ಬೆಂಗಳೂರು:ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(BMRCL)ಅಧಿಕಾರಿಗಳೊಡನೆ ಸಭೆ ನಡೆಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar), ಈ ವರ್ಷದ ನವೆಂಬರ್ ವೇಳೆಗೆ 4 ಹೊಸ ಮೆಟ್ರೋ ಲೈನ್ ಉದ್ಘಾಟಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಇದು ಜಗತ್ತಿನ ಅತ್ಯಂತ ಹಳೆಯ ಸಂಗೀತ ಸಾಧನ: ಇಲ್ಲಿದೆ ದಿವ್ಜೆ ಬೇಬ್ ಕೊಳಲು ಕುರಿತ ಅಚ್ಚರಿ ಸಂಗತಿ
ಬಿಎಂಆರ್​ಸಿಎಲ್ ಅಧಿಕಾರಿಗಳೊಡನೆ ಸಭೆ ನಡೆಸಿದ ಡಿಸಿಎಂ, “ಒಟ್ಟು 6 ಹೊಸ ಮೆಟ್ರೋ ಲೈನ್ ತರಲು ಚಿಂತಿಸಿದ್ದೇವೆ. 6ರ ಪೈಕಿ 4 ಹೊಸ ಮೆಟ್ರೋ ಲೈನ್​ಗಳು ಈ ವರ್ಷದ ನವೆಂಬರ್​ ತಿಂಗಳೊಳಗೆ ಸಿದ್ಧವಾಗಲಿದೆ” ಎಂದು ಹೇಳಿದರು. “ನಾನು ನಮ್ಮ ಮೆಟ್ರೋದಲ್ಲಿ ಹಲವಾರು ಬಾರಿ ಪ್ರಯಾಣಿಸಿದ್ದೇನೆ ಮತ್ತು ಇದು ಅಂತಾರಾಷ್ಟ್ರೀಯ ಗುಣಮಟ್ಟದ ಸೇವೆಯನ್ನು ಒದಗಿಸುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ರಾತ್ರಿ 11 ಗಂಟೆಯ ನಂತರವೂ ಸೇವೆಯನ್ನು ವಿಸ್ತರಿಸಲು ಸಲಹೆಗಳು ಕೇಳಿಬಂದಿದ್ದು, ಅದನ್ನು ಪರಿಗಣಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. ಜಾಹೀರಾತಿನಿಂದಲೂ ಸಾಕಷ್ಟು ಲಾಭ ಬರುತ್ತಿದೆ” ಎಂದು ಹೇಳಿದರು.
ಇದನ್ನೂ ಓದಿ:ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾದ ಸರ್ಕಾರ? ಪ್ರೊ|ಬರಗೂರು ರಾಮಚಂದ್ರಪ್ಪ, ಶಿಕ್ಷಣ ತಜ್ಞ ನಿರಂಜನಾರಾಧ್ಯ ಜತೆ ಸಿಎಂ ಚರ್ಚೆ
“ರಿಯಾಯತಿ ದರದಲ್ಲಿ ವಿದ್ಯುತ್ ಲಭ್ಯವಿದ್ದರೂ ಗ್ರೂಪ್ ಕ್ಯಾಪ್ಟಿವ್ ಮಾದರಿ ಅನುಸರಿಸಿ ವಿದ್ಯುತ್ ವೆಚ್ಚ ತಗ್ಗಿಸುವಂತೆ ಸೂಚಿಸಿದ್ದೇನೆ. ವಿಶೇಷವಾಗಿ ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೋ ನಿರ್ಮಾಣದ ವೇಗವನ್ನು ಹೆಚ್ಚಿಸುವ ಅವಶ್ಯಕತೆಯಿದೆ. 2026ರ ವೇಳೆಗೆ ಆರು ಹೊಸ ಮೆಟ್ರೊ ಮಾರ್ಗಗಳನ್ನು(New Metro Lines)ಉದ್ಘಾಟಿಸಲಾಗುವುದು, ಈ ಪೈಕಿ ನಾಲ್ಕು ಈ ವರ್ಷದ ನವೆಂಬರ್ ವೇಳೆಗೆ ಸಿದ್ಧವಾಗಲಿದೆ” ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + eight =
Remember me
