ಬೆಂಗಳೂರು:ಬಿಗ್‌ ಬಾಸ್‌ ಖ್ಯಾತಿಯ ನೀತು ವನಜಾಕ್ಷಿ ಸಾಕಷ್ಟು ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಈಗ ಇದೇ ನೀತು ತಮ್ಮ ಜೀವನದ ಖಾಸಗಿ ವಿಚಾರಗಳ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ನೀತು ಮಾತನಾಡಿ, ನಾನು ಮೂಲತಃ ಗದಗ. ಮೂಲ ಹೆಸರು ಮಂಜುನಾಥ್.‌ ಏಳನೇ ತರಗತಿ ಓದುತ್ತಿರುವಾಗಲೇ  ಒಂದಷ್ಟು ಬದಲಾವಣೆಗಳನ್ನು ಅರಿತು, ಹೆಣ್ಣಾಗುವ ನಿರ್ಧಾರ ಮಾಡಿದ್ದೇನು. ಏನೇ ಆಗಲಿ ನಾನು ಹೆಣ್ಣು ಆಗಲೇ ಬೇಕು ಎಂದು ನಿರ್ಧರಿಸಿದ್ದೆ. ಅಮ್ಮನ ಮನವೊಲಿಸಿದೆ. ಅವರಿಂದಲೂ ಒಪ್ಪಿಗೆ ಸಿಕ್ತು. ವೈದ್ಯರ ಬಳಿ ಹೆಣ್ಣಾಗುವ ಪ್ರೊಸೆಸ್‌ ಆಗುವ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದೆ. ಹಾರ್ಮೋನ್ಸ್‌ ತೆಗೆದುಕೊಳ್ಳುತ್ತಿದ್ದೆ. ಅದರಿಂದ ತುಂಬ ಸಮಸ್ಯೆ ಎದುರಿಸುತ್ತಿದ್ದೆ. ಸ್ನಾನದ ವೇಳೆ ನನ್ನ ಖಾಸಗಿ ಅಂಗ ನೋಡಲು ನನಗೇ ಮುಜುಗರ ಆಗ್ತಿತ್ತು, ಯಾವಾಗ ಹೆಣ್ಣಾಗ್ತೀನೋ ಅನಿಸ್ತಿತ್ತು. ಹೇಳಿಕೊಳ್ಳಲಾಗದ ನೋವು ಅನುಭವಿಸಿದೆ. ದೆಹಲಿಗೆ ಹೋದೆ. ವೈದ್ಯರು ಕೌನ್ಸಲಿಂಗ್‌ ಮಾಡಿದ್ರು. ಫಾರ್ಮ್‌ ಫಿಲ್‌ ಮಾಡಬೇಕು. ಸತ್ತೋದರೆ ನಾವು ಹೊಣೆಯಲ್ಲ ಎಂದು ನಮ್ಮ ಬಳಿ ಸಹಿ ಮಾಡಿಸಿಕೊಂಡರು. ಸರ್ಜರಿ ವೇಳೆ ಏನೇ ಹೆಚ್ಚು ಕಡಿಮೆ ಆದರೂ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಅಗ್ರಿಮೆಂಟ್‌ನಲ್ಲಿ ಬರೆಸಿಕೊಳ್ಳುತ್ತಾರೆ. ಸಹಿ ಮಾಡುವಾಗ ಕಣ್ಣಲ್ಲಿ ನೀರು ತುಂಬಿತ್ತು. ಅದು ದುಃಖದಲ್ಲ ಸಂತೋಷದ ಕಣ್ಣೀರು. ಯಾವಾಗ ಹೆಣ್ಣಾಗ್ತಿನೋ ಅನ್ನೋ ಫೀಲ್‌ ಇತ್ತು. ಅಷ್ಟೇ ಖುಷಿಯಲ್ಲಿ ಸಹಿ ಮಾಡಿದ್ದೆ ಎಂದಿದ್ದಾರೆ.
ಐದು ಗಂಟೆಯ ಸರ್ಜರಿ. ಇದಕ್ಕೆ ಸಿಗ್ಮಾ ಸರ್ಜರಿ ಅಂತಾರೆ. ದಿನಕ್ಕೆ ಒಂದೇ ಸರ್ಜರಿ ಆಗುತ್ತೆ. ತುಂಬ ಅಡ್ವಾನ್ಸ್‌ ಟೆಕ್ನಾಲಜಿ ಇದೆ. ಅನೇಸ್ತೆಷಿಯಾ ಕಡಿಮೆ ಆದಂಗೆ ನೋವು ಜಾಸ್ತಿ ಆಗುತ್ತ ಹೋಗುತ್ತದೆ. ಡಾಕ್ಟರ್‌ ಬಂದು ಆಪರೇಷನ್‌ ಆದ ಭಾಗಕ್ಕೆ ಡ್ರೆಸ್ಸಿಂಗ್‌ ಮಾಡುವಾಗ ಜೀವ ಹೋದ ಹಾಗೆ ಆಗುತ್ತೆ. ಆದರೂ ಆ ನೋವಲ್ಲೂ ಒಂದು ಖುಷಿ ಸಿಗುತ್ತಿರುತ್ತದೆ. ಎಲ್ಲ ಟಾನ್ಸ್‌ಗಳಿಗೂ ಇದೇ ಫೀಲ್‌ ಆಗುತ್ತದೆ. ಒಂದು ರೀತಿ ನಮಗಿದು ಮರುಹುಟ್ಟು ಇದ್ದಂತೆ. ನಾವಾಗಿಯೇ ಪಡೆದುಕೊಂಡ ಜನ್ಮ ಇದು. ಈ ಸರ್ಜರಿಗಾಗಿ 10 ಲಕ್ಷ ಖರ್ಚಾಯಿತು ಎಂದಿದ್ದಾರೆ.
ಸಂಪೂರ್ಣ ಹೆಣ್ಣಾಗಿ ಪರಿವರ್ತನೆ ಆಗಿರುತ್ತೀವಿ ಆದರೆ ಗರ್ಭಕೋಶ ಇರುವುದಿಲ್ಲ. ಸರ್ಜರಿ ಅಂದ್ರೆ ಸುಮ್ಮನೆ ಅಲ್ಲ ತುಂಬಾ ಕಷ್ಟ ಇರುತ್ತದೆ. ಸರ್ಜರಿ ಮಾಡಿಸಿಕೊಳ್ಳುವ ಸಮಯದಲ್ಲಿ ನಾನು ಒಂಟಿಯಾಗಿ ಪ್ರಯಾಣ ಮಾಡುತ್ತಿದ್ದೆ ಅಲ್ಲಿನ ಡಾಕ್ಟರ್ ಜೊತೆ ಕೌನ್ಸಲಿಂಗ್ ಮುಗಿಸಿಕೊಂಡ ನಂತರ ಸರ್ಜರಿ ಮಾಡುತ್ತಾರೆ ಎಂದಿದದ್ದಾರೆ.
ಸರ್ಜರಿ ಯಾವಾಗ ಪಾಸ್‌ ಆಯ್ತೋ ಆ ಕ್ಷಣವೇ ನಾನು ಗೆದ್ದೆ.  ನಾನು ನನ್ನದೇ ಆದ ಉದ್ಯಮ ಶುರು ಮಾಡಿದ್ದೇನೆ. ಅದರಲ್ಲಿಯೇ ಖುಷಿ ಕಾಣುತ್ತಿದ್ದೇನು. ತೃತೀಯ ಲಿಂಗಿಯಾಗಿ ಬದಲಾಗಿ, 2019ರಲ್ಲಿ ಸೂಪರ್‌ ಕ್ವೀನ್‌ ಮಿಸ್‌ ಟ್ರಾನ್ಸ್‌ಕ್ವೀನ್‌ ಪಟ್ಟವನ್ನೂ ಪಡೆದೆ. 2020ರಲ್ಲಿ ಮಿಸ್‌ ಇಂಟರ್‌ನ್ಯಾಶನಲ್‌ ಕ್ವೀನ್‌ ಕಿರೀಟ ಮುಡಿಗೇರಿಸಿಕೊಂಡು, ಭಾರತದ ಮೊದಲ ಟ್ರಾನ್ಸ್‌ ಟ್ಯಾಟೂ ಆರ್ಟಿಸ್ಟ್‌ ಆಗಿಯೂ ಗುರುತಿಸಿಕೊಂಡೇನು ಎಂದು ಹೇಳಿದ್ದಾರೆ.
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:six + nine =
Remember me
