ದಕ್ಷಿಣ ಕನ್ನಡ:ಕರೊನಾ ಅಟ್ಟಹಾಸ ದಿನೇದಿನೆ ಹೆಚ್ಚುತ್ತಿರುವ ಪರಿಣಾಮ ಶಾಲೆಗಳ ಆರಂಭಕ್ಕೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ಮಕ್ಕಳ ಕಲಿಕೆ ನಿರಂತರವಾಗಿ ಇರಬೇಕು ಎಂಬ ಸದುದ್ದೇಶದಿಂದ ಸರ್ಕಾರ ಜಾರಿ ಮಾಡಿದ್ದ ವಿದ್ಯಾಗಮ ಯೋಜನೆಗೂ ಸದ್ಯ ತಾತ್ಕಾಲಿಕ ಬ್ರೇಕ್​ ಬಿದ್ದಿದೆ. ಅಲ್ಲದೆ ಆನ್​ಲೈನ್ ತರಗತಿಯೂ ಗ್ರಾಮೀಣ ಭಾಗದ ಮಕ್ಕಳ ಪಾಲಿಗೆ ಸರ್ಕಸ್​ನಂತಾಗಿದ್ದು, ಮೊಬೈಲ್​ ಹಿಡಿದು ಮರವೇರುತ್ತಿದ್ದಾರೆ!
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಕೇಂದ್ರದ ಕಟ್ಟ ಕಡೆಯ ಗ್ರಾಮ ಬಾಳುಗೋಡುನಲ್ಲಿ ಆನ್​ಲೈನ್ ತರಗತಿಗಳಿಗೆ ಹಾಜರಾಗುವುದೇ ಸವಾಲಿನ ಕೆಲಸ. ಈ ಭಾಗದಲ್ಲಿ ನೆಟ್‍ವರ್ಕ್ ಸಮಸ್ಯೆ ವಿಪರೀತವಾಗಿ ಕಾಡುತ್ತಿದೆ. 100ಕ್ಕೂ ಅಧಿಕ ವಿದ್ಯಾರ್ಥಿಗಳು ಅರಣ್ಯ ಭಾಗದ ಗುಡ್ಡಗಳಿಗೆ ತೆರಳಿ ಮರ ಹತ್ತಿ ನೆಟ್‍ವರ್ಕ್‍ಗಾಗಿ ಹರಸಾಹಸ ಪಡುತ್ತಿದ್ದಾರೆ.
ಬಾಳುಗೋಡಿನ ಬೆಟ್ಟುಮಕ್ಕಿಯ ವಿದ್ಯಾರ್ಥಿಗಳು ನೆಟ್​ವರ್ಕ್ ದೊರಕುವ ಎತ್ತರದ ಅರಣ್ಯದಲ್ಲಿ ಟೆಂಟ್ ನಿರ್ಮಿಸಿಕೊಂಡು ಆನ್​ಲೈನ್​ಪಾಠ ಕೇಳುತ್ತಿದ್ದಾರೆ. ಹಾಗಾಗಿ ಮರವೇರಿದರೆ ಮಾತ್ರ ಈ ಭಾಗದ ವಿದ್ಯಾರ್ಥಿಗಳಿಗೆ ಆನ್​ಲೈನ್​ ಪಾಠ. ಅದಕ್ಕಾಗಿ ದಟ್ಟ ಅರಣ್ಯದೊಳಗೆ ನೆಟ್‍ವರ್ಕ್ ಹುಡುಕಾಟ ನಿತ್ಯ ಗೋಳಾಗಿ ಪರಿಣಮಿಸಿದೆ.
ಇನ್ನು ಬಾಳುಗೋಡು ಪ್ರದೇಶದಲ್ಲಿ ಯಾವುದೇ ಸಿಮ್‍ನ ನೆಟ್‍ವರ್ಕ್ ಸಿಗಲ್ಲ. ಹಾಗಾಗಿ ಇಲ್ಲಿನ ಜನರು ಸಂಪರ್ಕ ವ್ಯವಸ್ಥೆ ಇಲ್ಲದೆ ಹೈರಾಣಾಗಿದ್ದಾರೆ. ಮಕ್ಕಳಂತೂ ಅಪಾಯಕಾರಿಯಾಗಿ ಮರ ಹತ್ತಿ ಶಿಕ್ಷಣ ಪಡುಯುತ್ತಿದ್ದಾರೆ.
ಮಲೆನಾಡು, ಕುಗ್ರಾಮದ ಬಹುತೇಕ ಮಕ್ಕಳು ಮೊಬೈಲ್​ ನೆಟ್​ವರ್ಕ್ ಸಿಕ್ತಿಲ್ಲವೆಂದು ಗುಡ್ಡ, ದಿಣ್ಣೆ, ಮನೆ ಛಾವಣಿ ಮೇಲೇರುತ್ತಿದ್ದಾರೆ ಎಂಬುದು ಗೊತ್ತಿರುವ ವಿಷಯ. ನೆಟ್​ವರ್ಕ್​ ಇಲ್ಲದೆ ಆನ್​ಲೈನ್​ ಪಾಠ ಕೇಳಲು ಕಿರಿಕಿರಿ ಅನುಭವಿಸುತ್ತಿರುವವರ ಪಟ್ಟಿಯಲ್ಲಿ ಬಾಳುಗೋಡು ಗ್ರಾಮದ ಮಕ್ಕಳೂ ಹೊರತಾಗಿಲ್ಲ. ಅಪಾಯ ಸಂಭವಿಸುವ ಮುನ್ನ ಇದಕ್ಕೊಂದು ಸೂಕ್ತ ಪರಿಹಾರ ಕಲ್ಪಿಸುವತ್ತ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಗಮನಹರಿಸಬೇಕಿದೆ.
ಹಿಂದು ಎಂಬುದು ಧರ್ಮವೇ ಅಲ್ಲ; ಮತ್ತೊಂದು ವಿವಾದದ ಕಿಡಿ ಹಚ್ಚಿದ ಪ್ರೊ.ಭಗವಾನ್​

ಬಿಜೆಪಿಗೆ ಬಹುಮತ ಇಲ್ಲದಿದ್ದರೂ ಪದೇಪದೆ ಈ ಗುಲಾಬಿಯೇ ಅಧ್ಯಕ್ಷೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
