ಬೆಂಗಳೂರು:ದೇಶ-ವಿದೇಶದಲ್ಲೂ ಜನಜನಿತವಾಗಿರುವ ಕಾಫಿ ಡೇ ಸಂಸ್ಥೆಯ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಹೆಗ್ಡೆ ಅವರ ಅಗಲಿಕೆ ಬಳಿಕ, ಇದೀಗ ಆ ಸಂಸ್ಥೆಗೆ ಹೊಸ ಸಿಇಒ ನೇಮಕವಾಗಿದ್ದಾರೆ. ಈ ಮೂಲಕ ಕಾಫಿ ಡೇ ಎಂಟರ್​ಪ್ರೈಸಸ್​ ಚುಕ್ಕಾಣಿಯನ್ನು ಮಹಿಳೆಯೊಬ್ಬರು ಹಿಡಿದಿದ್ದಾರೆ.
ಹೌದು.. ‘ಕಾಫಿ ಡೇ ಎಂಟರ್​ಪ್ರೈಸಸ್​ ಲಿಮಿಟೆಡ್​’ನ ನೂತನ ಸಿಇಒ ಆಗಿ ಮಾಳವಿಕಾ ಹೆಗ್ಡೆ ನೇಮಕವಾಗಿದ್ದಾರೆ. ಅಂದಹಾಗೆ ಈ ಮಾಳವಿಕಾ ಬೇರೆ ಯಾರೂ ಅಲ್ಲ.. ಸಿದ್ಧಾರ್ಥ ಹೆಗ್ಡೆ ಅವರ ಪತ್ನಿ, ಅರ್ಥಾತ್ ಮಾಜಿ ಮುಖ್ಯಮಂತ್ರಿ ಎಸ್​.ಎಂ. ಕೃಷ್ಣ ಅವರ ಪುತ್ರಿ. ಕಂಪನಿಯ ನಿರ್ದೇಶಕ ಮಂಡಳಿಯು ಸಿ.ಎಚ್​.ವಸುಂಧರಾ ದೇವಿ, ಗಿರಿ ದೇವನೂರ್, ಮೋಹನ್ ರಾಘವೇಂದ್ರ ಕೊಂಡಿ ಅವರನ್ನು ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಿಸಿದೆ.
ಸಿದ್ಧಾರ್ಥ ಅವರು 2019ರ ಆಗಸ್ಟ್​ನಲ್ಲಿ ಮಂಗಳೂರಿನಲ್ಲಿ ನೇತ್ರಾವತಿ ಸೇತುವೆ ಮೇಲೆ ಇದ್ದಕ್ಕಿದ್ದಂತೆ ನಾಪತ್ತೆ ಆಗಿದ್ದು, ಬಳಿಕ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಸಿದ್ಧಾರ್ಥ ಅಗಲಿಕೆಯ ಸಮಯದಲ್ಲಿ ಕಂಪನಿ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ದೊಡ್ಡ ಮಟ್ಟದ ಸಾಲವೂ ಇದೆ. (ಏಜೆನ್ಸೀಸ್​)
ಚಳಿಗಾಲದ ಅಧಿವೇಶನ: ಮಧ್ಯೆ ಗ್ಲಾಸು.. ಸದನದಲ್ಲೇ ‘ಗಡಿ ಮೀರಿದ’ ಶಾಸಕರು; ಇಲ್ಲಿವೆ ನೋಡಿ ಫೋಟೋಗಳು!

VIDEO| ಪೊಲೀಸರು ನನ್ನ ಚಪ್ಪಲಿ ಕದ್ದಿದ್ದಾರೆ! ಹೋರಾಟ ನಿರತ ರೈತ ಮಹಿಳೆಯ ಆರೋಪ ಹೇಗಿದೆ ನೋಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + fifteen =
Remember me
