ಚಿಕ್ಕಮಗಳೂರು:ರಾಜ್ಯದಲ್ಲಿ ಲವ್ ಜಿಹಾದ್ ತಡೆಯುವ ಸಲುವಾಗಿ ಮತಾಂತರ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಕಠಿಣ ಕಾನೂನು ರೂಪಿಸುವ ಅಗತ್ಯವಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೇರೆ ಬೇರೆ ರಾಜ್ಯಗಳಲ್ಲಿ ಆಗಿರುವ ಕಾನೂನಿನ ಸಾಧಕ-ಬಾಧಕಗಳ ಬಗ್ಗೆ ಚರ್ಚೆಯಾಗಬೇಕು. ಇದನ್ನು ಸಂವಿಧಾನದತ್ತವಾಗಿ ಹೇಗೆ ರೂಪಿಸಬಹುದು ಎಂಬ ಬಗ್ಗೆ ಪೊಲೀಸ್ ಇಲಾಖೆ ಸೇರಿದಂತೆ ಬೇರೆ ಬೇರೆ ಕಡೆಯಿಂದ ವರದಿ ತರಿಸಿಕೊಳ್ಳಬೇಕು. ಚರ್ಚೆಗಳು, ಅಧ್ಯಯನಗಳು ನಡೆಯಬೇಕು. ಈ ಕಾಯ್ದೆ ರೂಪಿಸುವ ವಿಚಾರದಲ್ಲಿ ಮುಖ್ಯಮಂತ್ರಿಗಳು, ಗೃಹಸಚಿವರು ನಿರ್ಧಾರ ಕೈಗೊಳ್ಳಬೇಕು ಎಂದರು.
ಮುಖ್ಯಮಂತ್ರಿಗಳು, ಗೃಹ ಸಚಿವರು ಉನ್ನತ ಪೊಲೀಸ್ ಅಧಿಕಾರಿಗಳು ನ್ಯಾಯಾಂಗ ಇಲಾಖೆಯವರೊಂದಿಗೂ ಮಾತನಾಡಬೇಕು. ಕಾನೂನು ಜಾರಿ ಮಾಡಿದರೆ ಅದು ನ್ಯಾಯಾಂಗದಲ್ಲಿ ರಕ್ಷಣೆ ಸಿಗಬೇಕು. ಗಟ್ಟಿಯಾಗಿ ಉಳಿಯಬೇಕು. ಈ ದೃಷ್ಟಿಕೋನದಿಂದ ಕಾನೂನು ರೂಪಿಸಬೇಕು. ಇದಕ್ಕೆ ನಮ್ಮೆಲ್ಲರ ಹಾಗೂ ದೇಶಭಕ್ತರ ಅನುಮತಿ ಇದೆ. ಒಟ್ಟಿನಲ್ಲಿ ಲವ್ ಜಿಹಾದ್ ಹಾಗೂ ಮತಾಂತರ ಮಾಡುವವರಿಗೆ ಉಗ್ರ ಶಿಕ್ಷೆಯಾಗಬೇಕೆಂದು ನಮ್ಮ ಆಗ್ರಹವಿದೆ ಎಂದು ಹೇಳಿದರು.
* ಭಯೋತ್ಪಾದನೆಯ ಇನ್ನೊಂದು ಮುಖಲವ್ ಜಿಹಾದ್ ಈಗ ಕೇವಲ ಪ್ರೀತಿ, ಪ್ರೇಮ, ಮದುವೆ ಮಾತ್ರವಾಗಿ ಉಳಿದಿಲ್ಲ. ಭಯೋತ್ಪಾದಕತೆಯ ಇನ್ನೊಂದು ಮುಖವೂ ಅದಕ್ಕಿದೆ. ಒಂದು ಕೋಮಿನ ಜನಸಂಖ್ಯೆ ಹೆಚ್ಚು ಮಾಡುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಅವರ ಕೋಮಿನವರೇ ಬೇರೆ ಬೇರೆ ಭಾಗದ ಪ್ರಾರ್ಥನಾಲಯಗಳಲ್ಲಿ ಈ ಕುರಿತು ಭಾಷಣ ಮಾಡಿರುವುದು ಬೆಳಕಿಗೆ ಬರುತ್ತಿದೆ. ಓವೈಸಿಯಂತಹ ಕೋಮುವಾದಿಗಳು ಈ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದಾರೆ. ಲವ್‍ಜಿಹಾದ್ ಹೆಸರಲ್ಲಿ ದೇಶಾದ್ಯಂತ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದರು.
ಕರ್ನಾಟಕದ ಕರಾವಳಿ, ಬೆಂಗಳೂರು, ಬೇರೆ ಬೇರೆ ಭಾಗದಲ್ಲಿ ಈ ಷಡ್ಯಂತ್ರ ನಡೆಯುತ್ತಿದ್ದು, ಉಡುಪಿಯಲ್ಲಿ ಈಚೆಗೆ 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಯುವಕನೊಬ್ಬನ ಜತೆ ನಾಪತ್ತೆಯಾಗಿದ್ದಾಳೆ. ಪೂರ್ವಯೋಜನೆ ರೂಪಿಸಿ ಮೊಬೈಲ್‍ಗಳನ್ನು ಮನೆಯಲ್ಲೇ ಬಿಟ್ಟು ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸಿ ಆಕೆಯನ್ನು ಕರೆದೊಯ್ಯಲಾಗಿದೆ. ಚಿಕ್ಕ ಮಕ್ಕಳಿಗೆ ಹಣದ ಆಮಿಷವೊಡ್ಡಿ ಲವ್ ಜಿಹಾದ್ ಹೆಸರಿನಲ್ಲಿ ತಮ್ಮ ಸಮಾಜಕ್ಕೆ ಪರಿವರ್ತಿಸುವ ಯತ್ನ ನಡೆದಿದೆ. ಇದನ್ನು ತಡೆಯಲು ಕಠಿಣ ಕಾನೂನು ರೂಪಿಸುವ ಅಗತ್ಯವಿದೆ ಎಂದರು.
* ಚಾರ್ಮಾಡಿ ಘಾಟಿ ರಸ್ತೆ ಅಭಿವೃದ್ಧಿಗೆ ಕೋರಿಕೆಪ್ರತಿ ವರ್ಷ ಕುಸಿಯುತ್ತಿರುವ ಚಾರ್ಮಾಡಿ ಘಾಟಿ ರಸ್ತೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲು ಕೇಂದ್ರ ಸರ್ಕಾರವನ್ನು ಕೋರಲಾಗಿದೆ ಎಂದು ತಿಳಿಸಿದ ಅವರು, ಈ ರಸ್ತೆಗೆ ತಡೆಗೋಡೆಗಳನ್ನು ಕಟ್ಟುವ ಕೆಲಸ ಈಗಲೂ ನಡೆಯುತ್ತಿದ್ದು, ಇದನ್ನು ಇನ್ನಷ್ಟು ವಿಸ್ತರಿಸುವ ಸಂಬಂಧ ಯೋಜನೆ ರೂಪಿಸಲು ಸೂಚಿಸಿರುವುದಾಗಿ ಹೇಳಿದರು.
* ಶಿಶಿಲಾ-ಭೈರಾಪುರ ರಸ್ತೆಗೆ ಪ್ರಯತ್ನಶಿಶಿಲಾ-ಭೈರಾಪುರ ರಸ್ತೆ ಆದಲ್ಲಿ ಚಿಕ್ಕಮಗಳೂರಿನಿಂದ ಮಂಗಳೂರಿಗೆ ಅಂತರ ಕಡಿಮೆಯಾಗುತ್ತಿದೆ. ಇಂಧನ ಹಾಗೂ ಸಮಯ ಎರಡೂ ಉಳಿತಾಯವಾಗುತ್ತದೆ. ಆದರೆ ರಸ್ತೆ ನಿರ್ಮಾಣ ಯೋಜನೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದು ಪರಿಸರ ಇಲಾಖೆಗೆ ಸಂಬಂಧಿಸಿದ್ದು, ಅರಣ್ಯಕ್ಕೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಈ ಇಲಾಖೆ ತುಂಬಾ ಗಟ್ಟಿ ನಿಲುವು ತಾಳಿದೆ. ಅದು ಗಂಭೀರ ಕ್ರಮ ಕೈಗೊಳ್ಳುತ್ತಿದೆ. ಹೀಗಾಗಿ ಈ ಇಲಾಖೆಗೆ ಮನವರಿಕೆ ಮಾಡುವ ಪ್ರಯತ್ನ ಈಗ ನಡೆಯುತ್ತಿದೆ ಎಂದು ತಿಳಿಸಿದರು.
ನಮ್ಮ ಜಿಲ್ಲೆಯಲ್ಲಿ ಎಲ್ಲವೂ ಅರಣ್ಯ, ಪರಿಸರ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಇದೇ ಕಾರಣಕ್ಕೆ ಕೆರೆಕಟ್ಟೆ ರಸ್ತೆ ವಿಸ್ತರಿಸಲು ಸಾಧ್ಯವಾಗಿಲ್ಲ. ಚರಂಡಿಯಿಂದ ಚರಂಡಿವರೆಗೆ ರಸ್ತೆ ದುರಸ್ತಿ ಮಾಡುತ್ತೇವೆಂದರೂ ಸಹ ಅವಕಾಶ ಕೊಟ್ಟಿಲ್ಲ. ಇದಕ್ಕಾಗಿ ಕೇಂದ್ರದಿಂದ ಬಿಡುಗಡೆಯಾಗಿದ್ದ ಹಣ ಸಹ ವಾಪಸು ಹೋಗಿದೆ. ಈ ನಿಟ್ಟಿನಲ್ಲಿ ಇಲಾಖೆಗೆ ಮನವರಿಕೆ ಮಾಡುವ ಪ್ರಯತ್ನ ಮುಂದುವರಿಸಿರುವುದಾಗಿ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 1 =
Remember me
