ಬೆಂಗಳೂರು:ರಾಜ್ಯದಲ್ಲಿ ಬೇರು ವಿಸ್ತರಿಸಿರುವ ಡ್ರಗ್ಸ್ ಮಾಫಿಯಾವನ್ನು ಹೆಡೆಮುರಿ ಕಟ್ಟಲು ಸರ್ಕಾರ ಪೊಲೀಸರಿಗೆ ಗೂಂಡಾ ಕಾಯ್ದೆ ಮಾದರಿಯಲ್ಲಿ ಡ್ರಗ್ಸ್ ದಂಧೆಕೋರರ ವಿರುದ್ಧ ‘ಮಾದಕ ವಸ್ತು ಸಾಗಣೆ ಮತ್ತು ಮಾರಾಟ ನಿರ್ಬಂಧ’ (ಪಿಐಟಿ- ಎನ್​ಡಿಪಿಎಸ್ ಆಕ್ಟ್ 1998) ಕಾಯ್ದೆ ಪ್ರಯೋಗಿಸುವ ಅಧಿಕಾರ ನೀಡಿದೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಈ ಕಾಯ್ದೆಯಡಿ ನೈಜೀರಿಯಾದ ವೃತ್ತಿಪರ ಡ್ರಗ್ ಪೆಡ್ಲರ್ ಮಕುಕೊ ಚುಕ್ವಾಕ ಮೌಲೊಕ್ವಾ ಅಲಿಯಾಸ್ ಹೆನ್ರಿ (31) ಎಂಬಾತನನ್ನು ಬಂಧಿಸಿದ್ದಾರೆ.
ಈ ಕಾಯ್ದೆಯಡಿ, ಬಂಧಿತನಿಗೆ 1-2 ವರ್ಷ ಜೈಲುವಾಸವಿರುತ್ತದೆ. ನ್ಯಾಯಾಧೀಶರ ಮಾರ್ಗದರ್ಶಕ ಮಂಡಳಿಯಲ್ಲಿ ವಕೀಲರನ್ನು ನೇಮಿಸಿಕೊಳ್ಳದೆ ಸ್ವಂತಃ ಆರೋಪಿ ಅಥವಾ ಆತನ ಸಂಬಂಧಿಕರು ಅಹವಾಲು ಸಲ್ಲಿಸಬಹುದು. 1 ವರ್ಷ ಜಾಮೀನು ಸಿಗದ ಕಾರಣ ದಂಧೆಕೋರರಿಗೆ ಕಡಿವಾಣ ಬೀಳಲಿದೆ ಎಂಬುದು ಪೊಲೀಸರ ಆಶಯ.
ಈ ಮೊದಲು ಮಾದಕವಸ್ತು ಕಾಯ್ದೆಯಡಿ ಬಂಧಿತರಾದವರು ಕೆಲವೇ ದಿನಗಳಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದು ಹಳೇ ಚಾಳಿ ಶುರು ಮಾಡುತ್ತಿದ್ದರು. ಬೆಂಗಳೂರಿನ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ರೌಡಿಗಳನ್ನು ಮಟ್ಟಹಾಕಲು ಗೂಂಡಾ ಕಾಯ್ದೆಯಡಿ ಎಫ್​ಐಆರ್ ಮಾಡುತ್ತಿದ್ದಾರೆ. ಇದೇ ರೀತಿ, ವೃತ್ತಿಪರ ಡ್ರಗ್ಸ್ ಪೆಡ್ಲರ್​ಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮದ ಬಗ್ಗೆ ಪರಿಶೀಲನೆ ನಡೆಸಿದಾಗ 1988ರಲ್ಲೇ ಕೇಂದ್ರ ಜಾರಿಗೊಳಿಸಿರುವ ಮಾದಕ ಮತ್ತು ಅಮಲು ಭರಿಸುವ ವಸ್ತುಗಳ ಮಾರಾಟ, ಸಾಗಣೆ ನಿರ್ಬಂಧ ಕಾಯ್ದೆ ಗಮನಕ್ಕೆ ಬಂದಿದೆ. ಆದರೆ, ಈ ಕಾಯ್ದೆ ಪ್ರಕಾರ ಆರೋಪಿ ಬಂಧನಕ್ಕೆ ಆದೇಶ ನೀಡುವ ಅಧಿಕಾರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಂದಿದ್ದವು. ಸಂದೀಪ್ ಪಾಟೀಲ್ ಈ ಅಂಶವನ್ನು ಸರ್ಕಾರದ ಗಮನಕ್ಕೆ ತಂದು ಕಾಯ್ದೆಗೆ ಮರುರೂಪ ನೀಡಿದ್ದಾರೆ.
ಕಲಬುರಗಿಯಲ್ಲಿ ಕರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ್ದ ವೈದ್ಯನಿಗೂ ಕರೊನಾ ಸೋಂಕು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
