| ಶಿವಮಾದು ಎನ್.ಎಲ್. ಬೆಂಗಳೂರುವೈದ್ಯಕೀಯ, ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್​ಗಳ ಪ್ರವೇಶ ಪರೀಕ್ಷೆಗಳ ಪಠ್ಯದ ವಿಚಾರದಲ್ಲಿ ಸೃಷ್ಟಿಯಾಗಿರುವ ಗೊಂದಲಗಳಿಗೆ ಸರ್ಕಾರ ಸ್ಪಷ್ಟನೆ ನೀಡದ ಕಾರಣ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆಸುವ ನೀಟ್ ಹಾಗೂ ಇಂಜಿನಿಯರಿಂಗ್, ಪಶು ವೈದ್ಯಕೀಯ ಕೋರ್ಸ್​ಗಳಿಗೆ ನಡೆಸುವ ಕೆ-ಸಿಇಟಿ, ಐಐಟಿ ಸೇರಿ ತಾಂತ್ರಿಕ ಸಂಸ್ಥೆಗಳ ಪ್ರವೇಶಕ್ಕಾಗಿ ನಡೆಸುವ ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಓದುವ ಪಠ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿದೆ. ನೀಟ್, ಜೆಇಇಗಾಗಿ ಏನನ್ನು ಓದಬೇಕು ಎಂದು ಆಯಾ ಪರೀಕ್ಷಾ ಆಯೋಜಕ ಸಂಸ್ಥೆಗಳು ಸ್ಪಷ್ಟಪಡಿಸಿದ್ದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ವಿಷಯದಲ್ಲಿ ಈ ಸ್ಪಷ್ಟತೆ ನೀಡಿಲ್ಲ.
ಸಮಸ್ಯೆ ಏನು?:ಸಾಮಾನ್ಯವಾಗಿ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಮೇಲೆ ನಡೆಸುವ ಪರೀಕ್ಷೆಗಳಿಗೆ ಎನ್​ಸಿಇಆರ್​ಟಿ 11 ಮತ್ತು 12ನೇ ತರಗತಿ ಪಠ್ಯ ಪರಿಗಣಿಸಲಾಗುತ್ತದೆ. ನೀಟ್, ಸಿಇಟಿ ಮತ್ತು ಜೆಇಇಗಳಿಗೂ ಈ ಪಠ್ಯಕ್ರಮವೇ ಆಧಾರ. ಕರೊನಾ ಸಮಯದಲ್ಲಿ ಬೋಧನಾ ಸಮಯವಿಲ್ಲದ ಕಾರಣ ಹಾಗೂ ಕೆಲ ಮುಖ್ಯವಲ್ಲದ ಪಠ್ಯಗಳನ್ನು ಪರೀಕ್ಷೆ ದೃಷ್ಟಿಯಿಂದ ಕೈಬಿಡಲಾಗಿತ್ತು. ಕೆಲ ರಾಜ್ಯಗಳಲ್ಲಿ ಶೇ.20ರಿಂದ 30 ಪಠ್ಯಗಳನ್ನು ಕೈಬಿಡಲಾಗಿತ್ತು. ಅದಾದ ನಂತರ ಸೇರ್ಪಡೆ ಸಮಯದಲ್ಲಿ ಆಯಾ ರಾಜ್ಯಗಳಿಗೆ ಮುಖ್ಯ ಎನಿಸುವ ಪಠ್ಯಗಳನ್ನು ಸೇರಿಸಲಾಗಿದ್ದು, ಕೆಲವೊಂದನ್ನು ಕೈಬಿಡಲಾಗಿದೆ. ಆದರೆ, ಕರ್ನಾಟಕವೂ ಸೇರಿ ದೇಶಾದ್ಯಂತ ಕೆಲ ರಾಜ್ಯಗಳಲ್ಲಿ ಎನ್​ಇಸಿಆರ್​ಟಿ ಪಠ್ಯವನ್ನೇ ಬೋಧನೆ ಮಾಡುತ್ತಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇದೇ ಪಠ್ಯಗಳ ಆಧಾರದಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗುತ್ತದೆ.
ನಿಖರವಾಗಿ ಹೇಳಿಲ್ಲ:ಎನ್​ಸಿಇಆರ್​ಟಿ ಪಠ್ಯದ ಆಧಾರದಲ್ಲಿ ರಾಷ್ಟೀಯ ವೈದ್ಯಕೀಯ ಆಯೋಗ (ಎನ್​ಎಂಸಿ) ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆಸುವ ನೀಟ್​ಗೆ ಓದಬೇಕಾಗಿರುವ ಪಠ್ಯವನ್ನು ತಿಳಿಸಿದೆ. ನೀಟ್ ಮತ್ತು ಜೆಇಇ ಪರೀಕ್ಷೆಗಳ ಪ್ರಾಧಿಕಾರವಾದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್​ಟಿಇ) ಇದನ್ನು ಪ್ರಕಟಿಸಿದೆ. ಆದರೆ, ಸಿಇಟಿಯಲ್ಲಿ ದ್ವಿತೀಯ ಪಿಯುಸಿ ಮತ್ತು ಎನ್​ಸಿಇಆರ್​ಟಿ ಪಠ್ಯ ಎರಡನ್ನೂ ಸೇರಿಸಿ ಪ್ರಶ್ನೆಗಳನ್ನು ನೀಡುವುದರಿಂದ ಯಾವುದನ್ನು ಓದಿಕೊಳ್ಳಬೇಕೆಂದು ನಿಖರವಾಗಿ ಹೇಳಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಎರಡನ್ನೂ ಆಕರ ಗ್ರಂಥಗಳನ್ನಾಗಿ ಪರಿಗಣಿಸುವುದು ಸೂಕ್ತವೆಂದು ಹೇಳುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯಲ್ಲಿ ಎಲ್ಲವನ್ನೂ ಓದುವುದಕ್ಕಿಂತ ಪರೀಕ್ಷೆಗೆ ಬರುವುದನ್ನು ಓದಿಕೊಳ್ಳುವುದು ಮುಖ್ಯ. ಈ ದೃಷ್ಟಿಕೋನದಲ್ಲಿ ಮುಖ್ಯವಾದದನ್ನು ಸರ್ಕಾರ ತಿಳಿಸಬೇಕು ಎಂದು ಸಿಇಟಿ ಆಕಾಂಕ್ಷಿಗಳು ಒತ್ತಾಯಿಸಿದ್ದಾರೆ.
ಎಷ್ಟು ಅಧ್ಯಾಯ ಕೈಬಿಡಲಾಗಿದೆ?:ಪ್ರಸಕ್ತ ವರ್ಷ ಎನ್​ಟಿಎ ನೀಟ್​ಗಾಗಿ ಹೊರಡಿಸಿರುವ ಪಠ್ಯಕ್ರಮದಲ್ಲಿ 11 ಮತ್ತು 12ನೇ ತರಗತಿಯಿಂದ ರಸಾಯನಶಾಸ್ತ್ರದಲ್ಲಿ 8 ಅಧ್ಯಾಯಗಳನ್ನು ಕೈಬಿಡಲಾಗಿದೆ. ಭೌತಶಾಸ್ತ್ರದಲ್ಲಿ ಕೆಲ ಸಬ್ ಟೈಟಲ್ಸ್​ಗಳನ್ನು ತೆಗೆಯಲಾಗಿದೆ. ಜೀವಶಾಸ್ತ್ರದಲ್ಲಿ ಕೆಲವು ಅಧ್ಯಾಯ ಮತ್ತು ಸಬ್ ಟೈಟಲ್ಸ್ ಗಳನ್ನೂ ತೆಗೆದು ಹಾಕಲಾಗಿದೆ. ಹೀಗೆ ಬಿಡಲಾದ ಪಠ್ಯಗಳನ್ನು ಸಿಇಟಿಗಾಗಿ ಓದಬೇಕೆ, ಬೇಡವೇ? ಎಂಬುದು ಗೊಂದಲವಾಗಿದೆ.
ಕೋಚಿಂಗ್ ಕೇಂದ್ರಗಳಿಂದ ಗೊಂದಲ?:ಬಹುತೇಕ ಕೋಚಿಂಗ್ ಕೇಂದ್ರಗಳು ತಮ್ಮ ವಿದ್ಯಾರ್ಥಿಗಳು ಎಲ್ಲದಕ್ಕೂ ಸಿದ್ಧವಾಗಿರಬೇಕೆಂಬ ಉದ್ದೇಶದಿಂದ ಕೈಬಿಟ್ಟಿರುವ ಪಾಠಬೋಧನೆ ಮಾಡುತ್ತಿವೆ. ಇದು ಬೇರೆ ವಿದ್ಯಾರ್ಥಿಗಳ ಮೇಲೆ ಗಂಭೀರಪರಿಣಾಮ ಬೀರುತ್ತಿದೆ. ಕೋಚಿಂಗ್ ಕೇಂದ್ರಗಳಲ್ಲಿ ತರಬೇತಿ ಪಡೆಯದ ವಿದ್ಯಾರ್ಥಿಗಳು ಯಾವುದನ್ನು ಓದಬೇಕು, ಓದಬಾರದೆಂಬ ಗೊಂದಲದಲ್ಲಿದ್ದಾರೆ.
ಏನು ಮಾಡಬೇಕು?:ಎನ್​ಸಿಇಆರ್​ಟಿ 11 ಮತ್ತು 12ನೇ ತರಗತಿ ಪಠ್ಯ ಓದಿಕೊಳ್ಳುವ ಜತೆಗೆ ಪ್ರತ್ಯೇಕವಾಗಿ ನೀಟ್, ಜೆಇಇ ಮತ್ತು ಸಿಇಟಿಗೆ ನೀಡಿರುವ ಪಠ್ಯ ಓದಿಕೊಳ್ಳಬೇಕು. ಸಿಇಟಿಯಲ್ಲಿ ಕೆಲ ಅಧ್ಯಾಯಗಳನ್ನು ಹೊಸದಾಗಿ ಸೇರಿಸಿದ್ದರೆ, ಮತ್ತೆ ಕೆಲವು ಅಧ್ಯಾಯಗಳನ್ನು ತೆಗೆದು ಹಾಕಲಾಗಿದೆ. ಇದನ್ನು ಸ್ಪಷ್ಟಪಡಿಸಿದರೆ ಅನುಕೂಲವೆಂದು ಕೋಚಿಂಗ್ ಕೇಂದ್ರದ ಶಿಕ್ಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಪಠ್ಯಕ್ರಮದ ಆಧಾರದಲ್ಲಿಯೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗು ತ್ತದೆ. ನಿಖರವಾಗಿ ಪಾಠಗಳನ್ನು ಹೇಳಿಲ್ಲ. ವಿದ್ಯಾರ್ಥಿಗಳು ತಮಗಿರುವ ಪಠ್ಯಕ್ರಮದ ಪಾಠಗಳನ್ನು ಓದಿಕೊಳ್ಳು ವುದು ಉತ್ತಮ. ವಿದ್ಯಾರ್ಥಿಗಳ ದೃಷ್ಟಿಯಿಂದ ಸ್ಪಷ್ಟನೆ ನೀಡಲಾಗುತ್ತದೆ.
| ಎಸ್. ರಮ್ಯಾ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ
ರಾಜಕೀಯಕ್ಕೆ ಎಂಟ್ರಿ ಕೊಟ್ಟ ಖ್ಯಾತ ನಟಿ ಅನುಷ್ಕಾ ಶೆಟ್ಟಿ..! ಈ ಪಕ್ಷದಿಂದ ಎಂಎಲ್​ಎ ಎಲೆಕ್ಷನ್‌ಗೆ ಸ್ಪರ್ಧೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 5 =
Remember me
