ಬೆಂಗಳೂರು: ಹಿರಿಯ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದ ತಜ್ಞರ ತಂಡ ರೂಪಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬದಿಗಿಟ್ಟು ಪ್ರತ್ಯೇಕ ಶಿಕ್ಷಣ ನೀತಿ ರೂಪಿಸಲು ರಾಜ್ಯ ಸರ್ಕಾರ ಅತ್ಯಾಸಕ್ತಿ ತಾಳಿರುವುದು ಸೈದ್ಧಾಂತಿಕ ವೈರುಧ್ಯಕ್ಕೆ ಮುನ್ನುಡಿ ಬರೆದಂತಾಗಿದೆ. ಒಂದೆಡೆ, ರಾಜ್ಯ ಸರ್ಕಾರ ಯುಜಿಸಿ ಮಾಜಿ ಅಧ್ಯಕ್ಷ ಸುಖದೇವ ಥೋರಟ್ ಮಾರ್ಗದರ್ಶನದಲ್ಲಿ ರಾಷ್ಟ್ರಮಟ್ಟದ ಹಾಗೂ ಸ್ಥಳೀಯ ಶಿಕ್ಷಣ ತಜ್ಞರನ್ನು ಬಳಸಿಕೊಂಡು ‘ಕರ್ನಾಟಕ ಶಿಕ್ಷಣ ನೀತಿ- ಕೆಇಪಿ ರೂಪಿಸುವುದರಲ್ಲಿ ನಿರತವಾಗಿದೆ. ಇಷ್ಟರಲ್ಲೇ ಅದರ ನೀಲಿನಕ್ಷೆ ಪ್ರಕಟಿಸಲಿದೆ. ಇತ್ತ. ಎನ್​ಇಪಿ ಪರವಾಗಿರುವವರು ರಾಜ್ಯದ ಉದ್ದಗಲಕ್ಕೂ ಸಹಿ ಸಂಗ್ರಹಿಸಿ 10 ಲಕ್ಷ ಜನರ ಅಭಿಪ್ರಾಯವನ್ನು ರಾಜ್ಯಪಾಲರ ಮುಂದಿಟ್ಟಿದ್ದಾರೆ. ಈ ಮೂಲಕ ಎನ್​ಇಪಿ- ಎಸ್​ಇಪಿ ವಿಚಾರವಾಗಿ ಜಂಗೀಕುಸ್ತಿಗೆ ರಾಜಭವನ ವೇದಿಕೆಯಾಗುವ ಎಲ್ಲ ಲಕ್ಷಣವೂ ಕಾಣಿಸಿದೆ.
ವಾತಾವರಣ ಸರ್ಕಾರದ ಕಡೆಯಿಂದಲೇ ಸೃಷ್ಟಿಯಾಗಿದೆ. ವಿವಿಧ ಸಭೆ, ಸಮಾರಂಭಗಳಲ್ಲಿ ಎನ್​ಇಪಿ ಬಗ್ಗೆ ಸರ್ಕಾರದ ಪ್ರಮುಖರೇ ವಿರೋಧ ವ್ಯಕ್ತಪಡಿಸಿ ಮಾತನಾಡಿದ್ದಾರೆ. ಜತೆಗೆ, ಪರೋಕ್ಷವಾಗಿ ಇದನ್ನು ಬೆಂಬಲಿಸಿದರೆ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರದಿಂದ ಒಪ್ಪಿತವಾದ ನೀತಿಯ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರೆ ಅದು ಕಾನೂನಾತ್ಮಕವಾಗಿ ಕ್ರಮ ಎದುರಿಸುವ ಪರಿಸ್ಥಿತಿ ಬಾರದು ಎಂಬ ಅರಿವಿದ್ದರೂ, ಶಿಕ್ಷಕ ಸಮೂಹ ಮಾತ್ರ ಮುಕ್ತವಾಗಿ ಅಭಿಪ್ರಾಯ ಹೊರಹಾಕದ ಸ್ಥಿತಿಯಲ್ಲಿದೆ.
ಪರೋಕ್ಷ ಅನುಷ್ಠಾನ:ರಾಷ್ಟ್ರೀಯ ಶಿಕ್ಷಣ ನೀತಿಯು 2045ರವರೆಗೂ ಹಂತಹಂತವಾಗಿ, ಲೋಪದೋಷಗಳನ್ನು ತಿದ್ದಿಕೊಂಡು ಪ್ರಯೋಗಕ್ಕೊಳಪಡುವ ಮುಕ್ತ ಅವಕಾಶ ಇಟ್ಟುಕೊಂಡಿದೆ. ಈಗಾಗಲೇ ರಾಜ್ಯದ ಪದವಿ ಹಂತದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಇಷ್ಟರ ನಡುವೆ ವಿವಿಧ ರೂಪದಲ್ಲೂ ಬೇರೆ ಬೇರೆ ಹಂತಕ್ಕೂ ವಿಸ್ತರಣೆಯಾಗುತ್ತಿದೆ. ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನ ಭಾಗವಾಗಿಯೂ ಅದು ವಿವಿಧ ಯೋಜನೆ, ಕಾರ್ಯಕ್ರಮಕ್ಕೆ ರಾಜ್ಯಕ್ಕೆ ಪರಿಚಯವಾಗುತ್ತಿದೆ. ಹೀಗಿರುವಾಗ ಅದನ್ನು ರಾಜ್ಯದಲ್ಲಿ ಜಾರಿ ಮಾಡಿಕೊಳ್ಳುತ್ತಲೇ ಸಾಗಬೇಕಾಗುತ್ತದೆ.
ರಾಜ್ಯಪಾಲರ ಪವರ್:ಶಿಕ್ಷಣವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿದ್ದು, ಕೇಂದ್ರದ ನೀತಿ ತಿರಸ್ಕರಿಸುವ ನಿರ್ಣಯದ ಕುರಿತು ಸಂವಿಧಾನಾತ್ಮಕವಾಗಿದೆಯೇ ಎಂದು ಪರಿಶೀಲಿಸುವ ಹಾಗೂ ರಾಜ್ಯ ಸರ್ಕಾರದ ನಿರ್ಧಾರ ವಿಶ್ಲೇಷಣೆಗೊಳಪಡಿಸುವ ಅಧಿಕಾರ ರಾಜ್ಯಪಾಲರಿಗಿದೆ. ಅಲ್ಲದೇ ರಾಜ್ಯಪಾಲರು ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿರುವ ಕಾರಣ ಈ ಬೆಳವಣಿಗೆಗಳ ಬಗ್ಗೆ ಸಭೆಗಳನ್ನು ಕರೆದು ಅಭಿಪ್ರಾಯ ಸಂಗ್ರಹಿಸುವ, ಸೂಚನೆಗಳನ್ನು ನೀಡಬಹದು. ಅಷ್ಟೇ ಅಲ್ಲದೇ, ಈ ವಿಚಾರದಲ್ಲಿ ಮುಖ್ಯಮಂತ್ರಿ, ಮುಖ್ಯಕಾರ್ಯದರ್ಶಿ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ವಿವರಣೆ ಕೇಳಬಹುದು. ಅವರನ್ನು ಕರೆಸಿ ಚರ್ಚೆ ನಡೆಸಬಹುದು. ಇನ್ನೊಂದು ಪ್ರಮುಖ ಸಂಗತಿ ಎಂದರೆ ನೇರವಾಗಿ ಕುಲಪತಿಗಳ ಅಭಿಪ್ರಾಯ ಕೇಳಬಹುದು. ಹೀಗಾಗಿ ಈ ಅಧಿಕಾರ ಚಲಾವಣೆಯಾದರೆ ಎನ್​ಇಪಿ- ಎಸ್​ಇಪಿ ಜಟಾಪಟಿ ಮತ್ತಷ್ಟು ವಿಮರ್ಶೆಗೊಳಗಾಗಿ, ಸಂಘರ್ಷ ರೂಪವನ್ನೂ ತಾಳಬಹುದಾಗಿದೆ. ಅಂದರೆ ರಾಜ್ಯ ಸರ್ಕಾರಕ್ಕೆ ಅನುಷ್ಠಾನ ಅಷ್ಟು ಸಲೀಸಲ್ಲದ ವಿಚಾರವಾಗಲಿದೆ.
ಸರ್ಕಾರ ಬದಲಾದಂತೆ ಹಿಂದಿನ ಸರ್ಕಾರದ ತೀರ್ಮಾನ ಬದಲಿಸುತ್ತ ಹೋದರೆ ದೂರಗಾಮಿ ಪರಿಣಾಮ ಉಂಟಾಗಲಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಒಪ್ಪಿತ ನೀತಿಗೆ ವಿರುದ್ಧವಾಗಿ ಸಾಗಿದರೆ ಆಗುವ ಪರಿಣಾಮವನ್ನು ಸರ್ಕಾರದ ಮುಖ್ಯಕಾರ್ಯದರ್ಶಿ, ಶಿಕ್ಷಣ ಇಲಾಖೆ ಪ್ರಧಾನಕಾರ್ಯದರ್ಶಿಗಳು ಸಂಬಂಧಪಟ್ಟವರಿಗೆ ಅರಿವು ಮೂಡಿಸುವ ಅಗತ್ಯವಿದೆ.
| ಅರುಣ್ ಶಹಾಪುರ ವಿಧಾನಪರಿಷತ್ ಮಾಜಿ ಸದಸ್ಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − 4 =
Remember me
