ನೆಲಮಂಗಲ:ಕೆಲ ದಿನಗಳ ಹಿಂದಷ್ಟೇ ಚಿರತೆಯೊಂದು ಮಲಗಿದ್ದ ಮಗುವನ್ನು ಹೊತ್ತೊಯ್ದು ಅರೆಬರೆ ತಿಂದು ಬೀಸಾಡಿ ಹೋಗಿತ್ತು. ಈ ಕರಾಳ ಘಟನೆ ಮಾಸುವ ಮುನ್ನವೇ ಅದೇ ರೀತಿಯಾದ ಮತ್ತೊಂದು ಘಟನೆ ಸಂಭವಿಸಿದೆ.
ಇದನ್ನೂ ಓದಿ:ಎರಡು ದಶಕಗಳಷ್ಟು ಹಿಂದಿನಂತಿದ್ದ ದೆಹಲಿ ಮತ್ತೆ ಮೊದಲಿನಂತಾಯ್ತು…!
ಬೆಳಗಿನ ಜಾವ ಬಹಿರ್ದೆಸೆಗೆ ಹೋಗಿದ್ದ ವೃದ್ದೆ ಮೇಲೆ ಚಿರತೆಯೊಂದು ದಾಳಿ ಮಾಡಿ ಕೊಂದಿರುವ ಘಟನೆ ಕೊಟ್ಟುಗಾನಹಳ್ಳಿಯಲ್ಲಿ ನಡೆದಿದೆ. ಗಂಗಮ್ಮ(68) ಮೃತ ಮಹಿಳೆ.
ಗಂಗಮ್ಮಳ ಮೃತದೇಹವು ಕಲ್ಲಿನ ಪೊಟರೆಯೊಳಗೆ ಪತ್ತೆಯಾಗಿದ್ದು, ಆಕೆಯ ರುಂಡ-ಮುಂಡ ಬೇರೆ-ಬೇರೆಯಾಗಿದೆ. ಚಿರತೆ ಅರೆಬರೆ ತಿಂದು ಸ್ಥಳದಿಂದ ಪರಾರಿಯಾಗಿದ್ದು, ಸ್ಥಳೀಯ ಜನರಲ್ಲಿ ಆತಂಕ ಮನೆ ಮಾಡಿದೆ.
ಅಂದಹಾಗೆ ಕೊಟ್ಟುಗಾನಹಳ್ಳಿ ಬೆಂಗಳೂರು ದಕ್ಷಿಣ ತಾಲೂಕು ಮತ್ತು ಮಾಗಡಿ ತಾಲೂಕಿನ ಗಡಿಗ್ರಾಮವಾಗಿದೆ. ಕೊಟ್ಟಗಾನಹಳ್ಳಿಯು ಕೆಲ ದಿನದ ಹಿಂದೆ ಮೂರು ವರ್ಷದ ಮಗುವಿನ ಕೊಂದುತಿಂದ ಕದರಯ್ಯನಪಾಳ್ಯ ಸಮೀಪವಿದೆ.
ಇದನ್ನೂ ಓದಿ:ಟ್ರಕ್​ ಅಪಘಾತಕ್ಕೆ ಬಲಿಯಾದ 23 ವಲಸೆ ಕಾರ್ಮಿಕರು
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಮಹಿಳೆಯ ಮೃತದೇಹವನ್ನು ನೆಲಮಂಗಲ ಆಸ್ಪತ್ರೆಗೆ ರವಾನಿಸಿದ್ದಾರೆ. ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)
ಮನೆಯಲ್ಲಿ ಮಲಗಿದ್ದ 3 ವರ್ಷದ ಮಗುವನ್ನು ಹೊತ್ತೊಯ್ದು ಕೊಂದು ತಿಂದ ಚಿರತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fifteen =
Remember me
