
ಬೆಂಗಳೂರು:ಕೆಎಸ್​ಆರ್​ಟಿಸಿ ನಿಗಮಗಳ ಎಲ್ಲ ನೌಕರರಿಗೂ ಪೂರ್ಣ ಪ್ರಮಾಣದ ವೇತನ ನೀಡಲಾಗುತ್ತದೆ ಎಂಬ ಸಾರಿಗೆ ಸಚಿವರು ಹೇಳಿಕೆ ಬೆನ್ನಲ್ಲೇ ನೌಕರರಿಗೆ ವೇತನ ರಹಿತ ರಜೆ ಪಡೆಯಲು ಒತ್ತಡ ಹೇರಲಾಗುತ್ತಿದೆ!
ರಾಮನಗರ ಘಟಕ ವ್ಯವಸ್ಥಾಪಕರು ಹೊರಡಿಸಿರುವ ಸುತ್ತೋಲೆಯಂತೆ, ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿ ಜುಲೈ ಮತ್ತು ಆಗಸ್ಟ್ ತಿಂಗಳು ರಜೆ ಬೇಕೆಂದರೆ ಅರ್ಜಿ ಸಲ್ಲಿಸಬಹುದು. ಆದರೆ, ಅದು ವೇತನ ರಹಿತ ರಜೆಯಾಗಿರಲಿದ್ದು, ರಜೆ ಪಡೆವ ಸಿಬ್ಬಂದಿಗೆ ನಿಗಮದಿಂದ ವೇತನ ದೊರೆಯುವುದಿಲ್ಲ. ಅದಕ್ಕೆ ಒಪ್ಪಿದ ನೌಕರರು ಜೂ.30ರೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ;ಯಾವ ದೇಶ ಮೊದಲಿಗೆ ಪಡೆಯುತ್ತೆ ಕರೊನಾ ಲಸಿಕೆ? ಭಾರತಕ್ಕೂ ಖುಲಾಯಿಸುತ್ತೆ ಅದೃಷ್ಟ
ಪ್ರತಿ ನೌಕರರಿಗೂ ವಾರದ ರಜೆ ಸೇರಿ ಇನ್ನಿತರ ವಾರ್ಷಿಕ 120ಕ್ಕೂ ಹೆಚ್ಚಿನ ರಜೆಗಳಿವೆ. ಅವುಗಳು ಪೂರ್ಣಗೊಂಡ ನಂತರವೂ ನೌಕರರು ರಜೆ ತೆಗೆದುಕೊಂಡರೆ, ರಜೆ ತೆಗೆದುಕೊಂಡ ದಿನದ ವೇತನ ಕಡಿತಗೊಳಿಸಲು ಸಾಧ್ಯ. ಆದರೆ, ರಾಮನಗರ ಘಟಕದ ಅಧಿಕಾರಿಗಳು, ನೌಕರರಿಗೆ ರಜೆ ಮಂಜೂರು ಮಾಡುವ ಬದಲು ವೇತನ ರಹಿತ ರಜೆ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ಈ ಕ್ರಮ ಕಾರ್ವಿುಕ ಕಾನೂನಿಗೆ ವಿರುದ್ಧವಾದದ್ದು ಎಂಬ ಮಾತು ಕೇಳಿಬರುತ್ತಿವೆ.
ಕರೊನಾಗೆ ಚುಚ್ಚುಮದ್ದಿಗಿಂತ ಮೂಗಿನ ಔಷಧವೇ ಉತ್ತಮ; ಆಕ್ಸ್​ಫರ್ಡ್​ ವಿವಿ ಸಂಶೋಧಕರ ಅಭಿಮತ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 3 =
Remember me
