ಬೆಂಗಳೂರು:ಹೊಸ ಕರೊನಾ ಪ್ರಕರಣಗಳು ರಾಜ್ಯದಲ್ಲಿ ಅಂಕೆಗೆ ಸಿಗುವಂತೆಯೇ ಕಾಣುತ್ತಿಲ್ಲ. ನಾಲ್ಕು ಸಾವಿರ ದಾಟಿದಾಗ ಅಬ್ಬಾ…!ಎನ್ನುವಷ್ಟರಲ್ಲಿಯೇ, ನಿತ್ಯ ಆರು ಸಾವಿರ ಕೇಸ್​ಗಳು ಸಾಮಾನ್ಯವೆನಿಸಿದವು. ಈಗ ಎರಡನೇ ಬಾರಿ ಏಳು ಸಾವಿರ ಪ್ರಕರಣಗಳು ವರದಿಯಾಗಿವೆ.
ಕಳೆದ 24 ತಾಸುಗಳಲ್ಲಿ ಪತ್ತೆಯಾದ ಹೊಸ ಸಕೇಸ್​ಗಳ ಸಂಖ್ಯೆ ಇದೇ ಮೊದಲ ಬಾರಿಗೆ 7,908ಕ್ಕೆ ತಲುಪಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2,11,108 ಆಗಿದೆ. ಜತೆಗೆ ಸಾವಿನ ಸಂಖ್ಯೆ ಕೂಡ ಶತಕ ದಾಟಿದ್ದು, ಇಂದು ಒಟ್ಟು 104 ಸಾವುಗಳು ಸಂಭವಿಸಿವೆ. ಒಟ್ಟಾರೆ ಸಾವಿನ ಪ್ರಮಾಣ 3,717 ಆಗಿದೆ.
ಇದನ್ನೂ ಓದಿ;ವಾರದಲ್ಲಿ ಎರಡು ಸಾವಿರ ಹೆಚ್ಚುವರಿ ವೈದ್ಯರು ಕೊವಿಡ್ ಚಿಕಿತ್ಸೆಗೆ ಲಭ್ಯ; ಸಚಿವ ಸುಧಾಕರ್ ಮಾಹಿತಿ
ಇನ್ನೊಂದೆಡೆ, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದ್ದು, 80,883 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಅಥವಾ ಹೋಮ್​ ಐಸೋಲೇಷನ್​ನಲ್ಲಿ ಇದ್ದಾರೆ. ಒಟ್ಟು 5,257 ಜನರು ಗುಣಮುಖರಾಗಿ ಆಸ್ಪತ್ಯೆಇಂದ ಬಿಡುಗಡೆಯಾಗಿದ್ದಾರೆ. ಈ ಪ್ರಮಾಣ ಶೇ.59.92 ಆಗಿದೆ.
ಬೆಂಗಳೂರಿನಲ್ಲಿ ಒಟ್ಟು 2,452 ಜನರು ಸೋಂಕಿಗೆ ಒಳಗಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 84,185ಕ್ಕೆ ತಲುಪಿದೆ. ಇಂದು ಕೇವವಲ 463 ಜನರಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜಧಾನಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ35,117ಕ್ಕೆ ಏರಿಕೆಯಾಗಿದೆ. ಒಟ್ಟು 22 ಜನರು ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 1,360ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಚೇತರಿಕೆ ಪ್ರಮಾಣ ಶೇ.5667 ಆಗಿದ್ದರೆ, ಸಾವಿನ ಪ್ರತಿಶತ ಶೇ.162 ಆಗಿದೆ.
ಜಿಲ್ಲಾವಾರು ಕೋವಿಡ್​ ಪ್ರಕರಣಗಳ ವಿವರ

ಕೇಂದ್ರ ಸರ್ಕಾರವೇ ವಿತರಿಸಲಿದೆ ಕರೊನಾ ಲಸಿಕೆ; ಸಾರ್ವಜನಿಕರಿಗೆ ಬೇಕಿಲ್ಲ ಆತಂಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − six =
Remember me
