ಬೆಂಗಳೂರು:ರಾಜ್ಯ ಸರ್ಕಾರ ತನ್ನ ಸಂಪುಟದ ಎಲ್ಲ ಸಚಿವರಿಗೆ ಹೊಚ್ಚ ಹೊಸ ಕಾರುಗಳನ್ನು ಬುಕ್ ಮಾಡಿದ್ದು, ಈಗಾಗಲೇ ಕೆಲವು ಸಚಿವರು ಅವುಗಳನ್ನು ಪಡೆದು ಬಳಸಲಾರಂಭಿಸಿದ್ದಾರೆ. ಈ ಕುರಿತು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿ ಸಂತಸ ಕೂಡ ಹಂಚಿಕೊಂಡಿದ್ದಾರೆ.
ಆದರೆ ಸರ್ಕಾರದ ಈ ಕ್ರಮದ ವಿರುದ್ಧ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬರವಿದೆ, ಅನುದಾನಕ್ಕೂ ಕೊರತೆ ಇದೆ ಎಂದಿರುವ ಸಾರ್ವಜನಿಕರು ಇಂಥ ಸಂದರ್ಭದಲ್ಲಿ ಇವೆಲ್ಲ ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.
ರಾಜ್ಯದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್​.ಎಸ್. ಬೋಸರಾಜು ತಮಗೆ ಸರ್ಕಾರದಿಂದ ಹೊಚ್ಚಹೊಸ ಟೊಯೊಟ ಇನ್ನೋವಾ ಹೈಕ್ರಾಸ್ ಕಾರು ಲಭಿಸಿರುವ ಕುರಿತು ಎಕ್ಸೈಟಿಂಗ್ ನ್ಯೂಸ್ ಎಂಬುದಾಗಿ ಹೇಳಿ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದಕ್ಕೆ ಬಹಳಷ್ಟು ಸಾವರ್ಜನಿಕರು ನಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದು, ಸಚಿವರಿಗೆ ಹೊಸ ಕಾರು ನೀಡಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೇ ಹಣವನ್ನು ರಸ್ತೆ ಗುಂಡಿ ಮುಚ್ಚಲು ಬಳಸಬಹುದಿತ್ತು, ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದೆಲ್ಲ ಜನರು ಕಮೆಂಟ್​ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Exciting news! Welcomed the Government of Karnataka's new addition, the eco-conscious Toyota Innova HyCross.
As part of our commitment to sustainability, this vehicle features cutting-edge Self-charging Hybrid Electric Tech, increasing fuel efficiency. Together, we're taking…pic.twitter.com/uNe8aEnuxv
— N.S Boseraju (@NsBoseraju)October 10, 2023

ನಿಧನದ ವಿಚಾರದಲ್ಲಿರಲಿ ನಿಧಾನ: ಸುಳ್ಳೇ ಏಕೆ ಸಾಯಿಸುವರೋ!; ಇನ್ನಿಲ್ಲ ಎಂಬ ಸುದ್ದಿ ಬಂದಾಗ ಇನ್ನೇನು ಮಾಡಬೇಕು?

ಪೊದೆಯಲ್ಲಿ ಯುವ ಜೋಡಿ, ಫೋಟೋ ವೈರಲ್​: ಅಷ್ಟಕ್ಕೂ ಅಲ್ಲಿ ಆಗಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − thirteen =
Remember me
