ಬೆಂಗಳೂರು:ಭಾರತೀಯ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಭಾರತ ಮಾತೆಗೆ ಸಮರ್ಪಣೆ ಎಂಬ ಸ್ಲೋಗನ್ ನೊಂದಿಗೆ ಹಿರಿಯ ಹಾರ್ಮೋನಿಯಂ ವಾದಕ ಪಂಡಿತ್ ರವೀಂದ್ರ ಕಾಟೋಟಿ ಅವರು 75 ರಾಗಗಳ ಅಮೃತಮಾಲಾ (ಸಮಯ ಚಕ್ರ ರಾಗಮಾಲಾ) ಎಂಬ ಹೊಸ ಪ್ರಯತ್ನವೊಂದಕ್ಕೆ ಮುಂದಾಗಿದ್ದಾರೆ. ಮೇ 19 ರಂದು ಸಂಜೆ 6 ಗಂಟೆಗೆ ಚೌಡಯ್ಯ ಸ್ಮಾರಕ ಭವನದಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜನೆಗೊಂಡಿದೆ. ಡಾ. ಶತಾವಧಾನಿ ಆರ್.ಗಣೇಶ್ ಅವರ ಮುನ್ನುಡಿ ಈ ಅಮೃತಮಾಲಾಕ್ಕೆ ಇರಲಿದೆ.
ಇದನ್ನೂ ಓದಿ:ಹಿಂದುಗಳ ಜಾತ್ರೆಯಲ್ಲಿ ಆರೇಂಜ್ ಜ್ಯೂಸ್ ವಿತರಿಸಿದ ಮುಸ್ಲಿಮರು; ಭಾವೈಕ್ಯತೆಗೆ ಸಾಕ್ಷಿಯಾದ ಜನರು
ಅಮೃತಮಾಲಾ ಎಂಬುದು ನಮ್ಮ ರಾಗ ಸಂಗೀತದ ಅನುಪಮ ಲಕ್ಷಣವನ್ನು ಪ್ರದರ್ಶಿಸುವ ಪರಿಕಲ್ಪನೆಯಾಗಿದೆ. ಡಾ.ರವೀಂದ್ರ ಗುರುರಾಜ ಕಾಟೋಟಿಯವರು ಸಮಯ ಚಕ್ರಕ್ಕನುಗುಣವಾಗಿ ಮೂರು ರಾಗ ಮಾಲೆಗಳನ್ನು ರಚಿಸಿ ಸಂಯೋಜಿಸಿದ್ದಾರೆ. ಮೊದಲ ಸಂಯೋಜನೆ ಬೆಳಗಿನ ಸಂಧಿ ಪ್ರಕಾಶದ ಭಟಿಯಾರ್‌ದಿಂದ ಆರಂಭವಾಗಿ ಭೈರವ ಪ್ರಕಾರಗಳು, ತೋಡಿ ಪ್ರಕಾರಗಳನ್ನು ಒಳಗೊಂಡು ಬೆಳಗಿನ ರಾಗಗಳ ಸರಣಿಯನ್ನು ಪ್ರದರ್ಶಿಸುತ್ತದೆ. ಎರಡನೆಯ ರಚನೆಯು ಮಧ್ಯಾಹ್ನದ ಭೀಮ ಪಲಾಸನಿಂದ ಮೊದಲುಗೊಂಡು ರಾತ್ರಿಯ ಪ್ರಥಮ ಪ್ರಹರದ ಯಮನ್ ವರೆಗೆ ಕೊಂಡೊಯ್ಯುತ್ತದೆ. ಕೊನೆಯ ರಚನೆಯು ರಾತ್ರಿಯಿಂದ ಬೆಳಗಿನ ರಾಗದವರೆಗಿನ ಸರಣಿಯನ್ನು ಒಳಗೊಂಡಿದೆ. ಎಲ್ಲಾ ಸೇರಿ ಒಟ್ಟು 75 ರಾಗಗಳ ರಾಗಮಾಲೆ ಇದಾಗಿದೆ.
ಬಿಜಾಪುರೆ ಹಾರ್ಮೋನಿಯಂ ಫೌಂಡೇಷನ್ ಇವರು ಸಪ್ತಕ ಹಾಗೂ ಕಾಮತ್ – ಕಾಮತ್ ಇವರ ಸಹಯೋಗದಲ್ಲಿ ಪ್ರಸ್ತುತಪಡಿಸಲಿದ್ದಾರೆ.
ಇದನ್ನೂ ಓದಿ:ಸಹೋದರಿಯರನ್ನು ವರಿಸಿದ ಯುವಕ; ಕಾರಣ ತಿಳಿದರೆ ವರ ನಿರ್ಧಾರಕ್ಕೆ ನೀವೂ ಮೆಚ್ಚುಗೆ ಸೂಚಿಸುತ್ತೀರಿ!
ಧನಂಜಯ ಹೆಗಡೆ – ಗಾಯನ, ಓಂಕಾರ ಹವಾಲಾರ್ – ಗಾಯನ, ಕೌಶಿಕ ಐತಾಳ – ಗಾಯನಪಂ ರವೀಂದ್ರ ಯಾವಗಲ್- ತಬಲಾ, ಉಸ್ತಾದ್ ರಫಿಕ ಖಾನ್ – ಸಿತಾರ್, ಷಡ್ಜ ಗೋಡ್ಖಿಂಡಿ – ಕೊಳಲುಪರಿಕಲ್ಪನೆ, ರಚನೆ, ಸಂಯೋಜನೆ ಹಾಗೂ ಹಾರ್ಮೋನಿಯಂ ಡಾ.ರವೀಂದ್ರ ಗುರುರಾಜ ಕಾಟೋಟಿ.
ದೇಶದಲ್ಲಿಯೇ ಮೊದಲ ಪ್ರಯತ್ನ ಎನ್ನಬಹುದಾದ ಈ ಅಮೃತ ಮಾಲಾ ಕುರಿತು ಕಾಟೋಟಿ ಅವರು ವಿವರಿಸುವುದು ಹೀಗೆ: ಭಾರತೀಯ ಶಾಸ್ತ್ರೀಯ ಸಂಗೀತವು, ಸೌಂದರ್ಯ ಪ್ರಜ್ಞೆ, ಸೃಜನ ಶೀಲತೆ ಹಾಗೂ ಕಲಾತ್ಮಕತೆಯ ದೃಷ್ಟಿಯಿಂದ ಮಾನವನ ಬುದ್ಧಿ ಹಾಗೂ ಮನಸ್ಸುಗಳ ಪರಿಪಕ್ವತೆಯ ಪ್ರತೀಕವಾಗಿದೆ. ಸಹಸ್ರಾರು ವರ್ಷಗಳ ಪರಂಪರೆಯಿರುವ ನಮ್ಮ ಸಂಗೀತವು ನಿಸರ್ಗ, ಸಂಸ್ಕೃತಿ ಮತ್ತು ಜೀವನ ಪದ್ಧತಿಯೊಂದಿಗೆ ನೇರ ಸಂಪರ್ಕ ಹೊಂದಿದೆ. ಮಾಧುರ್ಯದ ಪರಿಪಾಕದಂತಿರುವ ನಮ್ಮ ಸಂಗೀತಕ್ಕೆ ರಾಗ ಸಂಗೀತವೆಂದೂ ಕರೆಯುತ್ತಾರೆ.
ರಾಗಗಳೆಂದರೆ ಹಲವು ಭಾವಗಳು, ಅನುಭೂತಿಗಳು, ಅಭಿವ್ಯಕ್ತಿಗಳ ಮೇಳ್ಳೆಸುವಿಕೆಯೊಂದಿಗೆ ಹೊಮ್ಮುವ ಮಾಧುರ್ಯದ ವ್ಯಕ್ತಿ ಸ್ವರೂಪ. ರಾಗಗಳು ಋತುಗಳೊಂದಿಗೂ ಅವಿನಾಭಾವ ಸಂಬಂಧವನ್ನು ಹೊಂದಿವೆ. ನಮ್ಮ ಶಾಸ್ತ್ರ ಸಂಪ್ರದಾಯಗಳು ಪ್ರತಿಯೊಂದು ರಾಗದ ಪ್ರಸ್ತುತಿಗೆ ದಿನದ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿವೆ. ಇದನ್ನು ರಾಗದ ಸಮಯ ಚಕ್ರವೆಂದು ಕರೆಯುವರು. ‘ಸಮಯ ಚಕ್ರ’ವು ನಮ್ಮ ಸಂಗೀತ ಸಂಸ್ಕೃತಿಯ ಅತಿ ವಿಶಿಷ್ಟ ಲಕ್ಷಣಗಳಲ್ಲಿ ಒಂದು. ದಿನದ 24 ಗಂಟೆಗಳನ್ನು ಎಂಟು ಪ್ರಹರಗಳಲ್ಲಿ ವಿಭಾಗಿಸಿದ್ದಾರೆ. ಬೆಳಗಿನ – ಸಾಯಂಕಾಲದ ಸಂಧಿಪ್ರಕಾಶ, ದಿನದ – ರಾತ್ರಿಯ ಮೂರು ಪ್ರಹರಗಳು. ಪ್ರತಿ ಪ್ರಹರದಲ್ಲಿ ಪ್ರಸ್ತುತವಾಗುವ ನಿರ್ದಿಷ್ಟ ರಾಗಗಳಿವೆ. ಪ್ರತಿ ರಾಗದ ರಚನೆ, ಸಂವಿಧಾನಗಳು ಆಯಾ ಪ್ರಹರಗಳೊಂದಿಗೆ ತಾರ್ಕಿಕವಾಗಿ ಸಂಬಂಧವನ್ನು ಹೊಂದಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − one =
Remember me
