|ಪಂಕಜ ಕೆ.ಎಂ ಬೆಂಗಳೂರು
ಕರೊನಾ ಸೋಂಕಿನಿಂದ ಗುಣ ಹೊಂದುತ್ತಿರುವ ಮಕ್ಕಳಲ್ಲಿ ಕೆಲವರಿಗೆ ಮಲ್ಟಿಸಿಸ್ಟಮ್ ಇನ್​ಫ್ಲಮೇಟರಿ ಸಿಂಡ್ರೋಮ್ (ಎಂಐಎಸ್) ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಹೊಸ ತಲೆನೋವು ತಂದಿದೆ. ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಯೊಂದರಲ್ಲೇ ಈಗ ಆರು ಮಕ್ಕಳು ಈ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡನೇ ಅಲೆಯ ತೀವ್ರತೆಯಿಂದಾಗಿ ಕೇವಲ ಎರಡು ತಿಂಗಳ ಅಂತರದಲ್ಲಿ ರಾಜ್ಯದಲ್ಲಿ 9 ವರ್ಷದೊಳಗಿನ 44,304 ಮಕ್ಕಳು ಸೋಂಕಿಗೆ ಒಳಗಾಗಿದ್ದು, 18 ಸಾವು ಸಂಭವಿಸಿದೆ. 10-19 ವಯೋಮಾನದ 1,16,201 ಮಕ್ಕಳಿಗೆ ಸೋಂಕು ತಗುಲಿದ್ದು, 20 ಸಾವು ಸಂಭವಿಸಿದೆ. ಸೋಂಕಿಗೆ ಒಳಗಾಗಿ ಗುಣ ಹೊಂದಿದ ಕೆಲವೇ ದಿನಗಳಲ್ಲಿ ಮಕ್ಕಳಲ್ಲಿ ಇನ್​ಫ್ಲಮೇಟರಿ ಸಿಂಡ್ರೋಮ್ ಕಾಣಿಸಿಕೊಳ್ಳುತ್ತಿದೆ. ಈ ಸಮಸ್ಯೆಯನ್ನು ಆರಂಭದಲ್ಲೇ ಗಮನಿಸಿ ಸೂಕ್ತ ಚಿಕಿತ್ಸೆ ಕೊಡಿಸದಿದ್ದರೆ ಅಂಗಾಂಗಗಳ ಸಮಸ್ಯೆ ಕಾಣಿಸಿಕೊಳ್ಳಲಿದ್ದು, ಚಿಕಿತ್ಸೆ ವಿಳಂಬವಾದರೆ ಮಕ್ಕಳ ಜೀವಕ್ಕೆ ಅಪಾಯ ಎದುರಾಗಬಹುದು ಎನ್ನುತ್ತಾರೆ ಮಕ್ಕಳ ತಜ್ಞರು. ಈಗಾಗಲೇ ಮಹಾರಾಷ್ಟ್ರದಲ್ಲೂ 2-12 ವಯೋಮಾನದ ಕೆಲ ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿರುವುದಾಗಿ ಇಂಡಿಯನ್ ಮೆಡಿಕಲ್ ಅಸೋಷಿಯೇಷನ್​ನ ಮಕ್ಕಳ ತಜ್ಞ ಡಾ. ಸಂಜೀವ್ ಜೋಶಿ ತಿಳಿಸಿದ್ದಾರೆ.
ಅಪಾಯವೇನು?: ಈ ಲಕ್ಷಣಗಳನ್ನು ಪ್ರಾರಂಭದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡದಿದ್ದರೆ ಗಂಭೀರವಾಗುತ್ತದೆ. ಇದರಿಂದ ರಕ್ತನಾಳದಲ್ಲಿ ರಕ್ತ ಹೆಪು್ಪಗಟ್ಟುವುದು, ಹೃದಯ ವೈಫಲ್ಯ, ಕಿಡ್ನಿ ಹಾಗೂ ಲಿವರ್ ವೈಫಲ್ಯ ಸೇರಿ ಅಂಗಾಂಗಗಳಿಗೆ ತೊಂದರೆಯಾಗುತ್ತದೆ. ಸಾವು ಕೂಡ ಸಂಭವಿಸಬಹುದು. ಆದ್ದರಿಂದ ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದರೆ ತಡೆ ಮಾಡದೆ ಚಿಕಿತ್ಸೆ ಕೊಡಿಸಬೇಕು ಎನ್ನುತ್ತಾರೆ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ನಿಜಗುಣ.
ಕೋಟ್
ಕೋವಿಡ್​ನಿಂದ ಗುಣಹೊಂದಿದ ಮಕ್ಕಳಲ್ಲಿ ಕಾಣಿಸುವ ರೋಗ ಲಕ್ಷಣ ಆಧರಿಸಿ ಅಂಗಾಂಗಗಳ ಕಾರ್ಯಕ್ಷಮತೆ ಕುರಿತು ಕೆಲ ರಕ್ತಪರೀಕ್ಷೆಗಳನ್ನು ನಡೆಸಿ ಮಲ್ಟಿಸಿಸ್ಟಮ್ ಇನ್​ಫ್ಲಮೇಟರಿ ಸಿಂಡ್ರೋಮ್ ಪತ್ತೆಹಚ್ಚಲಾಗುತ್ತದೆ. ಆರಂಭದಲ್ಲೇ ಚಿಕಿತ್ಸೆ ಕೊಡಿಸಿದರೆ ಗುಣಪಡಿಸಬಹುದು.
|ಡಾ. ನಿಜಗುಣ ಮಕ್ಕಳ ತಜ್ಞ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ
ರೋಗ ಲಕ್ಷಣಗಳು
ಕರೊನಾ ಸೋಂಕಿನಿಂದ ಗುಣ ಹೊಂದಿದ ಒಂದು ವಾರದೊಳಗೆ ಮತ್ತೆ ಜ್ವರ ಕಾಣಿಸಿಕೊ ಳ್ಳುವುದು ಪ್ರಮುಖ ಲಕ್ಷಣ. ಹೊಟ್ಟೆನೋವು, ತ್ವಚೆ ಹಾಗೂ ಉಗುರಿನ ಬಣ್ಣದಲ್ಲಿ ವ್ಯತ್ಯಾಸ, ತೀವ್ರ ಆಯಾಸ, ತುಟಿ ಮತ್ತು ನಾಲಗೆಯಲ್ಲಿ ಊತ, ಪಾದಗಳಲ್ಲಿ ಊತ, ತಲೆನೋವು, ವಾಂತಿ, ಭೇದಿ ಇತರ ಲಕ್ಷಣಗಳು.
ಸಮಸ್ಯೆಗೆ ಕಾರಣಗಳೇನು?
ಕರೊನಾ ಸೋಂಕು ತಗುಲಿದಾಗ ವೈರಾಣು ವಿರುದ್ಧ ಹೋರಾಟ ನಡೆಸಲು ದೇಹದಲ್ಲಿ ಆಂಟಿಬಾಡೀಸ್ (ರೋಗನಿರೋಧಕ ಶಕ್ತಿ) ಉತ್ಪತ್ತಿಯಾಗುತ್ತವೆ. ಅವು ವೈರಾಣುವನ್ನು ಹೊರಹಾಕುತ್ತವೆ. ಆದರೆ ಈ ಆಂಟಿಬಾಡೀಸ್ ಹಾಗೂ ಅವುಗಳ ಜತೆಗೆ ಉತ್ಪತ್ತಿಯಾಗುವ ಕೆಲ ರಾಸಾಯನಿಕ ಅಂಶಗಳು ನಂತರದಲ್ಲಿ ದೇಹದಲ್ಲಿರುವ ಇತರೆ ಅಂಗಾಂಗಗಳಿಗೆ ತೊಂದರೆ ನೀಡಲು ಆರಂಭಿಸುತ್ತವೆ.

ಮಕ್ಕಳ ಬಗ್ಗೆ ಕಾಳಜಿ ಹೀಗಿರಲಿ
– ಮಕ್ಕಳಲ್ಲಿ ರೋಗಲಕ್ಷಣಗಳು ಕಂಡು ಬಂದರೆ ಕೂಡಲೇ ಡಿಜಿಟಲ್ ಥರ್ವಮೀಟರ್​ನಿಂದ ಪರೀಕ್ಷಿಸಬೇಕು.
– ಪಲ್ಸ್ ಆಕ್ಸಿಮೀಟರ್​ನಿಂದ ದೇಹದಲ್ಲಿನ ಆಮ್ಲಜನಕ ಪ್ರಮಾಣ ಪರೀಕ್ಷಿಸಬೇಕು.
– ಮಗುವಿಗೆ ಹೆಚ್ಚಿನ ಜ್ವರ, ಮೈಮೇಲೆ ದದ್ದುಗಳು, ಹೊಟ್ಟೆನೋವು, ಭೇದಿ, ವಾಂತಿ, ಕೈ ಮತ್ತು ಕಾಲುಗಳು ತಣ್ಣಗಾದರೆ ಕೂಡಲೇ ವೈದ್ಯರನ್ನು ಸಂರ್ಪಸಬೇಕು.
– ಕೋವಿಡ್​ನಿಂದ ಗುಣ ಹೊಂದಿದ ನಂತರವೂ ಅವರ ಆರೋಗ್ಯದ ಬಗ್ಗೆ ಸೂಕ್ಷ್ಮವಾಗಿ ಎಚ್ಚರಿಕೆ ವಹಿಸಬೇಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + nineteen =
Remember me
