ಬೆಂಗಳೂರು:ವಿದೇಶಗಳಲ್ಲಿ ಕಾಣಸಿಗುವ, ಭಾರತದಲ್ಲಿ ವಿಶೇಷ ಎಂಬಂತಹ ಹ್ಯೂಮನ್ ಪವರ್ಡ್​ ವೆಹಿಕಲ್​ ಬೆಂಗಳೂರಿನ ಜೆಪಿ ನಗರ ರಸ್ತೆಯಲ್ಲಿ ಕಾಣಿಸಿಕೊಂಡಿದೆ. ನೆದರ್ಲ್ಯಾಂಡ್​​ನಿಂದ ಆಮದು ಮಾಡಿಕೊಂಡಿರುವ ಸ್ಲೀಪಿಂಗ್ ಪಾಡ್ ಆಕಾರದ ಹ್ಯೂಮನ್ ಪವರ್ಡ್​ ವೆಹಿಕಲ್ ಸಂಚರಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಟ್ವಿಟರ್​ನಲ್ಲಿ ವೈರಲ್ ಆಗುತ್ತಿದೆ.
ಸದಾ ಸಂಚಾರ ದಟ್ಟಣೆ ಇರುವ ಬೆಂಗಳೂರಿನ ರಸ್ತೆಯಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿರುವ ಹ್ಯೂಮನ್ ಪವರ್ಡ್​ ವಾಹನವನ್ನು ಸಾರ್ವಜನಿಕರು ಕುತೂಹಲದಿಂದ ನೋಡಿದ್ದಾರೆ. ಬಸ್ಸು, ಲಾರಿ, ಕಾರುಗಳ ನಡುವೆ ಇದೇನಿದು ವಿಭಿನ್ನ ಮಾದರಿಯ ವಾಹನ ಎಂದು ಜನರು ಯೋಚಿಸಿದ್ದಾರೆ. ವೈರಲ್ ಆಗಿರುವ ಈ ವಿಡಿಯೋವನ್ನು ಈಗಾಗಲೇ 72 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಜತೆಗೆ ಈ ವಾಹನದ ಬಗ್ಗೆ ನಿರಂತರ ಚರ್ಚೆ ಮಾಡಿದ್ದಾರೆ.
Now this is some@peakbengalurustuff. Met this guy near JP Nagar. Human powered vehicle from Netherlands.pic.twitter.com/r1whYjPQlX— Revanth (@RevanthD18)January 22, 2023
Now this is some@peakbengalurustuff. Met this guy near JP Nagar. Human powered vehicle from Netherlands.pic.twitter.com/r1whYjPQlX
ರೇವಂತ್ ಎಂಬುವವರು ಹ್ಯೂಮನ್ ಪವರ್ಡ್​ ಕಾರು ಸಂಚರಿಸುತ್ತಿರುವುದನ್ನು ವಿಡಿಯೋ ಮಾಡಿ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಶೇಷ ವಾಹನದ ಬಗ್ಗೆ ಇದೀಗ ಟ್ವಿಟರ್​ನಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಅಲ್ಲದೆ ಒಂದು ಬಾರಿಯಾದರೂ ಈ ವಾಹನವನ್ನು ಚಲಾಯಿಸಿ ನೋಡಬೇಕು ಎಂದು ಅನೇಕರು ಬಯಕೆ ವ್ಯಕ್ತಪಡಿಸಿದ್ದಾರೆ.
ಇನ್ನು ಬೆಂಗಳೂರಿನ ವಾಹನ ಸವಾರರಿಗೆ ಸವಾಲಾಗಿರುವ ಗುಂಡಿಗಳಿರುವ ರಸ್ತೆಯಲ್ಲಿ ಈ ವಾಹನ ಹೇಗೆ ಓಡಾಡುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ವಾಹನ ಕಾನೂನು ನಿಯಮಗಳಲ್ಲಿ ಭಾರತದ ರಸ್ತೆಯಲ್ಲಿ ಹ್ಯೂಮನ್ ಪವರ್ಡ್ ವಾಹನವನ್ನು ಚಲಾಯಿಸಲು ಅವಕಾಶ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 14 =
Remember me
