ಬೆಂಗಳೂರು:ಲಾಕ್​ಡೌನ್ ಸಡಿಲಿಕೆ ಬಳಿಕ ಹೊರ ರಾಜ್ಯದಿಂದ ಆಗಮಿಸುವವರ ಸಂಖ್ಯೆ ಹೆಚ್ಚಾಗಿದ್ದು, ಅವರನ್ನು ಕ್ವಾರಂಟೈನ್​ಗೆ ಒಳಪಡಿಸಲೇಬೇಕಾದ ಅನಿವಾರ್ಯ ಸ್ಥಿತಿ ಇದೆ. ಇಂಥ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ವಾರಂಟೈನ್ ವ್ಯವಸ್ಥೆ ಬಲಗೊಳಿಸುವ ಪ್ರಯತ್ನ ಆರಂಭವಾಗಿದ್ದು, ಕ್ವಾರಂಟೈನ್ ಕೇಂದ್ರದಲ್ಲಿರುವವರಿಗೆ ಮನೆಯವರೇ ಹಾಸಿಗೆೆ, ಹೊದಿಕೆ, ಮಂಚದ ವ್ಯವಸ್ಥೆ ಮಾಡಬೇಕು ಮತ್ತು ಗ್ರಾಮಸ್ಥರೇ ಸ್ವಯಂಸೇವಕರಂತೆ ಕಾರ್ಯನಿರ್ವಹಿಸಬೇಕಾಗುತ್ತದೆ.
ಕೋವಿಡ್ 19 ತಡೆ ದೃಷ್ಟಿಯಿಂದ ಗ್ರಾಮಪಂಚಾಯಿತಿಗಳ ಪಾತ್ರ ಮತ್ತು ಜವಾಬ್ದಾರಿ ಸಂಬಂಧ ಗ್ರಾಮೀಣಾಭಿವೃದ್ಧಿ ಇಲಾಖೆ ಮಾರ್ಗಸೂಚಿ ಪ್ರಕಟಿಸಿ, ಅದನ್ನು ಅನುಸರಿಸಬೇಕೆಂದು ಹೇಳಿದೆ.
ಕರೊನಾ ಲಾಕ್​ಡೌನ್ ಆರಂಭದಲ್ಲಿ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್​ಗೆ ಆದ್ಯತೆ ನೀಡಲಾಗುತ್ತಿತ್ತು. ಆದರೆ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳು ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಕ್ವಾರಂಟೈನ್ ಕೇಂದ್ರಗಳಾಗಿ ಬಳಕೆ ಮಾಡಿಕೊಂಡಿದ್ದ ಕಟ್ಟಡಗಳನ್ನು ಅವುಗಳ ಮೂಲ ಚಟುವಟಿಕೆಗೆ ಬಿಟ್ಟುಕೊಡಬೇಕಾಗಿದೆ. ಜತೆಗೆ ಹೊರ ರಾಜ್ಯದಿಂದ ಆಗಮಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಕಾರಣದಿಂದ ಗ್ರಾಮೀಣ ಭಾಗದವರಿಗೆ ಅಲ್ಲೇ ವ್ಯವಸ್ಥೆ ಮಾಡಿಸಲಾಗುತ್ತಿದೆ.
ಇದನ್ನೂ ಓದಿ:ಮನೆಗೆ ತಲುಪಿದ ಚಿರು ಪಾರ್ಥಿವ ಶರೀರ; ಕುಟುಂಬಕ್ಕೆ ಧೈರ್ಯ ತುಂಬುತ್ತಿದ್ದಾರೆ ನಟ ದರ್ಶನ್​
ಆರೋಗ್ಯ ಇಲಾಖೆ ಹೊರಡಿಸಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್​ಒಪಿ) ಪ್ರಕಾರ ಸಾಂಸ್ಥಿಕ ದಿಗ್ಬಂಧನ ಕೇಂದ್ರಗಳನ್ನು ವಸತಿ ಶಾಲೆ, ವಿದ್ಯಾರ್ಥಿ ನಿಲಯ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ತೆರೆಯಬೇಕೆಂದು ಹೇಳಲಾಗಿದೆ. ಅಲ್ಲಿ ಗಾಳಿ, ಬೆಳಕು, ನೀರು, ಶೌಚಾಲಯದ ಸ್ಥಿತಿ ಉತ್ತಮವಾಗಿರಬೇಕು. ಸಾಧ್ಯವಾದಷ್ಟು ಪ್ರತ್ಯೇಕ ಕೋಣೆ ನೀಡಬೇಕು. ದಿಗ್ಬಂಧನದ ಅವಧಿ ಮಾರ್ಗಸೂಚಿಯಂತೆಯೇ ಇರಬೇಕೆಂದು ಹೇಳಲಾಗಿದೆ.
ಪ್ರತಿ ದಿಗ್ಬಂಧನ ಕೇಂದ್ರವು ಉಸ್ತುವಾರಿ ಅಧಿಕಾರಿಯನ್ನು ಹೊಂದಿರಬೇಕು, ಅವರು ಆ ಗ್ರಾಪಂ ಪ್ರದೇಶದಲ್ಲೇ ವಾಸಿಸುವವರಾಗಿರಬೇಕೆಂದು ತಿಳಿಸಲಾಗಿದೆ. ರಾತ್ರಿ ಈ ಕೇಂದ್ರದಲ್ಲಿ 10 ಜನರಿಗೆ ಒಬ್ಬರಂತೆ ಸ್ವಯಂಸೇವಕರು ಕಾರ್ಯನಿರ್ವಹಿಸಬೇಕು. ಇಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನಿರ್ವಹಣೆಯನ್ನು ಕ್ರಮಬದ್ಧವಾಗಿ ವಿಲೇವಾರಿ ಮಾಡಬೇಕಾಗಿದ್ದು, ಈ ಸಂಬಂಧ ಆರೋಗ್ಯ ಇಲಾಖೆಯ ಹೊರಡಿಸಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ ಪ್ರಕಾರ ಕ್ರಮಕೈಗೊಳ್ಳಬೇಕಾಗುತ್ತದೆ.
ಮೇಲ್ವಿಚಾರಣೆ: ಕ್ವಾರಂಟೈನ್ ಕೇಂದ್ರದ ನಿರ್ವಹಣೆ ವಿಚಾರದಲ್ಲಿ ಗ್ರಾಮ ಪಂಚಾಯಿತಿ ಯಾವ ರೀತಿ ಮೇಲ್ವಿಚಾರಣೆ ಮಾಡಬೇಕೆಂದು 13 ಅಂಶಗಳನ್ನು ನೀಡಲಾಗಿದೆ. ಗ್ರಾಮಸ್ಥರ ಮಾಹಿತಿ ಸಂಗ್ರಹ, ಕ್ವಾರಂಟೈನ್ ಕೇಂದ್ರದಲ್ಲಿ ಅನುಸರಿಸಬೇಕಾದ ಕ್ರಮ, ದಿಗ್ಬಂಧನಕ್ಕೊಳಗಾದ ವ್ಯಕ್ತಿಯ ನೆರೆಹೊರೆ ಮನೆಯವರಿಗೆ ನೋಟಿಸ್ ನೀಡಿ ಎಚ್ಚರಿಸುವುದು, ಪ್ರತಿ ದಿನ ದೂರವಾಣಿ ಮಾಡಿ ಸ್ಥಿತಿಗತಿ ವಿಚಾರಣೆ ಮಾಡಬೇಕಾಗುತ್ತದೆ.
ಇದನ್ನೂ ಓದಿ:ಅಳಿಯನ ಸಾವಿನ ಬೆನ್ನಲ್ಲೇ ಫೇಸ್​ಬುಕ್​ ಕವರ್​, ಪ್ರೊಫೈಲ್​ಗೆ ಕಪ್ಪು ಫೋಟೋ ಅಪ್ಲೋಡ್ ಮಾಡಿದ ಅರ್ಜುನ್​ ಸರ್ಜಾ
ಕ್ವಾರಂಟೈನ್ ಕೇಂದ್ರಗಳಲ್ಲಿರುವ 20-40 ಮನೆಗಳಿಗೆ ಒಬ್ಬರಂತೆ ಸ್ವಯಂಸೇವಕರನ್ನು ಗುರುತಿಸುವ ಜವಾಬ್ದಾರಿ ಗ್ರಾಮ ಪಂಚಾಯಿತಿಯದ್ದಾಗಿದೆ. ಅವರು ತಮ್ಮ ವ್ಯಾಪ್ತಿಗೆ ಸಂಬಂಧಿಸಿ ದವರ ಆಹಾರ, ಔಷಧ ಇನ್ನಿತರ ಸೇವೆಗಳು ದೊರೆಯುತ್ತಿವೆಯೇ ಎಂಬುದನ್ನು ಗಮನಿಸಬೇಕು ಅಥವಾ ಕೋರಿಕೆಗಳು ಗ್ರಾಮ ಪಂಚಾಯಿತಿ ಸಹಾಯ ಕೇಂದ್ರದ ಗಮನಕ್ಕೆ ಬಂದಲ್ಲಿ ಸ್ವಯಂಸೇವಕರಿಗೆ ತಿಳಿಸಬೇಕಾಗುತ್ತದೆ. ಸ್ವಯಂ ಸೇವಕನು ಅಂಥಹ ಕೋರಿಕೆಗಳು ಸಂಬಂಧಪಟ್ಟ ವ್ಯಕ್ತಿಗೆ ಸರಬರಾಜು ಆಗುವಂತೆ ಸಂಬಂಧಿಸಿದವರೊಡನೆ ವ್ಯವಹರಿಸುವ ಜವಾಬ್ದಾರಿ ಇರುತ್ತದೆ.
ದುರ್ಬಲ ವರ್ಗಗಳ ವ್ಯಕ್ತಿಗಳಿಂದ ಊಟ, ಔಷಧಿ ಅಥವಾ ಇನ್ಯಾವುದೇ ರೀತಿಯ ನೈಜ ಸಹಾಯ ಕೋರಿ ಸಹಾಯಕ ಕೇಂದ್ರಕ್ಕೆ ಕರೆ ಬಂದರೆ ಅವುಗಳನ್ನು ಸ್ವಯಂಸೇವಕರಿಗೆ ತಿಳಿಸಬಹುದು.
ಹೋಂ ಕ್ವಾರಂಟೈನ್ ಉಸ್ತುವಾರಿ:ಹೋಂ ಕ್ವಾರಂಟೈನ್ ಬಗ್ಗೆ ಗ್ರಾಪಂ ಜವಾಬ್ದಾರಿ ಏನೆಂಬುದನ್ನು ಮಾರ್ಗಸೂಚಿಯಲ್ಲಿ ತಿಳಿಸಿದ್ದು, 19 ಅಂಶಗಳ ಬಗ್ಗೆ ಪಂಚಾಯಿತಿಗಳು ವರದಿ ಮಾಡಬೇಕಾಗುತ್ತದೆ. ಮನೆಯಲ್ಲಿ ದಿಗ್ಬಂಧನಕ್ಕೆ ಒಳಗಾದವರು ನಿಯಮ ಪಾಲಿಸುತ್ತಿದ್ದಾರೆಯೇ? ಆಹಾರ ವ್ಯವಸ್ಥೆ ಆಗಿದೆಯೇ? ನೆರೆ ಹೊರೆಯವರ ಆರೋಗ್ಯ ಸ್ಥಿತಿ, ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡ ಮಾಹಿತಿ ಇತ್ಯಾದಿ ವಿವರವನ್ನು ಸಂಗ್ರಹಿಸಬೇಕಾಗುತ್ತದೆ.
ಸಮೀಕ್ಷೆ ನಡೆಸಲು ಸೂಚನೆ:ಹಿರಿಯ ನಾಗರಿಕರು, ವಿಕಲಚೇತನರು, ಕ್ಯಾನ್ಸರ್, ಹೃದಯ, ಅಸ್ತಮಾ, ಮಧುಮೇಹ, ಮೂತ್ರಪಿಂಡ ಕಾಯಿಲೆಯುಳ್ಳ ರೋಗಿಗಳು, 10 ವರ್ಷ ವಯಸ್ಸಿನ ಮಕ್ಕಳು, ಗರ್ಭಿಣಿ ಅಥವಾ ಹಾಲುಣಿಸುವ ಮಕ್ಕಳು, ಪರಿಶಿಷ್ಠ ಕುಟುಂಬಗಳು, ಕೊಳಗೇರಿ ನಿವಾಸಿಗಳು, ವಲಸೆ ಕಾರ್ವಿುಕ ಶಿಬಿರಗಳ ಬಗ್ಗೆ ಸಮೀಕ್ಷೆ ನಡೆಸಲು ಗ್ರಾಪಂಗಳಿಗೆ ಸೂಚಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
