ತುಮಕೂರು:ಎನ್​ಸಿಐಬಿ (ನ್ಯಾಷನಲ್​ ಕ್ರೈಂ ಇನ್ವೆಸ್ಟಿಗೇಶನ್​ ಬ್ಯೂರೋ) ಹೆಸರಲ್ಲಿ ನಕಲಿ ಐಡಿ ಕಾರ್ಡ್​ ಸೃಷ್ಟಿಸಿಕೊಂಡ ಖತರ್ನಾಕ್​ ವಂಚಕನೊಬ್ಬ ಕ್ರೈಂ ಇನ್​ಫರ್ಮೇಶನ್​ ಆಫೀಸರ್​ ಸೋಗಿನಲ್ಲಿ ವ್ಯಾಪಾರಿಗಳನ್ನು ಬೆದರಿಸಿ ಹಣ ದೋಚುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ವಂಚಕನೊಂದಿಗೆ ಕೈ ಜೋಡಿಸಿದ ಮತ್ತೊಬ್ಬನೂ ಎನ್‌ಜಿಒ ಸಾಮಾಜಿಕ ಕಾರ್ಯಕರ್ತನ ಹೆಸರಲ್ಲಿ ಸುಲಿಗೆಗೆ ಇಳಿದಿದ್ದ.
ನಗರದ ಅಶೋಕ ರಸ್ತೆಯಲ್ಲಿರುವ ಟಕೀಲಾ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಪೋಟೋ ತೆಗೆದು ಸಿಬ್ಬಂದಿಯನ್ನು ಬೆದರಿಸಿ 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟು 15 ಸಾವಿರ ಹಣ ದೋಚಿದ್ದ ಆರೋಪಿಗಳೀಗ ನಗರ ಠಾಣೆ ಪೊಲೀಸರ ಅತಿಥಿಗಳಾಗಿದ್ದಾರೆ.
ಗುಬ್ಬಿ ಕುವೆಂಪು ನಗರದ ಕಾರ್ತಿಕ್‌ರಾಜ್(26) ಹಾಗೂ ತುಮಕೂರು ತಾಲೂಕು ಕೆಸ್ತೂರಿನ ಹೇಮಂತ್(25) ಬಂಧಿತರು. ಆರೋಪಿಗಳು ಎನ್‌ಸಿಐಬಿ ಮತ್ತು ಗಂಧದಗುಡಿ ಎಂಬ ಎನ್‌ಜಿಒ ಸಂಸ್ಥೆಗಳ ಹೆಸರಿನಲ್ಲಿ 2 ಗುರುತಿನ ಚೀಟಿ ಇಟ್ಟುಕೊಂಡು ವಿವಿಧೆಡೆ ಬೆದರಿಸಿ ಹಣ ಕೀಳುತ್ತಿದ್ದರು ಎಂದು ವಿಚಾರಣೆ ವೇಳೆಯಲ್ಲಿ ಬಾಯ್ಬಿಟ್ಟಿದ್ದಾರೆ.

ಸಿಬಿಐ ಅಂತೆಯೇ ಎನ್‌ಸಿಐಬಿ ಇದೆ. ನಾನು ಅದರ ಉದ್ಯೋಗಿ ಎಂದು ನಕಲಿ ಐಡಿ ಕಾರ್ಡ್​ ತೋರಿಸಿ ವ್ಯಾಪಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು ಎಂದು ಗೊತ್ತಾಗಿದೆ.
ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು, ತಲೆ-ದೇಹ ಇಬ್ಭಾಗ!

ಮಟಮಟ ಮಧ್ಯಾಹ್ನ ಒಂದೇ ಕುಟುಂಬದ ಮೂರು ಮಕ್ಕಳ ಪ್ರಾಣ ಹೊತ್ತೊಯ್ದ ಜವರಾಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
