ಬೆಂಗಳೂರು:ರಾಜ್ಯದಲ್ಲಿ ಕೋವಿಡ್​ ಪೀಡಿತರ ಸಂಖ್ಯೆ ಇಳಿಮುಖವಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಕಳೆದ ಐದಾರು ದಿನಗಳಿಂದ ನಿತ್ಯವೂ 9 ಸಾವಿರಕ್ಕೂ ಅಧಿಕ ಹೊಸ ಸೋಂಕಿತರು ಪತ್ತೆಯಾಗುತ್ತಲೇ ಇದ್ದಾರೆ.
ಭಾನುವಾರ ರಾಜ್ಯದಲ್ಲಿ 9,894 ಹೊಸ ಕೇಸ್​ಗಳು ವರದಿಯಾಗಿದ್ದು, ಒಟ್ಟಾರೆ ಕರೊನಾ ಸೋಂಕಿತರ ಸಂಖ್ಯೆ 4,59,445ಕ್ಕೆ ಏರಿಕೆಯಾಗಿದೆ. ಕೋವಿಡ್​ನಿಂದ 104 ಜನರು ಮೃತಪಟ್ಟಿದ್ದು, ಒಟ್ಟು ಕೋವಿಡ್ ಸಾವಿನ ಸಂಖ್ಯೆ 7,265ಕ್ಕೆ ತಲುಪಿದೆ.
ಇದನ್ನೂ ಓದಿ;ದೇಶೀಯ ಕರೊನಾ ಲಸಿಕೆ ಕ್ಷಮತೆ ಸಾಬೀತು; ಪ್ರಾಣಿಗಳಲ್ಲಿ ಪ್ರಯೋಗ ಯಶಸ್ವಿ
ಕೊಂಚ ಸಮಾಧಾನದ ಸಂಗತಿ ಎಂದರೆ, ಕೋವಿಡ್​ನಿಂದ ಗುಣವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗುತ್ತಿರುವವರ ಸಂಖ್ಯೆ ಕೂಡ ಹೆಚ್ಚುತ್ತಿದ್ದು, ಭಾನುವಾರ 8,402 ಜನರು ಚೇತರಿಕೆ ಕಂಡಿದ್ದಾರೆ. ಒಟ್ಟು ಈವರೆಗೆ ಗುಣವಾದವರ ಸಂಖ್ಯೆ 3,52,958 ಆಗಿದೆ.
ಗಂಭೀರಾವಸ್ಥೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಖ್ಯೆಯೂ ಏರಿಕೆಯಾಗಿ 807ಕ್ಕೆ ತಲುಪಿದೆ. ಸಕ್ರಿಯ ಕೇಸ್​ಗಳ ಸಂಖ್ಯೆ 99,203ಕ್ಕೆ ಏರಿಕೆಯಾಗಿದೆ.ಇನ್ನು, ರಾಜಧಾನಿಯಲ್ಲಿ 3,479 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 1,70,662ಕ್ಕೆ ತಲುಪಿದೆ. ಭಾನುವಾರ 3,270 ಜನರು ಚೇತರಿಕೆ ಕಂಡಿದ್ದು, ಈವರೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದವರು 1,27,132 ಮಂದಿ. ಭಾನುವಾರದವರೆಗೆ ಸಕ್ರಿಯ ಕೇಸ್​ಗಳ ಸಂಖ್ಯೆ 41,093 ಆಗಿದೆ.
ಇದನ್ನೂ ಓದಿ;ಕರೊನಾ ಲಸಿಕೆ ಬಿಡುಗಡೆ ದಿನ ನಿಗದಿಯಾಗಿಲ್ಲ; ಹಾಗಿದ್ದರೆ ಸಿಗೋದು ಯಾವಾಗ? ಕೇಂದ್ರ ಆರೋಗ್ಯ ಸಚಿವರು ಹೇಳಿದಿದ್ದು?
ರಾಜಧಾನಿಯಲ್ಲಿ ಕೋವಿಡ್​ನಿಂದ ಮೃತಪಟ್ಟವರ ಸಂಖ್ಯೆ 45 ಆಗಿದ್ದು, ಈವರೆಗೆ ಒಟ್ಟು 2,436 ಮಂದಿ ಸಾವಿಗೀಡಾಗಿದ್ದಾರೆ. ಮೈಸೂರಿನಲ್ಲಿ 15, ಬಳ್ಳಾರಿಯಲ್ಲಿ 8 ಜನ ಕೋವಿಡ್​ಗೆ ಬಲಿಯಾಗಿದ್ದಾರೆ.

ಈ ಫೋಟೋದಲ್ಲಿ ಹತ್ತು ವ್ಯತ್ಯಾಸ ಗುರುತಿಸಬಲ್ಲಿರಾ? ಅಮೆರಿಕ ಗುಪ್ತಚರ ಸಂಸ್ಥೆ ಹಾಕಿದ ಸವಾಲಿದು….!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − one =
Remember me
