸಿಕೊಂಡಿರುವ ಎನ್​ಸಿಇಆರ್​ಟಿ ಪರಿಷ್ಕೃತ ಎಲ್ಲ ಪಠ್ಯವಸ್ತುವಿನಲ್ಲಿಯೂ ಸ್ವಲ್ಪ ಕಡಿತ ಮಾಡಲಾಗಿದೆ. ಪರಿಷ್ಕೃತ ಪಠ್ಯವಸ್ತುವನ್ನೇ ರಾಜ್ಯದಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಪಿಯು ಇಲಾಖೆ ನಿರ್ದೇಶಕಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ.
ಇದನ್ನೂ ಓದಿ:ಆರೋಗ್ಯವೇ ಭಾಗ್ಯ; ಉತ್ತಮ ಆರೋಗ್ಯ ನಾವು ಖರೀದಿಸಬಹುದಾದ ವಸ್ತುವಲ್ಲ ಎಂಬುದು ನೆನಪಿರಲಿ!
ಒಂದು ವೇಳೆ ವಿದ್ಯಾರ್ಥಿಗಳು ಈಗಾಗಲೆ ಹಳೆಯ ಪುಸ್ತಕಗಳನ್ನು ಖರೀದಿಸಿದ್ದರೆ ಕಡಿತಗೊಳಿಸಿರುವ ಅಧ್ಯಾಯಗಳನ್ನು ಹೊರತುಪಡಿಸಿ ಉಳಿದ ವಿಷಯಗಳ ಅಭ್ಯಾಸಕ್ಕೆ ಬಳಸಿಕೊಳ್ಳಬಹುದು. ಎನ್​ಸಿಇಆರ್​ಟಿ ಯಾವ್ಯಾವ ವಿಷಯದ ಪಠ್ಯದಲ್ಲಿ ಯಾವ್ಯಾವ ಅಧ್ಯಾಯ ಕಡಿತಗೊಳಿಸಿದೆ ಎಂಬುದನ್ನು ಇಲಾಖೆಯ ವೆಬ್​ಸೈಟ್ ಟ್ಠಛಿ.kಚ್ಟ್ಞಠಿಚkಚ.ಜಟಡ.ಜ್ಞಿ ನಲ್ಲಿ ಪ್ರಕಟಿಸಿದ್ದು ವಿದ್ಯಾರ್ಥಿಗಳು ಪರಿಶೀಲಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಪಿಯುಸಿ ವಿಜ್ಞಾನ ವಿಭಾಗದ 4 ಹಾಗೂ ವಾಣಿಜ್ಯ ವಿಭಾಗದ 3 ವಿಷಯಗಳನ್ನು ಮಾತ್ರ ಎನ್​ಸಿಇಆರ್​ಟಿ ಪಠ್ಯಪುಸ್ತಕಗಳಾಗಿ ಅಳವಡಿಸಿಕೊಳ್ಳಲಾಗಿದೆ. ಈ ವಿಷಯಗಳಲ್ಲಿಯೂ ಸ್ವಲ್ಪ ಪಠ್ಯ ಕಡಿತವಾಗಿದೆ. ಪರಿಷ್ಕೃತ ಪಠ್ಯಪುಸ್ತಕಗಳನ್ನೇ ವಿದ್ಯಾರ್ಥಿಗಳು ಖರೀದಿಸಲಿ.| ಸಿಂಧು ಬಿ. ರೂಪೇಶ್, ಪಿಯು ಇಲಾಖೆ ನಿರ್ದೇಶಕಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
