
ಬೆಂಗಳೂರು:ರಾಜಕೀಯ ದುರುದ್ದೇಶಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಹಿಂಪಡೆದು, 2024ರಿಂದ ರಾಜ್ಯ ಶಿಕ್ಷಣ ನೀತಿ ತರಲು ಮುಂದಾಗಿರುವ ರಾಜ್ಯ ಸರ್ಕಾರದ ಪ್ರಯತ್ನ ಖಂಡನೀಯ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎನ್‌ಇಪಿ ನಾಗಪುರ ಶಿಕ್ಷಣ, ಉತ್ತರ ಭಾರತದ ಶಿಕ್ಷಣ ನೀತಿಯಲ್ಲ.ಕಾಂಗ್ರೆಸ್‌ನ ರಾಜಕೀಯ ಪ್ರೇರಿತ ನಿರ್ಧಾರದಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ ಎಂದರು.ಪಠ್ಯಕ್ರಮ ಮತ್ತು ಶಿಕ್ಷಣ ನೀತಿ ಪ್ರತ್ಯೇಕ. ಇದರ ಪರಿಜ್ಞಾನ ಇಲ್ಲಿನ ಸಿಎಂ, ಶಿಕ್ಷಣ ಸಚಿವರಿಗೆ ಇದೆಯೇ? ಕಲಿಯುವಿಕೆ ಮತ್ತು ಕಲಿಸುವುದು ಇದು ರಾಷ್ಟ್ರೀಯ ಶಿಕ್ಷಣ ನೀತಿ ಎಂದರು.ಹಳೆಯ ನೀತಿಯಲ್ಲಿ ಇದ್ದ ನ್ಯೂನತೆಗಳನ್ನು ಹೋಗಲಾಡಿಸಿ 34 ವರ್ಷಗಳ ಬಳಿಕ ಹೊಸ ನೀತಿ ತರಲಾಗಿದೆ. ಸಮಾನತೆ, ಗುಣಮಟ್ಟದ ಶಿಕ್ಷಣ ಕೊಡಬೇಕಿದೆ. ಇದಕ್ಕಾಗಿ 3ನೇ ರಾಷ್ಟ್ರೀಯ ಶಿಕ್ಷಣ ನೀತಿ ತರಲಾಗಿದೆ.ರಾಜ್ಯ ಶಿಕ್ಷಣ ನೀತಿಯ ಕಚೇರಿ ಎಲ್ಲಿದೆ? ಈ ಸರ್ಕಾರ ರಚಿಸಿದ ಸಮಿತಿಯಲ್ಲಿ ಇರುವವರು ಯಾರು? ಅಧ್ಯಕ್ಷರು ಯಾವ ಊರಿನವರು? ರಾಜ್ಯ ಸಮಿತಿಯಲ್ಲಿ ಇಲ್ಲಿನವರು ಎಷ್ಟು ಜನ? ಹೊರ ರಾಜ್ಯದವರು ಎಷ್ಟು ಜನ ಎಂದು ಪ್ರಶ್ನಿಸಿದರು.30 ಸಾವಿರ ಕೋಟಿ ರೂ ಪದವಿ ಶಿಕ್ಷಣಕ್ಕಾಗಿ ಖರ್ಚು ಮಾಡಲಾಗುತ್ತಿದೆ. ವಿಶ್ವದರ್ಜೆಯ ಶಿಕ್ಷಣ ಕೊಡಲು ಒಂದು ಸರಕಾರಿ ಸಂಸ್ಥೆ ಇದೆಯೇ? 21ನೇ ಶತಮಾನ ಜ್ಞಾನದ ಶತಮಾನ. ಸರಸ್ವತಿ ಎಲ್ಲಿದೆಯೋ ಲಕ್ಷ್ಮಿ ಅಲ್ಲಿರುತ್ತಾಳೆ. ಬಡತನ, ತಾರತಮ್ಯ ಇಲ್ಲದೆ ಉತ್ತಮ ಕನಸು ನನಸಾಗಿಸಲು ಗುಣಮಟ್ಟದ ಶಿಕ್ಷಣ, ರಾಷ್ಟ್ರೀಯ ಶಿಕ್ಷಣ ನೀತಿ ಅನಿವಾರ್ಯ ಎಂದು ಪ್ರತಿಪಾದಿಸಿದರು.ಶಿಕ್ಷಣ ನೀತಿಯನ್ನು ಕೇಂದ್ರದ ಕಾನೂನಿನಡಿ ತರಲಾಗಿದೆ. ಕನ್‌ಕರೆಂಟ್ ಲಿಸ್ಟ್‌ನಡಿ ಸಮನ್ವಯದಿಂದ ಇದನ್ನು ತರಲಾಗುತ್ತದೆ. ಯುಜಿಸಿ ಮಾನ್ಯತೆ ಇಲ್ಲದೆ ಪದವಿ ಕೊಡಲು ಅಸಾಧ್ಯ. ಕುಲಪತಿ, ಉಪನ್ಯಾಸಕರನ್ನು ಯುಜಿಸಿ ನಿಯಮದಡಿ ನೇಮಿಸಲಾಗುತ್ತದೆ ಎಂದರು.1968ರಲ್ಲಿ ಪ್ರಥಮ ರಾಷ್ಟ್ರೀಯ ಶಿಕ್ಷಣ ನೀತಿ ಘೋಷಿಸಿ ಅನುಷ್ಠಾನಕ್ಕೆ ಬಂದಿತ್ತು. 1986ರಲ್ಲಿ ಎರಡನೇ, 34 ವರ್ಷಗಳ ನಂತರ 2020ರಲ್ಲಿ 3ನೇ ರಾಷ್ಟ್ರೀಯ ಶಿಕ್ಷಣ ನೀತಿ 2021ರಿಂದ ರಾಜ್ಯದಲ್ಲಿ ಅನುಷ್ಠಾನವಾಗಿದೆ ಎಂದು ವಿವರಿಸಿದರು.
3 ರಾಜ್ಯದಲ್ಲಿ ಸಿಹಿ ಸುದ್ದಿಪಂಚರಾಜ್ಯ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಬಿಜೆಪಿಗೆ ಸಿಹಿ ಸುದ್ದಿ ಬರಲಿದೆ. ಈ ಫಲಿತಾಂಶವು ಲೋಕಸಭಾ ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ವಿಶ್ವಾಸದಿಂದ ನುಡಿದರು.ಶೌಚಾಲಯ ನಿರ್ಮಾಣ, ಸ್ವಚ್ಛತೆ, ಗ್ಯಾಸ್ ಸಿಲಿಂಡರ್ ಪೂರೈಕೆ, ರಸ್ತೆ ನಿರ್ಮಾಣ, ರಾಮಮಂದಿರ ನಿರ್ಮಾಣ ಸೇರಿದಂತೆ ಅಭಿವೃದ್ಧಿಯಲ್ಲಿ ಕೆಲಸ ಮಾಡಿದ ಕೇಂದ್ರ ಸರಕಾರದ ವರ್ಚಸ್ಸು ಚೆನ್ನಾಗಿದೆ. ಮೋದಿಜೀ ಅವರ ಸರಿಸಮನಾದ ನಾಯಕ ಯಾರಾದರೂ ವಿಪಕ್ಷದಲ್ಲಿ ಇದ್ದಾರಾ ಎಂದು ಕೇಳಿದರು. ವಿಧಾನ ಪರಿಷತ್ತಿನ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಅಭಿವೃದ್ಧಿ ವಿಷಯದಲ್ಲಿ ರಾಜ್ಯವನ್ನು ದಶಕಗಳ ಕಾಲ ಹಿಂದಕ್ಕೆ ತಳ್ಳುವ ಪ್ರಯತ್ನ ರಾಜ್ಯದ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಟೀಕಿಸಿದರು.ವಿಧಾನ ಪರಿಷತ್ತಿನ ಸದಸ್ಯ ಹನುಮಂತ ನಿರಾಣಿ ಮಾತನಾಡಿ, ಸರಕಾರ ಬದಲಾದೊಡನೆ ರಾಜ್ಯ ಶಿಕ್ಷಣ ನೀತಿ ತರಲು ಕಾಂಗ್ರೆಸ್ ಮುಂದಾಗಿರುವುದು ಪೂರ್ವಾಗ್ರಹಪೀಡಿತ ಕ್ರಮ ಎಂದು ಟೀಕಿಸಿದ ಅವರು, ಶಿಕ್ಷಣ ವ್ಯವಸ್ಥೆ ವಿಷಯದಲ್ಲಿ ಚೆಲ್ಲಾಟ ಮಾಡದಿರಿ ಎಂದು ಒತ್ತಾಯಿಸಿದರು. ಶಿಕ್ಷಣದ ವ್ಯವಸ್ಥೆ ಬದಲಾವಣೆ ಕ್ರಮವನ್ನು ಖಂಡಿಸಿ ಕೋಟಿ ಸಹಿ ಸಂಗ್ರಹ ಈಗಾಗಲೇ ಪ್ರಾರಂಭವಾಗಿದೆ ಎಂದು ವಿವರಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 4 =
Remember me
