ಬೆಂಗಳೂರು:ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ವಿದ್ಯಾರ್ಥಿನಿ ನೇಹಾ ಕೊಲೆ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಪ್ರೀತಿ ನಿರಾಕರಿಸಿದ್ದಕ್ಕಾಗಿ ​ನೇಹಾಳನ್ನು ಕೊಲೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಪ್ರಕರಣ ಕುರಿತಾಗಿ ಕೊಲೆ ಆರೋಪಿ ಫಯಾಜ್​ ತಾಯಿ ಮುಮ್ತಾಜ್ ಮಾತನಾಡಿ ಮಗ ಮಾಡಿದ ಕೆಲಸಕ್ಕೆ ಶಿಕ್ಷೆ ಆಗಬೇಕು ಎಂದು ಕಣ್ಣೀರು ಹಾಕಿದ್ದಾರೆ.
ಪ್ರಕರಣ ಸಂಬಂಧ ಕೊಲೆ ಆರೋಪಿ ಫಯಾಜ್​ ತಾಯಿ ಮುಮ್ತಾಜ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನನ್ನ ಮಗ ಮಾಡಿರುವ ತಪ್ಪಿಗೆ ರಾಜ್ಯದ ಜನರ ಮುಂದೆ ಕ್ಷಮೆಯಾಚಿಸುತ್ತೇನೆ. ಆಕೆ ಕೂಡಾ ನನ್ನ ಮಗಳಂತೆ. ನೇಹಾ ತಂದೆ-ತಾಯಿ ಬಳಿ ಕೂಡಾ ನಾನು ಕ್ಷಮೆ ಕೇಳುತ್ತೇನೆ. ಯಾವ ಮಕ್ಕಳು ಇಂತಹ ತಪ್ಪು ಮಾಡಿದ್ರೆ ತಪ್ಪು ತಪ್ಪೆ ಆಗಿರುತ್ತದೆ ಎಂದಿದ್ದಾರೆ.
ಈ ನೆಲದ ಕಾನೂನು ಏನು ಹೇಳುತ್ತದೆ, ಆ ಪ್ರಕಾರವಾಗಿ ಅವನು ಮಾಡಿದ ತಪ್ಪಿಗೆ ಶಿಕ್ಷೆಯಾಗಬೇಕು.  ಅವರಿಬ್ಬರು ಪ್ರೀತಿ ಮಾಡುತ್ತಿದ್ದರು. ಈ ವಿಚಾರ ನನಗೆ ಒಂದು ವರ್ಷದ ಹಿಂದೆಯೇ ತಿಳಿದಿತ್ತು. ಬಾಡಿಬಿಲ್ಡಿಂಗ್​ ಮಾಡ್ತಿದ್ದನು ಹೀಗಾಗಿ ಅವನಿಗೆ ಎಲ್ಲಡೆ ಸನ್ಮಾನ ಮಾಡುತ್ತಿದ್ದರು. ಆಗ ನೇಹಾ ಪರಿಚಯವಾಗಿದೆ. ಅಮ್ಮಾ ನಾನು ಕಾಲೇಜಿನಲ್ಲಿ ಯಾರ ಜತೆ ಮಾತನಾಡುತ್ತಿರಲಿಲ್ಲ, ಆದರೆ ಈಗ ಎಲ್ಲರೂ ನನ್ನ ಫ್ಯಾನ್ಸ್​ ಆಗಿದ್ದಾರೆ. ಹುಡುಗಿಯರು ಕೂಡಾ ಮಾತನಾಡಿಸುತ್ತಾರೆ. ನೇಹಾ ಎನ್ನುವ ಹುಡುಗಿ ತುಂಬಾ ಮಾತನಾಡುತ್ತಾಳೆ ಎಂದು ಹೇಳಿದ್ದನು.
ನನ್ನ ಮಗ ಫಯಾಜ್​ಗೆ ನೇಹಾ ಪ್ರಪೋಸ್​ ಮಾಡಿದ್ದಳು. ನನ್ನ ಬಳಿ ಅವನು ಹೇಳಿದಾಗ ಲವ್ ಬೇಡ ಅಂತ ಹೇಳಿದ್ದೆ. ನೀನು ಚೆನ್ನಾಗಿ ಓದು ಅಂತಾ ಹೇಳಿದ್ದೇನು.ಮಗ ಕೆಎಎಸ್​ ಅಧಿಕಾರಿ ಆಗಬೇಕೆಂದು ಕನಸು ಕಂಡಿದ್ದೆ. ಆದರೆ, ಈ ರೀತಿ ಆಗಿದ್ದಕ್ಕೆ ಬಹಳ ಸಂಕಟ ಆಗುತ್ತದೆ ಎಂದು ಕಣ್ಣೀರು ಹಾಕಿದ್ದಾರೆ.
ನೇಹಾ ಸಹ ತುಂಬಾ ಒಳ್ಳೆಯ ಹುಡುಗಿ. ಫಯಾಜ್​-ನೇಹಾ ಮದುವೆ ಆಗಬೇಕು ಅಂತ ಇದ್ದರು. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದರು.
ನಟ ದರ್ಶನ್‌ ಇದ್ದ ಪ್ರಚಾರ ವಾಹನಕ್ಕೆ ವಿದ್ಯುತ್‌ ಸ್ಪರ್ಶ; ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ…

ಸಿನಿಮಾದಲ್ಲಿ ಅವಕಾಶಬೇಕಾದ್ರೆ ಮಲಗಬೇಕು, ಅದು ನನಗೆ ಕೆಟ್ಟ ಅನುಭವವಾಗಿತ್ತು ಎಂದು ಕಣ್ಣೀರಿಟ್ಟ ನಟಿ

ಎತ್ತರದ ಬೆಟ್ಟದಿಂದ ಬಿದ್ದು ಮೆದುಳು ಹಾನಿ, ಒಂದು ವರ್ಷ ಚಿಕಿತ್ಸೆ ಪಡೆದ ಸ್ಟಾರ್​ ನಟಿ; ಈಗ ಹೇಗಿದ್ದಾರೆ ಗೊತ್ತಾ?

ದಿನ ಒಬ್ಬೊಬ್ಬರ ಜತೆ ಮಜಾ ಮಾಡುತ್ತಿಯಾ, ಇಷ್ಟು ದಪ್ಪ ಇದ್ದೀಯಾ ಅಂತಾರೆ; ನೀತು ಶೆಟ್ಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
