ಚಿಕ್ಕಮಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಂಪುಟದಲ್ಲಿ ಗೃಹಸಚಿವರಾಗಿ ಇಂದು ಖಾತೆಯನ್ನು ವಹಿಸಿಕೊಂಡಿರುವ ಆರಗ ಜ್ಞಾನೇಂದ್ರ ಅವರು, ಇದು ನರೇಂದ್ರ ಮೋದಿಯವರ ಜಮಾನ ಎಂದು ಗುಡುಗಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಈ ಅನಿಸಿಕೆ ಹೇಳಿಕೊಂಡಿದ್ದಾರೆ. ಮಾತ್ರವಲ್ಲ, ಖಾತೆ ಹಂಚಿಕೆ ಕುರಿತ ಅಸಮಾಧಾನದ ಕುರಿತು ಕೂಡ ಪ್ರತಿಕ್ರಿಯಿಸಿದ್ದಾರೆ. ಎಲ್ಲರ ಆಪೇಕ್ಷೆಯಂತೆ ಖಾತೆ ಹಂಚಲು ಸಾಧ್ಯವಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿಯವರು ಗಮನಕೊಟ್ಟು, ಸಮಸ್ಯೆ ಬಗೆಹರಿಸುತ್ತಾರೆ ಎಂದು ಸಮಜಾಯಿಷಿ ನೀಡಿದ್ದಾರೆ.
ಇನ್ನು ರಾಜ್ಯದಲ್ಲಿನ ಉಗ್ರ ಚಟುವಟಿಕೆ ಹಿನ್ನೆಲೆಯಲ್ಲಿ ಎನ್​ಐಎ ದಾಳಿ ಕುರಿತು ಪ್ರತಿಕ್ರಿಯಿಸಿರುವ ಅವರು, ಸೆಟಲೈಟ್ ಕಾಲ್ ಎಲ್ಲಿಂದ ಬಂದರೂ ಎನ್ಐಎ ತಂಡದವರು ಬಂದು ಪ್ರಕರಣವನ್ನು ಭೇದಿಸುತ್ತಾರೆ. ಮೊದಲು ಈ ರೀತಿ ಆಗುತ್ತಿರಲಿಲ್ಲ, ಈಗ ಎಲ್ಲ ಬದಲಾಗಿದೆ. ಎಲ್ಲ ತಂತ್ರ ಮುಗಿಸುವಂಥ ಕಾರ್ಯ ಆಗುತ್ತದೆ. ಪೊಲೀಸರನ್ನು ಇನ್ನಷ್ಟು ಅಲರ್ಟ್ ಮಾಡುತ್ತೇವೆ. ಯಾವುದೇ ವಿಧ್ವಂಸಕ ಕೃತ್ಯ ನಡೆಯಲು ಬಿಡುವುದಿಲ್ಲ ಎಂಬ ಅಭಯವನ್ನೂ ನೀಡಿದ್ದಾರೆ.
ಇದನ್ನೂ ಓದಿ:ಸಾವಿಗೆ ವೈದ್ಯರೇ ಕಾರಣ, ಅವರನ್ನು ಬಂಧಿಸಿ; ಹೆರಿಗೆ ವೇಳೆ ಸತ್ತ ಗರ್ಭಿಣಿಯ ಸಂಬಂಧಿಕರ ಆಗ್ರಹ
ಭಟ್ಕಳ ಪ್ರಕರಣ ಸರ್ಕಾರಕ್ಕೆ ಗೊತ್ತಾಗಿದೆ. ಸರ್ಕಾರ ಯಾರನ್ನೂ ಬಿಡುವುದಿಲ್ಲ. ಎಲ್ಲಿಂದಲೋ ಬಂದು ನಮ್ಮ ನಡುವೆಯೇ ಇದ್ದು ಬಾಂಬ್ ಹಾಕುವ ಕಾಲ ಮುಗಿದಿದೆ. ಇದು ನರೇಂದ್ರ ಮೋದಿಯವರ ಜಮಾನ, ಪೊಲೀಸರು ಪ್ರಕರಣವನ್ನು ಅಂತಿಮ ಹಂತಕ್ಕೆ ತೆಗೆದುಕೊಂಡು ಹೋಗಿ ಮುಟ್ಟಿಸುತ್ತಾರೆ ಎಂದು ನೂತನ ಗೃಹಸಚಿವರು ತಿಳಿಸಿದ್ದಾರೆ.
ಕೃಷಿ ಹೊಂಡಕ್ಕೆ ಎರಡು ಜೀವ ಬಲಿ; 4 ಮತ್ತು 6ನೇ ತರಗತಿ ವಿದ್ಯಾರ್ಥಿಗಳಿಬ್ಬರ ಸಾವು

ನಮಗದು ಚಿನ್ನಕ್ಕಿಂತಲೂ ಹೆಚ್ಚು; ಒಲಿಂಪಿಕ್ಸ್​ ಕುಸ್ತಿಯಲ್ಲಿ ಬೆಳ್ಳಿ ಗೆದ್ದ ರವಿಯ ಗ್ರಾಮಸ್ಥರು ಹೀಗಂದಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
