ಬೆಂಗಳೂರು:ರಾಜ್ಯದಲ್ಲಿ ಇಂದು ಹೊಸ ಕರೊನಾ ಪ್ರಕರಣಗಳ ಸಂಖ್ಯೆ 6 ಸಾವಿರದ ಗಡಿಗೆ ಬಂದು ನಿಂತಿದೆ. ನಿನ್ನೆ 7,178 ಹೊಸ ಪ್ರಕರಣಗಳು ಪತ್ತೆಯಾಗಿ ದಾಖಲೆ ಸೃಷ್ಟಿಸಿತ್ತು. ಇಂದು 5,985 ಜನರು ಸೋಂಕಿಗೆ ಒಳಗಾಗಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 1,78,087ಕ್ಕೆ ತಲುಪಿದೆ. ಜತೆಗೆ, ಸಕ್ರಿಯ ಪ್ರಕರಣಗಳ ಸಂಖ್ಯೆ 80,973ಕ್ಕೆ ಏರಿದೆ. ಇಂದು ಸಾವಿನ ಸಂಖ್ಯೆ ಶತಕ ದಾಟಿದೆ. 107 ಜನರ ಮೃತಪಟ್ಟಿದ್ದು, ಸಾವಿನ ಸಂಖ್ಯೆ 3,198ಕ್ಕೆ ಹೆಚ್ಚಳವಾಗಿದೆ. ಗಂಭೀರ ಸ್ಥಿತಿಯಲ್ಲಿದ್ದು ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 678 ಆಗಿದೆ. ಇಂದು 4,670 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಚೇತರಿಕೆ ಕಂಡವರು 93,908 ಮಂದಿ.
ಇದನ್ನೂ ಓದಿ;ರಾಜ್ಯದಲ್ಲಿ ಹೊಸ ದಾಖಲೆ ಬರೆದ ಕರೊನಾ ಪ್ರಕರಣಗಳು
ನಿನ್ನೆಗೆ ಹೋಲಿಸಿದಲ್ಲಿ ಬೆಂಗಳೂರಿನಲ್ಲಿ ಹೊಸ ಸೋಂಕಿನ ಪ್ರಮಾಣ ಕೊಂಚ ಕಡಿಮೆಯಾಗಿದೆ. ನಿನ್ನೆ 2,665 ಜನರಲ್ಲಿ ಕೋವಿಡ್​ ಕಾಣಿಸಿಕೊಂಡಿತ್ತು. ಇಂದು 1,948 ಮಂದಿ ಹೊಸದಾಗಿ ಸೋಂಕಿಗೆ ಒಳಗಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 74,185 ಆಗಿದೆ. ಆಸ್ಪತ್ರೆಯಿಂದ ಬಿಡುಗಡೆಯಾದವರ ಇಂದಿನ ಸಂಖ್ಯೆ 1,837. ಒಟ್ಟಾರೆ ಗುಣವಾದವರು 39,129 ಜನರು. ಇಂದು 22 ಜನರು ಮೃತಪಟ್ಟಿದ್ದು ಒಟ್ಟಾರೆ ಸಾವಿನ ಸಂಖ್ಯೆ 1,240ಕ್ಕೆ ಏರಿದೆ.
ಜಿಲ್ಲೆಗಳಲ್ಲಿ ಸೋಂಕಿನ ಸಂಖ್ಯೆ ಏರುತ್ತಿದ್ದು 17 ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಸೋಂಕಿತರು ಕಂಡುಬಂದಿದ್ದಾರೆ. ರಾಜಧಾನಿ ಹೊರತುಪಡಿಸಿ ಮೈಸೂರಿನಲ್ಲಿ ಅತಿ ಹೆಚ್ಚು 455 ಜನರು ಕೋವಿಡ್​ಗೆ ಒಳಗಾಗಿದ್ದಾರೆ.
ಕೋವಿಡ್​ ರೋಗಿಗಳ ಜಿಲ್ಲಾವಾರು ವಿವರ

ಜೈಲುಪಾಲಾಗಿದ್ದರು ಇನ್ಫೋಸಿಸ್​ ನಾರಾಯಣ ಮೂರ್ತಿ; ವಿದೇಶದಲ್ಲಿ 5 ದಿನ ಅನ್ನಾಹಾರವಿಲ್ಲದೇ ಕಳೆದಿದ್ದರು….!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 15 =
Remember me
