ಬೆಂಗಳೂರು:ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ನೆಹರು ಓಲೇಕಾರ್​ ಅವರಿಗೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಪಂಗಡಗಳ ಆಯೋಗದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಅದೇ ರೀತಿ ಮಾಜಿ ಸಚಿವ ಎಂ.ಶಿವಣ್ಣಗೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಸ್ಥಾನ ಕರುಣಿಸಲಾಗಿದೆ.
ತನಗೆ ಸಚಿವ ಸ್ಥಾನ ನೀಡಲೇಬೇಕೆಂದು ಓಲೇಕರ್​ ಪಟ್ಟು ಹಿಡಿದು ಪಕ್ಷ ಮತ್ತು ಸಿಎಂ ಮೇಲೆ ಒತ್ತಡ ತಂತ್ರ ಅನುಸರಿಸಿದ್ದರು. ಆದರೆ ಲಂಬಾಣಿ ಸಮುದಾಯದಿಂದ ಪ್ರಭು ಚವಾಣ್​ಗೆ ಅವಕಾಶ ನೀಡಿದ್ದರಿಂದ ಒತ್ತಡ ಫಲ ನೀಡಿರಲಿಲ್ಲ. ಇದೀಗ ಆಯೋಗದ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನ ಪಡಿಸುವ ಪ್ರಯತ್ನ ಮಾಡಲಾಗಿದೆ.
ರಾಯಭಾಗ ಶಾಸಕ ದುರ್ಯೋಧನ ಐಹೊಳೆ ಅವರಿಗೆ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಮಾಯಕೊಂಡ ಶಾಸಕ ಪ್ರೊ.ಎನ್​. ಲಿಂಗಣ್ಣ ಅವರಿಗೆ ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ, ಸಿ.ಮುನಿಕೃಷ್ಣರಿಗೆ ಅಂಬೇಡ್ಕರ್​ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನದ ಅವಕಾಶ ನೀಡಲಾಗಿದೆ. ಈ ಮುನ್ನ ಐಹೊಳೆಯವರಿಗೆ ಅಂಬೇಡ್ಕರ್​ ಅಭಿವೃದ್ಧಿ ನಿಗಮ ನೀಡಲಾಗಿತ್ತು. ಕೊನೇ ಘಳಿಗೆಯಲ್ಲಿ ನಿಗಮ ಬದಲಾಗಿದೆ.
ನಿಖಿಲ್​-ಪ್ರಜ್ವಲ್ ಒಟ್ಟಾಗಿ ಯುದ್ಧಕ್ಕೆ ಹೋಗಲಿ..! ಚಿಕ್ಕಪ್ಪ-ದೊಡ್ಡಪ್ಪನ ಎದುರಲ್ಲೇ ಸವಾಲು

ಯಾರೂ ಇಲ್ಲದ ವೇಳೆ ಮನೆಗೆ ಎಂಟ್ರಿ ಕೊಡುತ್ತಿದ್ದಳು, ಈಕೆಯ ಕೃತ್ಯಕ್ಕೆ ಸ್ಥಳೀಯರೇ ಬೆಚ್ಚಿಬಿದ್ದಿದ್ದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 6 =
Remember me
