ಬೆಂಗಳೂರು:ಹೊಸದಾಗಿ ಬಿಪಿಎಲ್ ಕಾರ್ಡ್​ಗೆ ಅರ್ಜಿ ಸಲ್ಲಿಸಿರುವವರಿಗೆ ಹಾಗೂ ಇನ್ನು ಅರ್ಜಿ ಸಲ್ಲಿಸಬೇಕು ಎಂದುಕೊಂಡವರಿಗೆ ಇದು ಬೇಸರದ ಸಂಗತಿ, ಏಕೆಂದರೆ ಹೊಸ ಬಿಪಿಎಲ್ ಕಾರ್ಡ್​​ಗಳು ಸದ್ಯ ಸಿಗಲಾರವು. ಕರೊನಾದ ಕರಿಛಾಯೆ ಇದೀಗ ಈ ಪ್ರಕ್ರಿಯೆ ಮೇಲೂ ಪರಿಣಾಮ ಬೀರಿರುವುದರಿಂದ ಹೊಸ ಬಿಪಿಎಲ್​ ಕಾರ್ಡ್​ಗಳಿಗೆ ಇನ್ನಷ್ಟು ತಿಂಗಳುಗಳ ಕಾಲ ಕಾಯುವುದು ಅನಿವಾರ್ಯ,
ಕರೊನಾದಿಂದಾಗಿ ಒಂದು ವರ್ಷದಿಂದ ರೇಷನ್ ಕಾರ್ಡ್ ನೀಡುವ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರಾಜ್ಯದಲ್ಲಿ ಮತ್ತೆ ಕರೊನಾ ಎರಡನೇ ಅಲೆ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಿರುವವರು ಹಾಗೂ ಅರ್ಜಿ ಸಲ್ಲಿಸಲು ಕಾಯುತ್ತಿರುವ ಅಭ್ಯರ್ಥಿಗಳು ಅನಿವಾರ್ಯವಾಗಿ ಮತ್ತಷ್ಟು ತಿಂಗಳು ಕಾಯವ ಸ್ಥಿತಿ ಬಂದಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಿದ್ದರೂ ಸದ್ಯಕ್ಕೆ ರೇಷನ್ ಕಾರ್ಡ್ ಸಿಗುವುದಿಲ್ಲ. ಸರ್ಕಾರ ಆದೇಶ ಹೊರಡಿಸಿದ ಬಳಿಕ ಅರ್ಜಿಗಳ ವಿಲೇ ಪ್ರಕ್ರಿಯೆ ಶುರುವಾಗಲಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಗಾರ್ಮೆಂಟ್ ಫ್ಯಾಕ್ಟರಿಯ ಯಂತ್ರಕ್ಕೆ ಸಿಲುಕಿ ಯುವತಿ ಸಾವು; ಜೀವ ಕಳೆದುಕೊಳ್ಳುವಂತೆ ಮಾಡಿತು ಸಣ್ಣದೊಂದು ಆಕಸ್ಮಿಕ
ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಕುಟುಂಬದವರಿಗೆ ವಿನಾಯಿತಿ ನೀಡಿದ್ದು, ಅಂಥವರಿಗೆ ತುರ್ತಾಗಿ ರೇಷನ್ ಕಾರ್ಡ್ ನೀಡಬೇಕೆಂದು ಆಹಾರ ನಿರೀಕ್ಷಕರಿಗೆ ಇಲಾಖೆ ಸೂಚಿಸಿದೆ. ಆದರೆ, ಪ್ರತಿ ತಿಂಗಳಿಗೆ ಆಯಾ ವ್ಯಾಪ್ತಿಯ ಆಹಾರ ಇಲಾಖೆಗೆ ಕಚೇರಿಗೆ ಇಂತಹ ಸಾವಿರಾರು ಅರ್ಜಿಗಳು ಸಲ್ಲಿಕೆಯಾದರೂ ಆಹಾರ ನಿರೀಕ್ಷಕರು ಅರ್ಜಿಗಳನ್ನು ವಿಲೇ ಮಾಡುತ್ತಿಲ್ಲ. ನಾವು ಬಡವರಿದ್ದು, ಹೃದಯ ಸಂಬಂಧಿ ಕಾಯಿಲೆಯಿಂದ ಕುಟುಂಬದ ಸದಸ್ಯರೊಬ್ಬರು ಬಳಲುತ್ತಿದ್ದಾರೆ. ಬಿಪಿಎಲ್ ಕಾರ್ಡ್ ಇದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸೇರಿ ಇನ್ನಿತರ ಸೌಲಭ್ಯಗಳು ಸಿಗುತ್ತವೆ. ಆದರೆ, ಅರ್ಜಿ ಸಲ್ಲಿಸಿ ವರ್ಷವಾದರೂ ಕಾರ್ಡ್ ಬಂದಿಲ್ಲ ಎಂದು ಅರ್ಜಿದಾರರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ರೇಷನ್ ಕಾರ್ಡ್‌ಗೆ ಅರ್ಜಿದಾರರು ಕಡ್ಡಾಯವಾಗಿ ಆಧಾರ್ ಕಾರ್ಡ್, ವಾರ್ಷಿಕ ಆದಾಯ ಮತ್ತು ವಾಸ ಸ್ಥಳ ದೃಢೀಕರಣ ಪತ್ರ ಕಡ್ಡಾಯ. ನಿಯಮ ಪ್ರಕಾರ ಎಲ್ಲ ದಾಖಲೆಗಳು ಸರಿ ಇದ್ದರೆ 15-20 ದಿನದೊಳಗೆ ಅರ್ಜಿದಾರರ ವಿಳಾಸಕ್ಕೆ ಕಾರ್ಡ್ ಪ್ರಿಂಟ್ ಆಗಿ ಅಂಚೆ ಮೂಲಕ ಬರಬೇಕು. ಆದರೆ, ಮೂರು ವರ್ಷವಾದರೂ ಅರ್ಜಿದಾರರಿಗೆ ಕಾರ್ಡ್ ಸಿಕ್ಕಿಲ್ಲ.
ಚಿಕ್ಕಮ್ಮನ ಮನೆಗೆ ಬಂದು ಕರೊನಾ ಲಸಿಕೆ ಕೊಟ್ಟ ಮಗಳು; ಸ್ವಲ್ಪ ಹೊತ್ತಲ್ಲಿ ಮನೆಯಲ್ಲಿದ್ದ ಚಿನ್ನವೆಲ್ಲ ಮಾಯ!

VIDEO| ವಾರ್​ಗಿತ್ತಿಯರ ವಾರ್​! ಆಸ್ತಿಗಾಗಿ ನಡು ರಸ್ತೆಯಲ್ಲೇ ಜಡೆ ಜಡೆ ಹಿಡಿದು ಹೊಡೆದಾಡಿಕೊಂಡ ನಾರಿಯರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 − 1 =
Remember me
