ಬೆಂಗಳೂರು:ಯಾವುದೇ ಪ್ರಶ್ನೆಗೂ ಪತ್ರಕರ್ತರ ಮೇಲೆ ಸಿಟ್ಟಾಗಬೇಡಿ. ಒಂದು ವೇಳೆ ಸಿಟ್ಟು ಮಾಡಿಕೊಂಡರೆ ದಿನ ಪೂರ್ತಿ ಅದನ್ನೇ ತೋರಿಸ್ತಾರೆ, ಪತ್ರಿಕೆಗಳಲ್ಲಿ ಅದೇ ಹೈಲೈಟ್ ಆಗಿ ಅದಕ್ಕೂ ಮುಂಚೆ ನೀವು ನೀಡಿದ ಹೇಳಿಕೆ ಗೌಣವಾಗಿ ಬಿಡುತ್ತದೆ.
ಹೀಗೆಂದವರು; ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಅರವಿಂದ ಲಿಂಬಾವಳಿ.
ಬಿಜೆಪಿ ನಗರ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಮಾಧ್ಯಮ ಮಂಥನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಶ್ನೆ ಕೇಳುವುದು ಪತ್ರಕರ್ತರ ಧರ್ಮ. ಹಾಗಂತ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕೆಂದಿಲ್ಲ. ಮೌನವಹಿಸಿ ಇಲ್ಲವೇ ಮುಗಳ್ನಕ್ಕು ಮುಂದೆ ಹೋಗುವುದು ಕ್ಷೇಮವೆಂದು ಸಲಹೆ ನೀಡಿದರು.
ಕೇಂದ್ರ ರಾಜ್ಯ ಸರ್ಕಾರದ ಯೋಜನೆಗಳು, ಪಕ್ಷದ ವಿಷಯಗಳ ಬಗ್ಗೆ ಪೂರ್ಣ ಅಧ್ಯಯನ, ಸಿದ್ಧತೆಗಳೊಂದಿಗೆ ಪ್ರಬಲವಾಗಿ ವಿಚಾರ ಮಂಡಿಸಿ, ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸಬೇಕು. ಪ್ರಚಾರದ ಬೆನ್ನು ಬೀಳದೆ ವ್ಯಕ್ತಿಗಿಂತ ಪಕ್ಷ ಮುಖ್ಯವೆಂದು ತಿಳಿದರೆ, ಪಕ್ಷ ಹಾಗೂ ವೈಯಕ್ತಿಕ ವರ್ಚಸ್ಸು ಬೆಳೆಯುತ್ತದೆ ಎಂದು ಅರವಿಂದ ಲಿಂಬಾವಳಿ ಕಿವಿಮಾತು ಹೇಳಿದರು.
ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಪಕ್ಷದ‌ ಬೆಂಗಳೂರು ದಕ್ಷಿಣ ಜಿಲ್ಲೆ ಅಧ್ಯಕ್ಷ ಎನ್.ಆರ್.ರಮೇಶ್, ಉತ್ತರ ಜಿಲ್ಲೆ ಅಧ್ಯಕ್ಷ ಮಂಜುನಾಥ ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + eighteen =
Remember me
