ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನಲೆಯಲ್ಲಿ ಎಚ್ಚೆತ್ತಿರುವ ಪೊಲೀಸ್ ಇಲಾಖೆ, ಪೊಲೀಸರ ಮುಂಜಾಗೃತೆಯ ಬಗ್ಗೆ ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ರಿಂದ ಮಾರ್ಗಸೂಚಿ ಬಿಡುಗಡೆಯಾಗಿವೆ.
ಹೊಸ ಮಾರ್ಗಸೂಚಿಗಳು ಇಂತಿವೆ
* ಪೊಲೀಸ್ ಸಿಬ್ಬಂದಿಗಳ ಯೋಗಕ್ಷೇಮದ ಕುರಿತು ಎಲ್ಲ ಎಸ್​ಪಿಗಳು ಅಗತ್ಯ ಕ್ರಮ ಕೈಗೊಳ್ಳತಕ್ಕದ್ದು.
* 45 ವರ್ಷ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿ ಮತ್ತವರ ಕುಟುಂಬಸ್ಥರಿಗೆ 2 ಲಸಿಕೆ ಕಡ್ಡಾಯ.
* ಪೊಲೀಸ್ ಸಿಬ್ಬಂದಿ ನಿಯಮಿತವಾಗಿ ಕೋವಿಡ್ ಪರೀಕ್ಷೆಗೆ ಒಳಪಡತಕ್ಕದ್ದು
* ಕೋವಿಡ್ ಮತ್ತಿತರ ರೋಗಗಳಿಂದ ಬಳಲುತ್ತಿರುವವರು ಕಚೇರಿ ಕರ್ತವ್ಯಕ್ಕೆ ಮಾತ್ರ ನೇಮಿಸಬೇಕು
* ಪೊಲೀಸ್ ಸಿಬ್ಬಂದಿಗಳು 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕು.
* ಪೊಲೀಸ್ ಠಾಣೆಗಳ ಹೊರ ಮತ್ತು ಒಳ ಆವರಣ ಸ್ಯಾನಿಟೈಸ್ ಮಾಡತಕ್ಕದ್ದು.
* ಕರ್ತವ್ಯದ ಸಮಯದಲ್ಲಿ ಮಾಸ್ಕ್ ಫೇಸ್ ಶೀಲ್ಡ್ ಕಡ್ಡಾಯ.
* ಪೊಲೀಸ್ ಸಿಬ್ಬಂದಿ ಅವರ ಕುಟುಂಬಸ್ಥರ ನೆರವಿಗೆ ಸಮನ್ವಯಾಧಿಕಾರಿ ನೇಮಿಸತಕ್ಕದ್ದು.
* ಸಾರ್ವಜನಿಕರ ಭೇಟಿಗೆ ಪ್ರತ್ಯೇಕ ವ್ಯವಸ್ಥೆ ಮಾಡತಕ್ಕದ್ದು.
* ಪೊಲೀಸ್ ಸಿಬ್ಬಂದಿಗೆ ಚಿಕಿತ್ಸೆ ನಿರಾಕರಿಸುವ ಆರೋಗ್ಯ ಭಾಗ್ಯದಡಿ ನೊಂದಾಯಿತ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳತಕ್ಕದ್ದು.
* ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ವಾಹನ ಸ್ಯಾನಿಟೈಸ್ ಮಾಡತಕ್ಕದ್ದು.
* ಅಪರಾಧಿಗಳ ತನಿಖೆ, ದಸ್ತಗಿರಿಗೆ ಈ ಹಿಂದೆ ಅನುಸರಿಸಿದ ಕ್ರಮ ಮುಂದುವರೆಸಬೇಕು.
ಕರೊನಾಕ್ಕೆ ಸ್ಯಾಂಡಲ್​ವುಡ್ ನಟ, ನಿರ್ಮಾಪಕ ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + one =
Remember me
