ರೇಷನ್ ಕಾರ್ಡ್​ಗೆ ಆಧಾರ್ ಜೋಡಿಸುವ (ಇ-ಕೆವೈಸಿ) ಪ್ರಕ್ರಿಯೆಗೆ ನಿರಾಸಕ್ತಿ ತೋರಿರುವ ಕಾರ್ಡ್​ದಾರರಿಗೆ ಮಾ.31ರವರೆಗೆ ಗಡುವು ನೀಡಿರುವ ಆಹಾರ ಇಲಾಖೆ, ಮುಂದಿನ ಹಂತದಲ್ಲಿ ಪಡಿತರ ವಿತರಣೆಯನ್ನೇ ತಾತ್ಕಾಲಿಕವಾಗಿ ತಡೆ ಹಿಡಿಯಲು ತೀರ್ವನಿಸಿದೆ. ಈವರೆಗೆ ಕೇವಲ 1.6 ಕೋಟಿ (ಶೇ.36)ಯಷ್ಟೇ ಇಕೆವೈಸಿ ಆಗಿದೆ.
ಏಕೆ ಇಕೆವೈಸಿ?:4 ವರ್ಷಗಳ ಹಿಂದೆ ಬೋಗಸ್ ಕಾರ್ಡ್ ತಡೆಯುವ ಸಲುವಾಗಿ ರೇಷನ್ ಕಾರ್ಡ್ ಪರಿಶೀಲನೆ ಕಾರ್ಯ ನಡೆದಿತ್ತು. ನಂತರ ಆಧಾರ್ ಜೋಡಣೆ ನಿಯಮ ಜಾರಿಗೊಂಡ ಬಳಿಕ ಕಾರ್ಡ್ ಪರಿಶೀಲನೆ ಕಾರ್ಯವಾಗಿರಲಿಲ್ಲ. ಪ್ರಸ್ತುತ ರಾಜ್ಯದಲ್ಲಿ 7,69,585 ಅಂತ್ಯೋದಯ, 1,16,84,911 ಬಿಪಿಎಲ್, 19,41,692 ಎಪಿಎಲ್ ಸೇರಿ ಒಟ್ಟು 1,43,96,188 ಕಾರ್ಡ್ ಗಳಿದ್ದು, 4,87,33,221 ಸದಸ್ಯರಿದ್ದಾರೆ. ಕಳೆದ 4 ವರ್ಷಗಳಲ್ಲಿ ಆಂದಾಜು 10 ಲಕ್ಷ ಫಲಾನುಭವಿಗಳು ಮೃತಪಟ್ಟಿರುತ್ತಾರೆ. ಆದರೆ ಮೃತರ ಹೆಸರಿನಲ್ಲೇ ರೇಷನ್ ಪಡೆಯುತ್ತಿರುವ ಆರೋಪಗಳಿರುವುದರಿಂದ ಇ-ಕೆವೈಸಿ ನಿಯಮ ಜಾರಿಗೆ ತರಲಾಗಿದೆ.
ಏನು ಮಾಡಬೇಕು?:ದೃಢೀಕರಣ ವೇಳೆ ಎಸ್ಸಿ ಮತ್ತು ಎಸ್ಟಿ ಪಂಗಡದ ಫಲಾನುಭವಿಗಳು ಕಡ್ಡಾಯವಾಗಿ ಜಾತಿ ಪ್ರಮಾಣಪತ್ರ ನೀಡಬೇಕು. ಎಲ್ಲ ಫಲಾನುಭವಿಗಳು ಗ್ಯಾಸ್ ಸಂಪರ್ಕದ ಮಾಹಿತಿ ಕೊಡಬೇಕು.
250 ಕೋಟಿ ರೂಪಾಯಿ ಉಳಿತಾಯ
ಪ್ರತಿ ಫಲಾನುಭವಿಗೆ ನೀಡುವ 7 ಕೆಜಿ ಅಕ್ಕಿ ಯನ್ನು 10 ಲಕ್ಷ ಫಲಾನುಭವಿಗಳಿಗೆ ಗುಣಕಾರ ಮಾಡಿದರೆ 7 ಸಾವಿರ ಮೆಟ್ರಿಕ್ ಟನ್ ಆಗುತ್ತದೆ. 7 ಸಾವಿರ ಮೆಟ್ರಿಕ್ ಟನ್ ಅನ್ನು ಪ್ರತಿ ಕೆಜಿಗೆ -ಠಿ;30ನಂತೆ ಲೆಕ್ಕ ಹಾಕಿದರೆ 21 ಕೋಟಿ ರೂ. ಆಗುತ್ತದೆ. ಈ ಮೊತ್ತವನ್ನು ಪ್ರತಿ ತಿಂಗಳಂತೆ 1 ವರ್ಷಕ್ಕೆ ಲೆಕ್ಕ ಹಾಕಿದರೆ -ಠಿ;252 ಕೋಟಿ ಆಗಲಿದೆ.
ಪ್ರಕ್ರಿಯೆ ಹೇಗೆ?
ರೇಷನ್ ಕಾರ್ಡ್​ನಲ್ಲಿರುವ ಪ್ರತಿಯೊಬ್ಬರೂ ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ್ ದೃಢೀಕರಣ ಮಾಡಿಸಬೇಕು. ಸರ್ಕಾರ ಪ್ರತಿ ಫಲಾನುಭವಿ ದೃಢೀಕರಣಕ್ಕೆ 5 ರೂ.ನಂತೆ ನೋಂದಣಿಗೆ ಗರಿಷ್ಠ 20 ರೂ.ನಂತೆ ನ್ಯಾಯಬೆಲೆ ಅಂಗಡಿಗಳಿಗೆ ಪಾವತಿಸಲಿದೆ. ವರ್ತಕರಿಗೆ ಇಲಾಖೆಯಿಂದ ನೀಡಿರುವ ಲಾಗಿನ್ ಐಡಿಯಲ್ಲೇ ಇಕೆವೈಸಿ ಮಾಡಿಸಬೇಕು. ಕಾರ್ಡ್ ಸಂಖ್ಯೆ ನಮೂದಿಸಿದರೆ ಎಷ್ಟು ಸದಸ್ಯರು ಇದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಿಗುತ್ತದೆ. ಬಳಿಕ ಎಲ್ಲರೂ ಆಧಾರ್ ದೃಢೀಕರಣ ಮಾಡಿಸಬೇಕು.
ಬೆಂಗಳೂರು ಫಸ್ಟ್
ಬೆಂಗಳೂರು-ಶೇ.50, ರಾಯಚೂರು-48, ವಿಜಯಪುರ-41.78, ಯಾದಗಿರಿ-41.65, ಬಳ್ಳಾರಿ- 41.01, ಬೆಳಗಾವಿ-40.85, ಬಾಗಲಕೋಟೆ-39.32, ದಕ್ಷಿಣ ಕನ್ನಡ-38.76, ಕೊಪ್ಪಳ-36.36, ಧಾರವಾಡ-36.11, ಕಲಬುರಗಿ-35.29, ಶಿವಮೊಗ್ಗ-34.68, ದಾವಣಗೆರೆ- 34.23, ಗದಗ-34.20, ಹಾಸನ-33.93, ಕೊಡಗು-33.90, ತುಮಕೂರು-33.69, ಚಿಕ್ಕಮಗಳೂರು-33.13, ಬೀದರ್-33.06, ಮೈಸೂರು-32.75, ಬೆಂಗಳೂರು ಗ್ರಾಮಾಂತರ- 32.39, ಚಿತ್ರದುರ್ಗ-32.11, ಹಾವೇರಿ-30.81, ಉಡುಪಿ-30.27, ರಾಮನಗರ-29.79, ಮಂಡ್ಯ-28.11, ಉತ್ತರ ಕನ್ನಡ-27.75, ಚಾಮರಾಜನಗರ-24.10, ಚಿಕ್ಕಬಳ್ಳಾಪುರದಲ್ಲಿ ಶೇ.22.93 ಪ್ರಕ್ರಿಯೆ ಪೂರ್ಣಗೊಂಡಿದೆ.
| ಬೇಲೂರು ಹರೀಶ ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
