|ರಾಘವ ಶರ್ಮ ನಿಡ್ಲೆ,ನವದೆಹಲಿ
ಮಹದಾಯಿ ನದಿಯಿಂದ ಮಲಪ್ರಭಾ ನದಿಗೆ ನೀರು ಹರಿಸುವ ಮಹತ್ವಾಕಾಂಕ್ಷಿ ಕಳಸಾ-ಬಂಡೂರಿ ಕಾಲುವೆ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಮೂಲ ಸಮಗ್ರ ಯೋಜನಾ ವರದಿಯಲ್ಲಿ (ಡಿಪಿಆರ್) ಮಹತ್ವದ ಬದಲಾವಣೆಗಳನ್ನು ಮಾಡಿರುವ ರಾಜ್ಯ ಸರ್ಕಾರ, ಪರಿಷ್ಕೃತ ಸಮಗ್ರ ಯೋಜನಾ ವರದಿಯನ್ನು ಕೇಂದ್ರ ಜಲ ಶಕ್ತಿ ಸಚಿವಾಲಯಕ್ಕೆ ಸಲ್ಲಿಸಿದೆ.
ಪರಿಷ್ಕೃತ ಯೋಜನಾ ವರದಿ ಪ್ರಕಾರ, ಪರ್ಯಾಯ ಕಳಸಾ ಏತ ನೀರಾವರಿ ಯೋಜನೆ ಮತ್ತು ಪರ್ಯಾಯ ಬಂಡೂರಾ ಏತ ನೀರಾವರಿ ಯೋಜನೆಗಳನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಒಟ್ಟು 680 ಕೋಟಿ ರೂ. ಹೊರೆ ಕಡಿಮೆಯಾಗಲಿದೆ. ಮೇಲಾಗಿ, ಈ ಎರಡು ಯೋಜನೆಗಳಿಗೆ ಅರಣ್ಯ ಪ್ರದೇಶದ ಬಳಕೆ ಪ್ರಮಾಣವೂ ಗಣನೀಯ ಪ್ರಮಾಣದಲ್ಲಿ ತಗ್ಗಲಿದ್ದು, ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಆಕ್ಷೇಪಣೆಗಳಿಗೂ ಸೂಕ್ತ ಉತ್ತರ ನೀಡಿದಂತಾಗಲಿದೆ ಎಂದು ಉನ್ನತ ಮೂಲಗಳು ವಿಜಯವಾಣಿಗೆ ತಿಳಿಸಿವೆ.
2020ರಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಸಲ್ಲಿಸಿದ್ದ ಡಿಪಿಆರ್​ನಲ್ಲಿ ಕಳಸಾ ಮತ್ತು ಬಂಡೂರಿ ಕಾಲುವೆಗಳನ್ನು ನಿರ್ಮಾಣ ಮಾಡಿ, ಮಹದಾಯಿ ನೀರನ್ನು ಮಲಪ್ರಭಾಕ್ಕೆ ತಿರುಗಿಸುವ ಯೋಜನೆ ಕುರಿತ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಆದರೆ, ಈ ಯೋಜನೆಗಳಿಂದ ವ್ಯಾಪಕ ಪ್ರಮಾಣದ ಅರಣ್ಯ ನಾಶವಾಗುವುದರಿಂದ ಗೋವಾ ಸರ್ಕಾರ ಕೇಂದ್ರ ಮತ್ತು ಸುಪ್ರೀಂಕೋರ್ಟ್ ಮುಂದೆ ವ್ಯಾಪಕ ವಿರೋಧ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ 2 ಯೋಜನೆಗಳ ಮೂಲ ಸ್ವರೂಪವನ್ನೇ ಬದಲಿಸಲು ಮುಂದಾಗಿದೆ. ಪರಿಷ್ಕೃತ ಡಿಪಿಆರ್ ಪ್ರಕಾರ ಕಾಲುವೆ ನಿರ್ವಣದ ಬದಲು ಬೃಹದಾಕಾರದ ಪೈಪ್​ಗಳ ಮೂಲಕ ನದಿ ನೀರನ್ನು ಮಲಪ್ರಭಾಕ್ಕೆ ಹರಿಸಲು ಯೋಜಿಸಲಾಗಿದೆ. ಬಂಡೂರ ಮತ್ತು ಕಳಸಾ ಎರಡೂ ಜಲಾಶಯಗಳ ಎತ್ತರವೂ ತಗ್ಗಲಿದೆ ಎಂದು ಪರಿಷ್ಕೃತ ಡಿಪಿಆರ್​ನಲ್ಲಿ ದಾಖಲಿಸಲಾಗಿದೆ. 2018ರ ಮಹದಾಯಿ ನ್ಯಾಯಾಧಿಕರಣದ ಐತೀರ್ಪಿನ ಅನುಸಾರ ಕೇಂದ್ರ ಜಲ ಆಯೋಗವು ಮಹದಾಯಿ ನದಿಯಿಂದ ಕಳಸಾ ತಿರುವು ಯೋಜನೆ ಮುಖಾಂತರ 1.72 ಟಿಎಂಸಿ ನೀರು ಮತ್ತು ಬಂಡೂರ ತಿರುವು ಯೋಜನೆಯಡಿ 2.18 ಟಿಎಂಸಿ ನೀರನ್ನು ಮಲಪ್ರಾಭಕ್ಕೆ ತಿರುಗಿಸುವ ಕುರಿತಂತೆ ಯೋಜನಾ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿತ್ತು. 2020ರಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಡಿಪಿಆರ್ ಸಲ್ಲಿಸಿತ್ತು.
ಈ 2 ಪರ್ಯಾಯ ಏತ ನೀರಾವರಿ ಯೋಜನೆ ನ್ಯಾಯಮಂಡಳಿ ಐತೀರ್ಪಿಗೆ ಬದ್ಧವಾಗಿದೆ ಎಂದು ರಾಜ್ಯ ತಿಳಿಸಿದೆ. ನ್ಯಾಯಾಧಿಕರಣ ನೀರು ಹಂಚಿಕೆ ವೇಳೆ ಸಿವಿಲ್ ಕಾಮಗಾರಿಗಳ ವಿನ್ಯಾಸಗಳ ಬಗ್ಗೆ ಕರ್ನಾಟಕಕ್ಕೆ ನಿರ್ದಿಷ್ಟ ನಿರ್ದೇಶನಗಳನ್ನೇನೂ ನೀಡಿಲ್ಲ. ಅಣೆಕಟ್ಟುಗಳ ಎತ್ತರ ಅಥವಾ ಅಣೆಕಟ್ಟುಗಳ ಅಡಿಯಲ್ಲಿ ನೀರು ಸಂಗ್ರಹಣೆಯ ವ್ಯಾಪ್ತಿಯನ್ನು ಅಂತಿಮ ಆದೇಶ ಅಥವಾ ವರದಿಯ ಯಾವುದೇ ಭಾಗದಲ್ಲಿ ಉಲ್ಲೇಖಿಸಲಾಗಿಲ್ಲ. ಆದ್ದರಿಂದ ಮಲಪ್ರಭಾ ನದಿಗೆ ಮಹದಾಯಿಯಿಂದ ನೀರು ತಿರುಗಿಸಲು ಬೇಕಿರುವ ಅಗತ್ಯ ಸಂರಚನೆ ಮತ್ತು ಕಾಮಗಾರಿಗಳನ್ನು ವಿನ್ಯಾಸಗೊಳಿಸುವ ಸ್ವಾತಂತ್ರ್ಯ ನಮಗೆ ಇದೆ ಎಂದು ರಾಜ್ಯ ಸರ್ಕಾರ ಸಮರ್ಥಿಸಿಕೊಂಡಿದೆ.
ಪರ್ಯಾಯ ಬಂಡೂರಿ ಏತ ನೀರಾವರಿ ಯೋಜನೆ:ಕೇಂದ್ರ ಜಲ ಆಯೋಗ ಕಳೆದ 2 ವರ್ಷಗಳಿಂದ ಜಲವಿಜ್ಞಾನ, ಅಣೆಕಟ್ಟಿನ ಎತ್ತರ ಇತ್ಯಾದಿ ವಿಷಯಗಳ ಬಗ್ಗೆ ರಾಜ್ಯಕ್ಕೆ ಸಲಹೆಗಳನ್ನು ನೀಡುತ್ತಲೇ ಬಂದಿದೆ. ಇವೆಲ್ಲವನ್ನು ಪರಿಗಣಿಸಿ ಮಹಾದಾಯಿ ಜಲಾನಯನ ಪ್ರದೇಶದಿಂದ ಮಲಪ್ರಭಾ ನದಿಗೆ 2.18 ಟಿಎಂಸಿ ನೀರನ್ನು ವರ್ಗಾಯಿಸಲು ಪರ್ಯಾಯ ಬಂಡೂರಿ ಏತ ನೀರಾವರಿ ಯೋಜನೆ ಸಿದ್ಧಪಡಿಸಲಾಗಿದೆ. ಹಿಂದಿನ ಯೋಜನೆಯಲ್ಲಿ ಬಂಡೂರ ಅಣೆಕಟ್ಟು ನಿರ್ಮಾಣ ಮಾಡಿ, ಹಿನ್ನೀರಿನ ಬಲದಿಂದ ಮಲಪ್ರಭಾ ನದಿಗೆ ನೀರು ತಿರುಗಿಸುವ ಉದ್ದೇಶವಿತ್ತು.
ಆದರೆ, ಪರ್ಯಾಯ ಏತ ನೀರಾವರಿ ಯೋಜನೆಯಡಿ, ಅಣೆಕಟ್ಟಿನ ಎತ್ತರ ಇಳಿಕೆಯಾಗಲಿದ್ದು, ಪೈಪ್ ಸಿಸ್ಟಮ್ ಮೂಲಕ ನೀರು ಹರಿಯಲಿದೆ. ಬಂಡೂರಿ ಯೋಜನೆಗೆ ಹಿಂದಿದ್ದ ಯೋಜನಾ ವೆಚ್ಚ -ಠಿ;791.50 ಕೋಟಿ. ಪರಿಷ್ಕೃತ ಡಿಪಿಆರ್​ನಲ್ಲಿ ಯೋಜನಾ ವೆಚ್ಚ 470 ಕೋಟಿ ರೂ. ಎಂದು ದಾಖಲಿಸಲಾಗಿದೆ. ಅಂದರೆ, 321 ಕೋಟಿ ರೂ. ಉಳಿಯಲಿದೆ. ಮುಖ್ಯವಾಗಿ, ಅರಣ್ಯ ಭೂಮಿ ಬಳಕೆ 183.8 ಹೆಕ್ಟೇರ್​ಗಳಿಂದ 21.62 ಹೆಕ್ಟೇರ್​ಗಳಿಗೆ ಕಡಿಮೆಯಾಗಲಿದ್ದು, ಇದರಿಂದ ಯೋಜನೆ ಕಾರ್ಯಗತಗೊಳಿಸುವುದೂ ಸುಲಭವಾಗಲಿದೆ ಎಂದು ಕೇಂದ್ರಕ್ಕೆ ವಿವರಿಸಲಾಗಿದೆ.
ಅಂಕಿ-ಅಂಶ
ಕಳಸಾದಲ್ಲೂ ಬದಲಾವಣೆ:ಮಹಾದಾಯಿ ನದಿಯಿಂದ ಮಲಪ್ರಭಾಕ್ಕೆ 1.72 ಟಿಎಂಸಿ ನೀರನ್ನು ತಿರುಗಿಸಲೂ ರಾಜ್ಯ ಸರ್ಕಾರ 2020ರಲ್ಲಿ ಯೋಜನೆ ಸಲ್ಲಿಸಿತ್ತು. ಅದರ ಪ್ರಕಾರ ಕಳಸಾ ಅಣೆಕಟ್ಟು ಮತ್ತು ಹಲ್ತಾರಾ ಅಣೆಕಟ್ಟು ನಿರ್ಮಾಣ ಮಾಡಿ, ಹಿನ್ನೀರಿನ ಬಲದಿಂದ ನೀರನ್ನು ತಿರುಗಿಸುವ ವಿವರಣೆ ನೀಡಲಾಗಿತ್ತು. ಪರ್ಯಾಯ ಕಳಸಾ ಏತ ನೀರಾವರಿ ಯೋಜನೆಯಡಿ, ಕಳಸಾ ಅಣೆಕಟ್ಟಿನ ಎತ್ತರವೂ ಕಡಿಮೆಯಾಗಲಿದ್ದು, ಯೋಜನಾ ವೆಚ್ಚ ರೂ 259.80 ಕೋಟಿಯಷ್ಟು ಕಡಿಮೆಯಾಗಲಿದೆ. ಹಿಂದಿನ ಡಿಪಿಆರ್​ನಲ್ಲಿ ಕಳಸಾ ಯೋಜನೆಯ ಅಂದಾಜು ವೆಚ್ಚ ರೂ. 885 ಕೋಟಿ ಎಂದು ತಿಳಿಸಲಾಗಿತ್ತು. ಪರಿಷ್ಕೃತ ಡಿಪಿಆರ್​ನಲ್ಲಿ ಈ ಪ್ರಮಾಣ ರೂ. 626 ಕೋಟಿಗೆ ಇಳಿಯಲಿದೆ. ಅದೇ ರೀತಿ ಅರಣ್ಯ ಭೂಮಿ ಬಳಕೆಯನ್ನು 166.38 ಹೆಕ್ಟೇರ್​ಗಳಿಂದ 37.79 ಹೆಕ್ಟೇರ್​ಗಳಿಗೆ ಕಡಿಮೆ ಮಾಡಲಿದೆ.
ಬಿಜೆಪಿ ಯುವ ಮುಖಂಡನ ಮೇಲೆ ಮಾರಕಾಸ್ತ್ರಗಳಿಂದ ದಾಳಿ; ವಾರದ ಹಿಂದೆ ನಡೆದ ಕೊಲೆ ರಿವೇಂಜ್?
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen + eleven =
Remember me
