
ಬೆಂಗಳೂರು:ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹೀರೇಮಠ ಕೊಲೆ ಪ್ರಕರಣ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ಕೊಲೆ ಪ್ರಕರಣ ಮುನ್ನೆಲೆಗೆ ಬರುತ್ತಿದ್ದಂತೆ ಕೊಲೆಯಾದ ನೇಹಾ ಮತ್ತು ಆರೋಪಿ ಪಯಾಜ್​ ಪ್ರೀತಿ ಮಾಡುತ್ತಿದ್ದರು ಎಂದು ಹೇಳುತ್ತಿರುವ ಕೆಲವು ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ.
ಇದನ್ನೂ ಓದಿ:ರಾಹುಲ್-ಡಿ ಕಾಕ್ ಶತಕದ ಜೊತೆಯಾಟ: ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್‌ಗಳ ಭರ್ಜರಿ ಜಯ
ವೈರಲ್ ಆಗುತ್ತಿರುವ ಫೋಟೋಗಳ ಬಗ್ಗೆ ನೇಹಾ ತಾಯಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗ ವಿಜ್ಞಾನ ಬಹಳ ಮುಂದುವರಿದಿದೆ, ಜನ ಕಂಪ್ಯೂಟರ್ ಗಳಲ್ಲಿ ಏನೆಲ್ಲ ಮಾಡುತ್ತಾರೆ, ಆದರೆ ತನ್ನ ಮಗಳು ಅವನೊಂದಿಗೆ ಫೋಟೋ ತೆಗೆಸಿಕೊಳ್ಳುವ ಕೆಲಸ ಮಾಡಿಲ್ಲ ಎಂದರು. ಅವರಿಬ್ಬರು ಒಂದೇ ಕಾಲೇಜಲ್ಲಿ ಓದುತ್ತಿದ್ದರು ಪ್ರಾಯಶಃ ಕ್ಲಾಸ್ ಮೇಟ್ಸ್ ಸಹ ಆಗಿದ್ದರೇನೋ? ಎಂದ ಅವರು ತಮ್ಮ ಮಗಳು ಬುದ್ಧಿವಂತಳಾಗಿದ್ದಳು ಮತ್ತು ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಕ್ಷಮತೆ ಅವಳಲ್ಲಿತ್ತು ಎಂದರು.
ಒಂದೇ ಕ್ಲಾಸ್​​​ಮೆಟ್ಸ್ ಅನ್ಸುತ್ತೆ. ಅವಳು ಈ ಕುರಿತಾಗಿ ಏನು ಹೇಳಿಲ್ಲ. ನಾವು ಅದರ ಕಡೆ ತಲೆ ಹಾಕಬೇಡ ನೀನು ಚೆನ್ನಾಗಿ ಓದು ಅಂತ ಹೇಳಿದ್ದೇವು, ನನ್ನ ಮಗಳು ತುಂಬಾ ಬುದ್ದಿವಂತೆ ಆಗಿದ್ದಳು. ಬಿಸಿಎ ಮಾಡಿ ನಂತರ ಎಮ್​ಸಿಎ ಮಾಡ್ತಿನಿ ಎಂದು ನಮ್ಮ ಬಳಿ ಹೇಳುತ್ತಿದ್ದಳು ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾಳೆ.
ನೇಹಾ ಓದುತ್ತಿದ್ದ ಕಾಲೇಜಲ್ಲಿ ಹೆಣ್ಣುಮಕ್ಕಳಿಗೆ ಯಾವುದೇ ರೀತಿಯ ಭದ್ರತೆ ಇಲ್ಲ. ಆ ಕಾಲೇಜಿಗೆ ಮೂರು ಗೇಟ್ ಗಳಿವೆ. ಯಾರು ಎಲ್ಲಿ ಬಂದ್ರು ತಿಳಿಯುವುದಿಲ್ಲ. ಸೆಕ್ಯೂರಿಟಿ ಇಲ್ಲ ಅದೆ ಬೇರೆ ಕಾಲೇಜಿನಲ್ಲಿ ಆದ್ರೆ ಐಡಿ ಕಾರ್ಡ್​ ನೋಡಿ ಒಳಗೆ ಬಿಡ್ತಾರೆ ಇಲ್ಲಿ ಎನಿಲ್ಲ ಯಾರು ಬರ್ತಾರೆ ಯಾರು ಹೋಗುತ್ತಾರೆ ಎನ್ನುವುದು ತಿಳಿಯುವುದಿಲ್ಲ.
ಆಗುಂತಕರು ಒಳಬಂದರೂ ಯಾರೂ ಪ್ರಶ್ನಿಸುವುದಿಲ್ಲ. ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗಬೇಕು ಅಂದರೆ ಅವನಿಗೆ ಶಿಕ್ಷೆ ಆಗಬೇಕು, ಫಯಾಜ್ ನನ್ನು ಜೈಲಲ್ಲಿಟ್ಟರೆ ಯಾವುದೇ ಪ್ರಯೋಜನವಿಲ್ಲ, ನೇಹಾಳನ್ನು ಕೊಂದ ಹಾಗೆಯೇ ಅವನನ್ನೂ ಕೊಲ್ಲಬೇಕು, ಇಲ್ಲವಾದರೆ ಜನರ ಕೈಗೆ ಅವನನ್ನು ಒಪ್ಪಿಸಬೇಕು ಎಂದು ಗೀತಾ ಹಿರೇಮಠ ಅವರು ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿಯ ನೇಹಾ ಹತ್ಯೆ ಕೇಸ್​: ಆರೋಪಿ ಫಯಾಜ್ ತಲೆ ಕಡಿದವರಿಗೆ 10 ಲಕ್ಷ ರೂ. ಬಹುಮಾನ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 − 6 =
Remember me
