ಬೆಂಗಳೂರು:ರಾಜ್ಯದಲ್ಲಿ ಚೇತರಿಕೆಯ ಗಾಳಿ ಬೀಸುತ್ತಿದೆ. ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ, ಕೋವಿಡ್​ನಿಂದ ಚೇತರಿಕೆ ಕಾಣುತ್ತಿರುವವರ ಸಂಖ್ಯೆಯೂ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದೇ ಮೊದಲ ಬಾರಿಗೆ ಕಳೆದ 24 ತಾಸುಗಳಲ್ಲಿ 1,142 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.
ಆದರೆ, ಹೊಸ ಸೋಂಕಿತರ ಸಂಖ್ಯೆ ಮತ್ತೆ ಎರಡು ಸಾವಿರದ ಗಡಿ ದಾಟಿದೆ. 2,496 ಜನರಲ್ಲಿ ಕೋವಿಡ್​ ಕಂಡು ಬಂದ್ದು, ಒಟ್ಟಾರೆ ರೋಗಿಗಳ ಸಂಖ್ಯೆ 44,077 ಆಗಿದೆ. ಇವರಲ್ಲಿ ಸಕ್ರಿಯ ಪ್ರಕರರಣಗಳ ಸಂಖ್ಯೆ 25,839 ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರ (ಜು.14) ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ;ಕೋವಿಡ್​ ರೋಗಿಗಳಿಗೆ ಬೆಂಗಳೂರಿನ ಬಯೋಕಾನ್​ನಿಂದಲೂ ಜೀವರಕ್ಷಕ ಲಸಿಕೆ
ಸಕಳೆದ 24 ತಾಸುಗಳಲ್ಲಿ ರಾಜ್ಯದಲ್ಲಿ 87 ಜನರು ಕೋವಿಡ್​ನಿಂದಾಗಿ ಮೃತಪಟ್ಟಿದ್ದು, ನಿನ್ನೆ ಇವರ ಸಂಖ್ಯೆ 73 ಆಗಿತ್ತು. ಈವರೆಗೆ ಮೃತಪಟ್ಟವರ ಸಂಖ್ಯೆ 842ಕ್ಕೆ ತಲುಪಿದೆ.
ಇನ್ನು, ಬೆಂಗಳೂರಿನಲ್ಲಿ ಕಳೆದ 24 ತಾಸುಗಳಲ್ಲಿ ಹೊಸ ಪ್ರಕರಣಗಳು 1,267 ನಿನ್ನೆ ಈ ಸಂಖ್ಯೆ 1,315 ಆಗಿತ್ತು. ಒಟ್ಟಾರೆ ಕೋವಿಡ್​ ರೋಗಿಗಳು 20,969 ಆಗಿದೆ. ಈ ಪೈಕಿ ಸಕ್ರಿಯವಾಗಿರುವ ಪ್ರಕರಣಗಳು 15,599 ಆಗಿವೆ. ರಾಜಧಾನಿಯಲ್ಲಿ ಇಂದು 56 ಜನರು ಸಾವಿಗೀಡಾಗಿದ್ದು, ಒಟ್ಟು 377 ಜನರು ಮೃತಪಟ್ಟಿದ್ದಾರೆ.
ವಿವಿಧ ಜಿಲ್ಲೆಗಳಲ್ಲಿ ಕೋವಿಡ್​ ಅಂಕಿ-ಅಂಶ ಇಲ್ಲಿದೆ……..

ಆಗಸ್ಟ್​ 15ಕ್ಕೆ ಬಳಕೆಗೆ ದೊರೆಯಲಿದೆ ಕರೊನಾ ಲಸಿಕೆ; ಆದರೆ ಭಾರತದ್ದಲ್ಲ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + eighteen =
Remember me
