ಬೆಂಗಳೂರುಪಿಹೆಚ್‌ಡಿ ಪ್ರವೇಶಕ್ಕೆ ನೆಟ್ ಅರ್ಹತೆಯನ್ನು ಕಡ್ಡಾಯಗೊಳಿಸಿರುವ ಯುಜಿಸಿಯ ನಿಲುವನ್ನು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ) ಖಂಡಿಸಿದೆ. ಹಾಗೆಯೇ ಈ ನಿಯಮದಿಂದ ಹಿಂದೆ ಸರಿಯುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕೋಚಿಂಗ್ ಅನಿವಾರ್ಯವಾಗಿದೆ. ದುಬಾರಿ ಕೋಚಿಂಗ್ ಪಡೆಯಲು ಸಾಧ್ಯವಿರದ ಅಭ್ಯರ್ಥಿಗಳನ್ನು ಪಿಎಚ್ ಡಿಯಿಂದ ವಂಚಿತರನ್ನಾಗಿಸುವ ಈ ನಿಲುವು ಅನ್ಯಾಯದಿಂದ ಕೂಡಿದೆ. ಕೋಚಿಂಗ್ ಮಾಫಿಯಾಗೆ ಮಣೆ ಹಾಕಲು ಇದನ್ನು ಜಾರಿಗೊಳಿಸಲಾದೆ. ನೆಟ್ ಪರೀಕ್ಷೆ ಮೂಲಕ ಮೂರು ಹಂತಗಳ ಮಾನದಂಡವನ್ನು ನಿಗದಿಪಡಿಸಿರುವ ಯುಜಿಸಿಯ ಈ ನಿಯಮವು ಶಿಕ್ಷಣದಲ್ಲಿ ತಾರತಮ್ಯವನ್ನು ಶಾಸನಬದ್ಧಗೊಳಿಸುತ್ತದೆ ಎಂದು ಟೀಕಿಸಿದ್ದಾರೆ.
ಶಿಕ್ಷಣ ವ್ಯವಸ್ಥೆಯ ಇಂದಿನ ಇತಿಮಿತಿಗಳಲ್ಲಿಯೇ ಪಿಎಚ್‌ಡಿ ಶೈಕ್ಷಣಿಕ ಅರ್ಹತೆಯ ಪ್ರಮುಖ ಮಾನದಂಡವಾಗಿದೆ. ಈಗಾಗಲೇ ಹಲವು ಹಂತಗಳಲ್ಲಿ ವ್ಯಾಪಾರೀಕರಣಗೊಂಡಿರುವ ಶಿಕ್ಷಣ ವ್ಯವಸ್ಥೆಯಲ್ಲಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಜನಸಮುದಾಯದ ಕೆಲವೇ ಕೆಲವು ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಮುಗಿಸಿ ಪಿಎಚ್‌ಡಿ ವರೆಗೂ ತಲುಪುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ನೆಟ್ ಅರ್ಹತೆಯನ್ನು ಕಡ್ಡಾಯಗೊಳಿಸಿರುವುದು ಅನೇಕರನ್ನು ಪಿಎಚ್ ಡಿಯಿಂದ ವಂಚಿತರನ್ನಾಗಿಸುವತ್ತದೆ ಎಂದು ಅಜಯ್ ಕಾಮತ್ ಆರೋಪಿಸಿದ್ದಾರೆ.
ಪ್ರಾದೇಶಿಕ ವೈವಿದ್ಯತೆಗೆ ಪೂರಕವಾಗಿ ಶಿಕ್ಷಣವನ್ನು ಒದಗಿಸಲು ವಿಶ್ವವಿದ್ಯಾಲಯಗಳು ಸ್ಥಾಪನೆಗೊಂಡಿವೆ. ಪ್ರತಿ ವಿಶ್ವವಿದ್ಯಾಲಯಗಳು ವಿಭಿನ್ನತೆಯಿಂದ ಕೂಡಿವೆ. ಹೀಗಿರುವಾಗ, ಎಲ್ಲ ವಿಶ್ವವಿದ್ಯಾಲಯಗಳಿಗೂ ಒಂದು ಸಾಮಾನ್ಯ ಪರೀಕ್ಷೆಯನ್ನು ನಿಗದಿಪಡಿಸುವುದು ಶಿಕ್ಷಣದ ಪ್ರಜಾತಾಂತ್ರಿಕ ಪರಿಕಲ್ಪನೆಯನ್ನು ನಾಶಗೊಳಿಸುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − fourteen =
Remember me
