ನವದೆಹಲಿ:ಲೋಕಸಭೆಯಲ್ಲಿ ಸಂಪೂರ್ಣ ಸಂಖ್ಯಾಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ, ಇದೀಗ ರಾಜ್ಯಸಭೆಯಲ್ಲೂ ಬಹುಮತ ಹೊಂದುವತ್ತ ದಾಪುಗಾಲಿಟ್ಟಿದೆ. ಜೂ. 19ರಂದು ನಡೆಯಲಿರುವ ರಾಜ್ಯಸಭೆಯ 24 ಸ್ಥಾನಗಳ ದ್ವೈವಾರ್ಷಿಕ ಚುನಾವಣೆ (ಹಿಂದೆ ಘೋಷಣೆಯಾಗಿದ್ದ 55 ಸ್ಥಾನದ ಪೈಕಿ 18 ಸ್ಥಾನಗಳು ಸೇರಿ) ನಂತರ ಬಹá-ಮತದತ್ತ ಸಾಗಲಿದೆ. ಮೂಲಕ ಎನ್​ಡಿಎ ಮೈತ್ರಿಕೂಟ ಸಂಸತ್ತಿನ ಮೇಲ್ಮನೆಯಲ್ಲಿ ಬಹುಮತಕ್ಕೆ 123 ಸ್ಥಾನ ಅಗತ್ಯವಿದ್ದು, ಎನ್​ಡಿಎ ಸ್ಥಾನ 115ರ ಸಮೀಪಕ್ಕೆ ಬರಲಿದೆ. ಪ್ರಸಕ್ತ ಚುನಾವಣೆಯಲ್ಲಿ ಎನ್​ಡಿಎ ಪಾಲುದಾರ ಪಕ್ಷಗಳಾದ ಸಂಯುಕ್ತ ಜನತಾ ದಳ 5, ಶಿರೋಮಣಿ ಅಕಾಲಿ ದಳ 3, ಅಸ್ಸಾಂ ಗಣ ಪರಿಷದ್, ಭಾರತೀಯ ರಿಪಬ್ಲಿಕನ್ ಪಕ್ಷ (ಎ), ಬೋಡೋಲ್ಯಾಂಡ್ ಪೀಪಲ್ಸ್ ಪಾರ್ಟಿ, ಲೋಕ ಜನಶಕ್ತಿ ಪಕ್ಷ, ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್, ನಾಗಾ ಪೀಪಲ್ಸ್ ಫ್ರಂಟ್, ನ್ಯಾಷನಲ್ ಪೀಪಲ್ಸ್ ಪಾರ್ಟಿ ಮತ್ತು ಮಿಜೋ ನ್ಯಾಷನಲ್ ಫ್ರಂಟ್ ತಲಾ ಒಂದು ಸ್ಥಾನಗಳಲ್ಲಿ ಗೆಲ್ಲಲಿದ್ದು ಒಟ್ಟು 16 ಸ್ಥಾನಗಳನ್ನು ಗಳಿಸಲಿದೆ. ಇದರಿಂದ ರಾಜ್ಯಸಭೆಯಲ್ಲಿ ಎನ್​ಡಿಎ ಸದಸ್ಯರ ಸಂಖ್ಯೆ 100 ಆಗಲಿದೆ. ನಾಲ್ವರು ನಾಮನಿರ್ದೇಶಿತ, ಇಬ್ಬರು ಯಾವ ಪಕ್ಷಕ್ಕೂ ಸೇರದ ಸದಸ್ಯರ ಬೆಂಬಲವೂ ಸಿಕ್ಕಿ ಬಲ 106 ಸ್ಥಾನಕ್ಕೆ ಏರಲಿದೆ. ಅದರೊಂದಿಗೆ ಎಐಎಡಿಎಂಕೆ ಪಕ್ಷದ ಒಂಬತ್ತು ಸದಸ್ಯರ ಬೆಂಬಲದಿಂದ ಬಲ 115ಕ್ಕೆ ಏರಲು ನೆರವಾಗಲಿದೆ. ಜಾರ್ಖಂಡ್​ನಲ್ಲಿ ಗೆಲ್ಲಲು ಬಿಜೆಪಿಗೆ ಸಾಧ್ಯವಾಗದಿದ್ದರೆ ಈ ಸಂಖ್ಯೆ ಸ್ವಲ್ಪ ಬದಲಾಗಬಹುದು.
ಸದ್ಯದ ಲೆಕ್ಕಾಚಾರದ ಪ್ರಕಾರ, ಬಿಜೆಪಿ ಗುಜರಾತ್​ನಲ್ಲಿ ಮೂರು ಸ್ಥಾನಗಳನ್ನು ಗೆಲ್ಲಲಿದೆ. ಮಧ್ಯ ಪ್ರದೇಶ, ಕರ್ನಾಟಕದಲ್ಲಿ ತಲಾ ಎರಡು, ರಾಜಸ್ಥಾನ, ಜಾರ್ಖಂಡ್, ಮಣಿಪುರ ಮತ್ತು ಅರುಣಾಚಲ ಪ್ರದೇಶದಲ್ಲಿ ತಲಾ ಒಂದು ಸ್ಥಾನ ಗಳಿಸಲಿದೆ. ಉತ್ತರ ಪ್ರದೇಶ, ಬಿಹಾರ ಮತ್ತು ಕೇರಳದ ತಲಾ ಒಂದು ಸ್ಥಾನಕ್ಕೆ ಕೂಡ ಉಪಚುನಾವಣೆ ನಡೆಯಲಿದೆ. ಈ ಉಪಚುನಾವಣೆಯಲ್ಲಿ ಎನ್​ಡಿಎಗೆ ಎರಡು ಹಾಗೂ ಪ್ರತಿಪಕ್ಷಕ್ಕೆ ಒಂದು ಸ್ಥಾನ ಲಾಭವಾಗಲಿದೆ.
ತೆರವಾಗುವ 55 ಸ್ಥಾನಗಳ ಭರ್ತಿಗೆ ಚುನಾವಣೆ ಆಯೋಗ ಏಪ್ರಿಲ್​ನಲ್ಲಿ ಪ್ರಕ್ರಿಯೆ ಆರಂಭಿಸಿತ್ತು. ಆ ಪೈಕಿ 37 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 18 ಸ್ಥಾನಗಳಿಗೆ ನಡೆಯಬೇಕಿದ್ದ ಚುನಾವಣೆಯನ್ನು ಕರೊನಾ ಲಾಕ್​ಡೌನ್ ಕಾರಣ ಮುಂದೂಡಲಾಗಿತ್ತು. ನಂತರ ಆ ಸ್ಥಾನಗಳ ಜತೆ, ಜೂನ್-ಜುಲೈನಲ್ಲಿ ತೆರವಾಗುವ ಕರ್ನಾಟಕದ ನಾಲ್ಕು, ಅರುಣಾಚಲ ಪ್ರದೇಶ, ಮಿಜೋರಾಂನ ತಲಾ ಒಂದು ಸ್ಥಾನಗಳಿಗೆ ಕೂಡ ಆಯೋಗ ಜೂನ್ 19ಕ್ಕೆ ಚುನಾವಣೆ ನಿಗದಿಪಡಿಸಿದೆ.ಇದನ್ನೂ ಓದಿ:ಅನ್ಯ ಜಾತಿಯವನೊಂದಿಗೆ ಸರಸ-ಸಲ್ಲಾಪ ನಡೆಸಿ ಬಸಿರಾದ ಮಗಳನ್ನು ತಂದೆ-ತಾಯಿಯೇ ಕೊಂದುಬಿಟ್ಟರು…
245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಮೇಲುಗೈ ಹೊಂದಿದ್ದ ಪ್ರತಿಪಕ್ಷಗಳ ಬಲ ಈಗ ಕುಸಿಯುತ್ತಾ ಸಾಗಿದೆ. ಅವುಗಳ ಒಟ್ಟು ಬಲ 90 ಆಗಲಿದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ 39 ಸ್ಥಾನ ಹೊಂದಿದ್ದು 37ಕ್ಕೆ ಕುಸಿಯಲಿದೆ. ಕರ್ನಾಟಕ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂನಿಂದ ತಲಾ ಒಂದು ಸ್ಥಾನ ಕಳೆದುಕೊಳ್ಳುವ ಕಾಂಗ್ರೆಸ್, ರಾಜಸ್ಥಾನದಲ್ಲಿ ಒಂದು ಸ್ಥಾನದ ಲಾಭ ಪಡೆಯಲಿದೆ. ಕರ್ನಾಟಕದಲ್ಲಿ ಜಾತ್ಯತೀತ ಜನತಾ ದಳ ಒಂದು ಸ್ಥಾನ ಪಡೆಯಲಿದೆ.
ಎನ್​ಡಿಎ ಮತ್ತು ಯುಪಿಎ ಮಿತ್ರ ಪಕ್ಷಗಳಲ್ಲದಿದ್ದರೂ ಮೇಲ್ಮನೆಯಲ್ಲಿ ಒಟ್ಟು 22 ಸದಸ್ಯರನ್ನು ಹೊಂದಿರುವ ಬಿಜು ಜನತಾ ದಳ (9), ತೆಲಂಗಾಣ ರಾಷ್ಟ್ರ ಸಮಿತಿ (7) ಮತ್ತು ವೈಎಸ್​ಆರ್ ಕಾಂಗ್ರೆಸ್ ಪಕ್ಷ (6) ವಿಷಯಾಧಾರಿತವಾಗಿ ಸರ್ಕಾರಕ್ಕೆ ಬೆಂಬಲ ನೀಡುವ ಪ್ರವೃತ್ತಿ ತೋರುತ್ತಿರುವುದರಿಂದ ಸರ್ಕಾರಕ್ಕೆ ಹೆಚ್ಚಿನ ಬಲ ದೊರೆಯುವುದು ನಿಶ್ಚಿತ. ಒಟ್ಟು 13 ಸ್ಥಾನ ಹೊಂದಿರುವ ಸಮಾಜವಾದಿ ಪಕ್ಷ (8), ಬಹುಜನ ಸಮಾಜ ಪಕ್ಷ(4) ಹಾಗೂ ತೆಲುಗುದೇಶಂ (1) ಪಕ್ಷಗಳ ಬೆಂಬಲವನ್ನು ಪಡೆಯಲೂ ಬಿಜೆಪಿ ನಾಯಕರು ಕಸರತ್ತು ನಡೆಸಬಹುದು.ಇದನ್ನೂ ಓದಿ:ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಕೊವಿಡ್​-19 ಟೆಸ್ಟ್ ರಿಪೋರ್ಟ್​ನಲ್ಲಿ ಹೊರಬಿದ್ದ ಸತ್ಯವೇ ಬೇರೆ…
ರಾಜ್ಯಸಭೆಯಲ್ಲಿ ಬಹುತಮತದ ಕೊರತೆಯ ಕಾರಣ ಹಿಂದೆ ದಿಢೀರ್ ತ್ರಿವಳಿ ತಲಾಖ್ ತಡೆ ಮಸೂದೆ ಸೇರಿ ಹಲವು ಮಸೂದೆಗಳಿಗೆ ವಿರೋಧ ಪಕ್ಷಗಳು ಅಡ್ಡಿಪಡಿಸಿದ್ದವು. ಈಗ ಮೇಲ್ಮನೆಯಲ್ಲಿ ಎನ್​ಡಿಎಗೆ ಸರಳ ಬಹುಮತ ಪ್ರಾಪ್ತಿಯಾದರೆ ಇಂತಹ ಅಡಚಣೆಗಳು ತಪ್ಪುತ್ತವೆ.ಇದನ್ನೂ ಓದಿ:ಕೊವಿಡ್​-19ನಿಂದ ನರಳಿ ಮೃತಪಟ್ಟ ಪತ್ರಕರ್ತನ ಕೊನೇ ಸಂದೇಶ ನೋಡಿ ಸಾರ್ವಜನಿಕರು ಕೆಂಡಾಮಂಡಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 3 =
Remember me
