ಬೆಂಗಳೂರು: ರೈತರು ಪ್ರತಿವರ್ಷ ಎದುರಿಸುವ ಬೆಳೆ ವಿಮೆ ಸಮಸ್ಯೆ ಪರಿಹಾರಕ್ಕಾಗಿ ‘ಅನ್ನದಾತ’ ಹೆಸರಿನಲ್ಲಿ ಹೊಸ ಆಪ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಿಂದ ಅಕ್ರಮ ತಡೆಗಟ್ಟುವ ಜತೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ)ಗೂ ಅನುಕೂಲವಾಗಲಿದೆ. ಹಾಗೆಯೇ ಕೃಷಿಕರ ಸಂಪೂರ್ಣ ಮಾಹಿತಿ ಒಳಗೊಂಡ ‘ಸ್ವಾಭಿಮಾನಿ ರೈತ’ ಹೆಸರಿನಲ್ಲಿ ಚಿಪ್ ಆಧಾರಿತ ಕಿಸಾನ್ ಕ್ರೆಡಿಟ್ ಕಾರ್ಡ್ ಶೀಘ್ರ ಬಿಡುಗಡೆ ಆಗಲಿದೆ.
ರಾಜ್ಯದಲ್ಲಿ ಕೃಷಿ ಕ್ಷೇತ್ರಕ್ಕೆ ಹೊಸ ರೂಪ ನೀಡಲು ನಿರ್ಧರಿಸಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ಭರವಸೆಗಳಿವು. ಸಚಿವರಾಗಿ ನೂರು ದಿನ ಪೂರ್ಣಗೊಳಿಸಿರುವ ಅವರು ತಮ್ಮ ಅನುಭವ ಹಾಗೂ ಕನಸುಗಳನ್ನು ‘ವಿಜಯವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ. ಇಲಾಖೆಯಲ್ಲಿ ಶೇ. 51 ಸಿಬ್ಬಂದಿ ಕೊರತೆ ಇದ್ದು, ಕರೊನಾ ಸಮಸ್ಯೆ ಬಗೆಹರಿದ ಕೂಡಲೇ ಸಿಎಂ ಜತೆ ರ್ಚಚಿಸಿ ನೇಮಕಾತಿಗೆ ಆದ್ಯತೆ ನೀಡುವ ವಾಗ್ದಾನ ಮಾಡಿದ್ದಾರೆ.
ಕರೊನಾ ಲಾಕ್​ಡೌನ್ ಸಂದರ್ಭದಲ್ಲೂ 30 ಜಿಲ್ಲೆಗಳಲ್ಲಿ ಸಂಚರಿಸಿ ಕೃಷಿಕರಿಗೆ ಆತ್ಮಸ್ಥೈರ್ಯ ತುಂಬಿರುವ ಸಚಿವ ಬಿ.ಸಿ. ಪಾಟೀಲ್, ಪ್ರತಿ ಜಿಲ್ಲೆಗೂ ಏನೇನು ಅಗತ್ಯವಿದೆ ಎಂಬ ಕುರಿತು ಮುಖ್ಯಮಂತ್ರಿಗೆ ವರದಿ ಸಲ್ಲಿಸಿದ್ದಾರೆ. ಅದರಲ್ಲಿ ಬಹಳಷ್ಟು ಅಂಶಗಳನ್ನು ಜಾರಿಮಾಡಿರುವುದು ಪಾಟೀಲರ ಹೆಗ್ಗಳಿಕೆಯೂ ಹೌದು.
ಇದನ್ನೂ ಓದಿಕೋಡೆಡ್ ಮೆಸೇಜ್ ಹೊತ್ತ ಪಾಕ್‌ನ ಗೂಢಚಾರಿ ಪಾರಿವಾಳ ವಶ
ಪ್ರತಿ ವರ್ಷ ಬೆಳೆವಿಮೆ ಸಮಸ್ಯೆಯಾಗುತ್ತಿದೆ. ರೈತರಿಗೆ ಅದರ ಫಲ ಸಿಗುತ್ತಿಲ್ಲ ಎಂಬ ಮಾತಿದೆಯಲ್ಲ?
ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ‘ಅನ್ನದಾತ’ ಹೆಸರಲ್ಲಿ ಹೊಸ ಆಪ್ ಅಭಿವೃದ್ಧಿಪಡಿಸುತ್ತಿದ್ದೇವೆ. ಸರ್ವೆ ಸರಿಯಾಗಿ ಆಗದೆ ಇದ್ದ ಕಾರಣಕ್ಕೆ ಸಮಸ್ಯೆಯಾಗಿತ್ತು. ಬೆಳೆಗಳ ಫೋಟೋ ತೆಗೆದು ಅಪ್​ಲೋಡ್ ಮಾಡಲು ಖಾಸಗಿ ವ್ಯಕ್ತಿಗಳ ನೇಮಕ ಮಾಡಲಾಗಿತ್ತು. ಅದಕ್ಕಾಗಿ 90 ಕೋಟಿ ರೂ. ವೆಚ್ಚವಾಗುತ್ತಿತ್ತು. ಆದರೆ ಒಂದೇ ಸರ್ವೆ ನಂಬರ್​ನಲ್ಲಿ ಬೇರೆ ಬೇರೆ ಭೂಮಿ ಇದ್ದಾಗ ಫೋಟೋ ಸರಿಯಾಗಿ ಅಪ್​ಲೋಡ್ ಆಗದೆ ವಿಮೆ ಸಿಗುತ್ತಿರಲಿಲ್ಲ. ಈಗ ರೈತರು ಆಪ್ ಡೌನ್​ಲೋಡ್ ಮಾಡಿ ತಮ್ಮ ಬೆಳೆಯ ಫೋಟೋವನ್ನು ತಾವೇ ಅಪ್​ಲೋಡ್ ಮಾಡಬಹುದು. ಈ ಫೋಟೋ ಭೂಮಿ ಹಾಗೂ ಕೆ-ಕಿಸಾನ್​ಗೆ ಲಿಂಕ್ ಆಗುತ್ತದೆ. ಇದರ ಜತೆಗೆ ಎಂಎಸ್​ಪಿಗೂ ಅನುಕೂಲವಾಗುತ್ತದೆ. ಬೆಳೆಯ ಪ್ರಮಾಣದ ನಿಖರತೆ ಸಿಗುತ್ತದೆ. ಶೀಘ್ರದಲ್ಲಿಯೇ ಆಪ್ ಬಿಡುಗಡೆ ಮಾಡಲಾಗುತ್ತದೆ.
ರೈತರ ವಿವರಗಳು ಒಂದೆಡೆ ಸಿಗುವಂತೆ ಮಾಡುವ ಉದ್ದೇಶ ಇದೆಯೇ?
ಇದು ಪ್ರಮುಖವಾಗಿ ಆಗಬೇಕಾದ ಕೆಲಸ. ಆದ್ದರಿಂದಲೇ ‘ಸ್ವಾಭಿಮಾನಿ ರೈತ’ ಹೆಸರಿನಲ್ಲಿ ಚಿಪ್ ಇರುವ ಕಿಸಾನ್ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಲಾಗುತ್ತದೆ. ಇದರಲ್ಲಿ ಹೆಸರು, ವಿಳಾಸ, ಆಧಾರ್ ಸಂಖ್ಯೆ, ದೂರವಾಣಿ, ಬ್ಯಾಂಕ್ ಖಾತೆ, ಪಡೆದಿರುವ ಸರ್ಕಾರದ ಸೌಲಭ್ಯ ಎಲ್ಲವೂ ಸಿಗುತ್ತವೆ. ಈ ಕಾರ್ಡ್ ಇದ್ದರೆ ಪ್ರತಿ ಸಂದರ್ಭದಲ್ಲಿಯೂ ಪಹಣಿಯ ಅಗತ್ಯವಿರುವುದಿಲ್ಲ.
ಬೆಳೆ ಪದ್ಧತಿಯಲ್ಲಿ ಬದಲಾವಣೆ ತರುವ ಉದ್ದೇಶ ಏನಾಗಿದೆ?
ಬೆಳೆ ಪದ್ಧತಿಯಲ್ಲಿ ಬದಲಾವಣೆ ತರಲೇಬೇಕಾಗಿದೆ. ಆದ್ದರಿಂದ ಈ ವರ್ಷದಿಂದಲೇ ಬಿತ್ತನೆ ಬೀಜ ವಿತರಣೆಯಲ್ಲಿ ಇಂಥದ್ದೊಂದು ಪ್ರಯತ್ನವನ್ನು ಪ್ರಾಯೋಗಿಕವಾಗಿ ಮಾಡುತ್ತಿದ್ದೇವೆ. 5 ಎಕರೆಗೆ ಬಿತ್ತನೆ ಬೀಜ ಕೊಳ್ಳುವವರಿಗೆ 3 ಎಕರೆಗೆ ಒಂದು ತಳಿ ಹಾಗೂ ಉಳಿದ 2 ಎಕರೆಗೆ ಇನ್ನೊಂದು ತಳಿ ಬೀಜ ನೀಡಲಾಗುತ್ತದೆ.
ಇಲಾಖೆಯ ಸಿಬ್ಬಂದಿ ಕೊರತೆ ಹೇಗೆ ಪರಿಹರಿಸುತ್ತೀರಿ?
ಶೇ. 51 ಸಿಬ್ಬಂದಿ ಕೊರತೆ ಇದ್ದು, ಕರೊನಾ ಮುಗಿದ ನಂತರ ಈ ಹುದ್ದೆ ತುಂಬಲು ಪ್ರಯತ್ನ ಮಾಡಲಾಗು ತ್ತದೆ. ಸಿಎಂ ಜತೆ ರ್ಚಚಿಸುತ್ತೇನೆ. ಕೃಷಿ ಡಿಪ್ಲೊಮಾ ಪಡೆದ 2236 ಜನರನ್ನು ‘ರೈತ ಮಿತ್ರ’ ಹೆಸರಿನಲ್ಲಿ ಹಂತ ಹಂತವಾಗಿ ನೇಮಕ ನಡೆಸುವ ಉದ್ದೇಶ ಹೊಂದಿದ್ದೇನೆ ಎಂದು ಸಚಿವರು ಹೇಳಿದರು.
ಈಶಾನ್ಯ ರಾಜ್ಯ ಮಣಿಪುರದಲ್ಲಿ ಭಾರಿ ಭೂಕಂಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
