ಬೆಂಗಳೂರು:ರಾಜ್ಯದಲ್ಲಿ ಹೊಸ ಕರೊನಾ ಪ್ರಕರಣಗಳ ನಾಗಾಲೋಟಕ್ಕೆ ಕೊಂಚ ಕಡಿವಾಣ ಬಿದ್ದಂತಾಗಿದೆ. ಪ್ರತಿದಿನವೂ ನಾಲ್ಕು ಸಾವಿರದ ಗಡಿ ದಾಟುತ್ತಿದ್ದ ಹೊಸ ಕೇಸ್​ಗಳ ಸಂಖ್ಯೆ ಕಳೆದೆರಡು ದಿನಗಳಿಂದ ಮೂರು ಸಾವಿರದ ಏಳು ನೂರರ ಗಡಿಯಲ್ಲಿದೆ.
ಸೋಮವಾರ ಸಂಜೆಯವರೆಗೆ 3,648 ಜನರಲ್ಲಿ ಸೋಂಕು ಕಂಡು ಬಂದಿದ್ದರೆ, ಮಂಗಳವಾರ ಸಂಜೆವರೆಗೆ ಈ ಪ್ರಕರಣಗಳ ಸಂಖ್ಯೆ 3,649 ಆಗಿದೆ. ನಿನ್ನೆಗಿಂತ ಒಂದೇ ಪ್ರಕರಣ ಜಾಸ್ತಿ ಆಗಿದೆ ಎಂಬುದು ಅಂಕಿ-ಸಂಖ್ಯೆಗಳಿಗಿಂತ ಗೊತ್ತಾಗುತ್ತದೆ.
ಒಟ್ಟಾರೆ ಕೋವಿಡ್​ ರೋಗಿಗಳ ಪ್ರಮಾಣ ನಿನ್ನೆಯಿದ್ದ 67,420 ರಿಂದ 71,069ಕ್ಕೆ ಏರಿದೆ. ಸದ್ಯ ಸಕ್ರಿಯ ರೋಗಿಗಳ ಸಂಖ್ಯೆ 45,865 ಆಗಿದೆ. ನಿನ್ನೆಗೆ ಹೋಲಿಸಿದರೆ ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ. ನಿನ್ನೆ 72 ಆಗಿದ್ದ ಮರಣ ಪ್ರಮಾಣ ಇಂದು 61 ಆಗಿದೆ. ಒಟ್ಟು ಸಾವಿನ ಸಂಖ್ಯೆ 1,464ಕ್ಕೆ ತಲುಪಿದೆ. ಮರಣ ಪ್ರಮಾಣ ಶೇ.2.06 ಆಗಿದೆ. ಚೇತರಿಕೆಯ ಶೇಕಡಾವಾರು 35.82ಕ್ಕೆ ಏರಿದೆ.
ಇದನ್ನೂ ಓದಿ;ಬೆಂಗಳೂರಿನಲ್ಲಿ ಇಳಿಮುಖವಾದ ಕೋವಿಡ್​ ಕೇಸ್​; ಮರಣ ಪ್ರಮಾಣವೂ ಕುಸಿತ
ಕಳೆದ 24 ತಾಸುಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗುವವರ ಸಂಖ್ಯೆ ಹೆಚ್ಚಾಗಿರುವುದು ಸಮಾಧಾನದ ಸಂಗತಿಯಾಗಿದೆ. 1,664 ಮಂದಿ ಆಸ್ಪತ್ರೆಯಿಮದ ಡಿಸ್ಚಾರ್ಜ್​ ಆಗಿದ್ದು, ನಿನ್ನೆಗೆ ಹೋಲಿಸಿದಲ್ಲಿ ಎರಡು ಪಟ್ಟಿಗಿಂತಲೂ ಹೆಚ್ಚಾಗಿದೆ. ನಿನ್ನೆ ಇವರ ಸಂಖ್ಯೆ 730 ಆಗಿತ್ತು. ಈವರೆಗೆ ರಾಜ್ಯದಲ್ಲಿ ಒಟ್ಟು ಚೇತರಿಕೆ ಕಂಡವರು 25,459 ಮಂದಿ.
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ನಿನ್ನೆಗೆ ಹೋಲಿಸಿದಲ್ಲಿ ಕೊಂಚ ಹೆಚ್ಚಾಗಿದೆ. ಅಂದರೆ, ನಿನ್ನೆ 1,452 ಇದ್ದದ್ದು ಇಂದು 1,714 ಆಗಿದೆ. ಒಟ್ಟು ಸೋಂಕಿತರ ಸಂಖ್ಯೆ 34,943ಕ್ಕೆ ತಲುಪಿದಂತಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳು 27,288.
ಇದನ್ನೂ ಓದಿ;ಮೂರು ತಿಂಗಳ ಬಳಿಕ ಸಾವಿರಕ್ಕಿಂತಲೂ ಕೆಳಕ್ಕಿಳಿದ ಕರೊನಾ ಕೇಸ್​; ಅಚ್ಚರಿಯ ಸುಧಾರಣೆ ಎಲ್ಲಿ?
ಆದರೆ, ಸಾವಿನ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗುತ್ತಿದೆ. ನಿನ್ನೆಯ ಪ್ರಮಾಣ 31 ಆಗಿದ್ದರೆ, ಇಂದು ಇನ್ನೂ ಕಡಿಮೆಯಾಗಿ 22ಕ್ಕೆ ಇಳಿದಿದೆ. ಬೆಂಗಳೂರಿನಲ್ಲಿ ಈವರೆಗೆ ಸಾವಿಗೀಡಾದವರು 6720 ಮಂದಿ. ಸಾವಿನ ಶೇಕಡಾವಾರು 2.06 ಆಗಿದೆ. ಕಳೆದ 24 ತಾಸಿನಲ್ಲಿ ಒಟ್ಟು 43,904 ಜನರನ್ನು ಪರೀಕ್ಷೇ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು ನಡೆಸಿದ ಕರೊನಾ ಪರೀಕ್ಷೆಗಳ ಸಂಖ್ಯೆ 10,64,734 ಆಗಿದೆ.
ಜಿಲ್ಲಾವಾರು ಕೋವಿಡ್​ ಅಂಕಿ -ಸಂಖ್ಯೆ

ಈ ರಾಸಾಯನಿಕವಿರುವ ಹ್ಯಾಂಡ್​ ಸ್ಯಾನಿಟೈಸರ್​ ಬಳಸದಿರಿ…! ಎಚ್ಚರ ಜೀವಕ್ಕೆ ಅಪಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
